More

    PHOTOS| ಈ ಪುಟ್ಟ ಬಾಲಕಿ ಬಾಲಿವುಡ್​​ನ ಮೋಸ್ಟ್​ ಬ್ಯೂಟಿಫುಲ್​ ಆ್ಯಂಡ್​ ಹಾಟ್​ ಬೆಡಗಿ: ಯಾರೆಂದು ಗುರುತಿಸುವಿರಾ?

    ನವದೆಹಲಿ: ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ ಸಾರಾ ಅಲಿ ಖಾನ್​ ಆಗಾಗ ತಮ್ಮ ಹಳೆಯ ದಿನಗಳನ್ನು ಮೆಲಕು ಹಾಕುತ್ತಾ ಅದಕ್ಕೆ ಸಂಬಂಧಪಟ್ಟ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ತಾವು ಬಾಲಕಿಯಾಗಿದ್ದಾಗ ಮುದ್ದು ಮುದ್ದಾಗಿ ಕ್ಯಾಮರಾಗೆ ಕಣ್ಣಿನಲ್ಲಿ ಸೆರೆಯಾಗಿದ್ದ ಫೋಟೋವನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದು, ಫೋಟೋ ವೈರಲ್​ ಆಗಿದೆ.

    ಸಾರಾ ಅವರು ತಮ್ಮ ಚೈಲ್ಡ್​ಹುಡ್​ ಆಲ್ಬಮ್​ನಿಂದ ಸದ್ಯ ಇನ್​ಸ್ಟಾಗ್ರಾಂನಲ್ಲಿ ಮತ್ತೊಂದು ಫೋಟೋವನ್ನು ಹರಿಬಿಟ್ಟಿದ್ದಾರೆ. ಗುಲಾಬಿ​ ಬಣ್ಣದ ತುಂಡುಡುಗೆ ಧರಿಸಿ, ದೊಡ್ಡ ಕ್ಯಾಮರಾವನ್ನು ಹಿಡಿದು ಫೋಸ್​ ನೀಡಿದ್ದಾರೆ. ಫೋಟೋ ಹಿಂದೆ ಸಂಜೆ ಸೂರ್ಯನ ಬಿಸಿಲಿನ ಬ್ಯಾಕ್​ಗ್ರೌಂಡ್​ ಇದೆ. ಇದಕ್ಕೆ ಹಲವು ಸೂರ್ಯನಿಗಾಗಿ, ಸೂರ್ಯನನ್ನು ಪ್ರೀತಿಸಿದೆ ಎಂದು ಸಾರಾ ಅಡಿಬರಹ ಬರೆದುಕೊಂಡಿದ್ದಾರೆ.

    ಜಾಲತಾಣದಲ್ಲಿ ಸಂಚಲನ ಸೃಷ್ಟಿರುವ ಫೋಟೊ ಅಪ್​ಲೋಡ್​ ಮಾಡಿದ ಕೇವಲ 18 ಗಂಟೆಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ನೆಚ್ಚನ ನಟಿಯ ಬಾಲ್ಯದ ಅವತಾರ ಕಂಡು ಅಭಿಮಾನಿಗಳು ಅಭಿಪ್ರಾಯಗಳ ಸುರಿಮಳೆಗೈಯುತ್ತಿದ್ದಾರೆ.

    ಇದೇ ಮೊದಲೇನಲ್ಲ. ಈ ಹಿಂದೆ 2000ನೇ ಇಸವಿಯ ಬಾಲ್ಯದ ಫೋಟೋವೊಂದನ್ನು ಹರಿಬಿಟ್ಟಿದ್ದರು. ಅಂದಿನಿಂದ ಶೂಟಿಂಗ್​ಗಾಗಿ ಕಾಯುತ್ತಿದ್ದೇನೆ ಎಂದು ಸಾರಾ ಬರೆದುಕೊಂಡಿದ್ದರು, ಸಾಂಪ್ರದಾಯಿಕ ಉಡುಗೆಯಾಗಿರುವ ಲೆಹಂಗಾ-ಚೋಲಿ ಧರಿಸಿ, ತಲೆಯ ಮೇಲೆ ದುಪ್ಪಟ್ಟ ಹೊದ್ದುಕೊಂಡು ಸಾರಾ ಮುದ್ದು ಮುದ್ದಾಗಿ ಪೋಸ್​ ನೀಡಿದ ಫೋಟೋ ಆಗಿತ್ತು. ನನ್ನ ಸಮಯ ಬಂತು ಹಾಗೂ ಸಾರಾ ಕಾ ಡ್ರಾಮಾ ಎಂದು ಹ್ಯಾಷ್​​ಟ್ಯಾಗ್​ ಹಾಕಿ ಫೋಟೋವನ್ನು ಸಾರಾ ಶೇರ್​ ಮಾಡಿಕೊಂಡಿದ್ದರು.

    ಅಂದಹಾಗೆ ಇತ್ತೀಚೆಗಷ್ಟೇ ಸಾರಾ ಮಾಲ್ಡಿವ್ಸ್​ ಪ್ರವಾಸ ಮುಗಿಸಿ ಬಂದಿದ್ದಾರೆ. ಈ ವೇಳೆ ತೆಗೆದ ಸಾಕಷ್ಟು ಬೋಲ್ಡ್​ ಫೋಟೋಗಳನ್ನು ಸಾರಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡು ಅಭಿಮಾನಿಗಳಿಗೆ ಸರ್ಪ್ರೈಸ್​ ನೀಡಿದ್ದರು.

    ಸಾರಾ ಅಲಿ ಖಾನ್​, ನಟ ಸೈಫ್​ ಅಲಿಖಾನ್​ ಅವರ ಮೊದಲ ಪತ್ನಿ ಅಮೃತ ಸಿಂಗ್​ ಮಗಳಾಗಿದ್ದು, ತಂದೆ ಸೈಫ್​ ಜತೆಯಲ್ಲಿಯೂ ಸಂಪರ್ಕದಲ್ಲಿದ್ದಾರೆ. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಸದ್ಯ ಲವ್​ ಆಜ್​ ಕಲ್ ಸೀಕ್ವೆಲ್​ ಚಿತ್ರವನ್ನು ಸಾರಾ ಮುಗಿಸಿದ್ದು, ವರುಣ್​ ಧವನ್​ ಅಭಿನಯದ ಕೂಲಿ ನಂ.1 ಚಿತ್ರದ ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts