ಗಂಗಾವತಿ: ಕೃಷಿ ಆಧಾರಿತ ಪ್ರದೇಶದಲ್ಲಿ ನೀರು ಪ್ರಾಮುಖ್ಯವಾಗಿದ್ದು, ಅಗತ್ಯಕ್ಕೆ ತಕ್ಕಂತೆ ನೀರು ಬಳಸಿ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಇದನ್ನೂ ಓದಿ: ಜನಾರ್ದನ ರೆಡ್ಡಿ ಜನರ ಕ್ಷಮೆ ಕೇಳಲಿ
ತಾಲೂಕಿನ ಸಂಗಾಪುರದಲ್ಲಿ ನೀರು ಬಳಕೆದಾರರ ಸಹಕಾರ ಸಂಘದ ಹೊಸ ಕಟ್ಟಡ ಗುರುವಾರ ಉದ್ಘಾಟಿಸಿ ಮಾತನಾಡಿದರು. ರೈತರ ಜೀವನಾಡಿಯಾದ ವಿಜಯನಗರ ಕಾಲುವೆಗಳ ನಿರ್ವಹಣೆಗೆ ಆದ್ಯತೆ ನೀಡಲಾಗುತ್ತಿದ್ದು, ಸಹಕಾರ ಸಂಘಗಳ ಉತ್ತೇಜನಕ್ಕೆ ಸಹಕರಿಸಲಾಗುವುದು. ನೀರಾವರಿ ಇಲಾಖೆ ಯೋಜನೆ ಸದ್ಬಳಕೆಗೆ ರೈತರು ಆಸಕ್ತಿವಹಿಸಬೇಕಿದ್ದು, ಒಗ್ಗಟ್ಟಿನಿಂದ ಅನುಷ್ಠಾನಗೊಳಿಸುವಂತೆ ಸಲಹೆ ನೀಡಿದರು.
ಜಿಪಂ ಮಾಜಿ ಸದಸ್ಯ ಎಚ್.ಎಂ.ಸಿದ್ರಾಮಯ್ಯಸ್ವಾಮಿ ಮಾತನಾಡಿ, ವಿಎನ್‌ಸಿಗಳ ಅಧುನೀಕರಣದ ಯೋಜನೆ ಮಾಜಿ ಸಚಿವ ಶ್ರೀರಂಗದೇವರಾಯಲು ಕನಸಾಗಿದ್ದು, ರೈತ ಪರ ಕಾಳಜಿ ಹೊಂದಿದ್ದರು. ಹಲವು ವರ್ಷಗಳ ನಂತರ ಸಾಕಾರಗೊಳ್ಳುತ್ತಿರುವುದು ರೈತರ ಸೌಭಾಗ್ಯ. ಕಟ್ಟಡ ನಿರ್ಮಾಣಕ್ಕೆ ರೈತರು, ರಾಜಕೀಯ ಮುಖಂಡರು ಮತ್ತು ಅಧಿಕಾರಿಗಳು ಸಹಕರಿಸಿದ್ದಾರೆ ಎಂದರು.
ತುಂಗಭದ್ರಾ ಜಲಾಶಯ ಮತ್ತು ಕಾಲುವೆ ಸ್ಥಿತಿಗತಿ ಕುರಿತು ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ ಮಾತನಾಡಿದರು. ಮಾಜಿ ಸಂಸದ ಎಸ್.ಶಿವರಾಮನಗೌಡ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಡಿಸಿಸಿ ಮಾಜಿ ಅಧ್ಯಕ್ಷೆ ಲಲಿತಾರಾಣಿರಾಯಲು, ಗ್ರಾಪಂ ಅಧ್ಯಕ್ಷೆ ಮಂಜಮ್ಮ ಲೋಕೇಶ, ನೀರು ಬಳಕೆದಾರರ ಸಂಘದ ಅಧ್ಯಕ್ಷ ಈ.ಮಲ್ಲಿಕಾರ್ಜುನ, ಸದಸ್ಯರಾದ ಎಚ್.ಎಂ.ಘನಮಠಸ್ವಾಮಿ, ಜೆ.ನಾಗರಾಜ್, ಇಂಜಿನಿಯರ್ ದೊರೈಸ್ವಾಮಿ, ಮುಖಂಡರಾದ ವೀರೇಶ, ಚನ್ನಪ್ಪ ಮಳಗಿ ಇತರರಿದ್ದರು.