Rashmika Mandanna: ಕೊಡಗಿನ ಬೆಡಗಿ, ‘ಕಿರಿಕ್ ಪಾರ್ಟಿ’ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಸದ್ಯ ಸೌತ್ ಸಿನಿಮಾಗಳ ಚಿತ್ರೀಕರಣದಲ್ಲಿ ಸಖತ್ ಬಿಜಿಯಾಗಿದ್ದಾರೆ. ಸ್ಟಾರ್ ನಟರ ಸಾಲು ಸಾಲು ಸಿನಿಮಾಗಳಿಗೆ ನಾಯಕಿಯಾಗಿ ಮಿಂಚುತ್ತಿರುವ ರಶ್ಮಿಕಾ, ಸ್ಯಾಂಡಲ್ವುಡ್, ಟಾಲಿವುಡ್ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇತ್ತೀಚೆಗಷ್ಟೇ ರಣಬೀರ್ ಕಪೂರ್ ಅಭಿನಯದ ‘ಅನಿಮಲ್’ ಚಿತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಬಾಲಿವುಡ್ ಅಂಗಳಕ್ಕೂ ಕಾಲಿಟ್ಟ ಚೆಲುವೆ, ಸದ್ಯ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿದ್ದಾರೆ.
ಇದನ್ನೂ ಓದಿ: ಅಲ್ಲು ಅರ್ಜುನ್ ಜತೆ ಸೊಂಟ ಬಳುಕಿಸಿರೋ ಈ ಬ್ಯೂಟಿ ಯಾರು ಗೊತ್ತಾ? ಈಕೆಯ ಟ್ಯಾಲೆಂಟ್ ಕೇಳಿದ್ರೆ ಬೆರಗಾಗ್ತೀರಿ! Allu Arjun
ಈಗ ಬಾಲಿವುಡ್ನಲ್ಲಿ ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣದ ಹಾಗೂ ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ‘ಸಿಕಂದರ್’ ಚಿತ್ರಕ್ಕೆ ನಾಯಕಿಯಾಗಿ ಮುಖ್ಯಭೂಮಿಕೆಯಲ್ಲಿರುವ ರಶ್ಮಿಕಾ, ಎರಡನೇ ಹಿಂದಿ ಚಿತ್ರದಲ್ಲಿ ನಟಿಸುತ್ತಿರುವುದು ಗಮನಾರ್ಹ. ಈ ಸಿನಿಮಾ ಮುಂದಿನ ವರ್ಷ ಈದ್ ಮಿಲಾದ್ ಹಬ್ಬದಂದು ರಿಲೀಸ್ ಆಗಲು ಸಜ್ಜಾಗಿದೆ. ಇತ್ತೀಗಷ್ಟೇ ಬಿಡುಗಡೆಯಾದ ಟೀಸರ್ ಈಗಾಗಲೇ ನಟನ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದು, ಚಿತ್ರದ ಮೇಲೆ ನಿರೀಕ್ಷೆಗಳನ್ನು ಹೆಚ್ಚಿಸಿದೆ.
ಕಳೆದ ಕೆಲವು ವರ್ಷಗಳಿಂದ ನಿರ್ಮಾಪಕ ಸಾಜಿದ್ ಕೈಗೆತ್ತಿಕೊಂಡ ಪ್ರಾಜೆಕ್ಟ್ಗಳು ಸತತ ಸೋಲನ್ನು ಕಂಡಿದ್ದೇ ಆದರೂ ಸಿಕಂದರ್ ಸಿನಿಮಾ ಯಶಸ್ಸು ಕಾಣುವ ಭರವಸೆಯನ್ನು ನೀಡಿದೆ. ಸರಣಿ ವಿಫಲಗಳಿಂದ ಕಂಗಾಲಾಗಿರುವ ನಿರ್ಮಾಪಕರಿಗೆ ಈ ಆ್ಯಕ್ಷನ್, ಡ್ರಾಮಾ ಜಾನರ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಗೆಲ್ಲಲೇಬೇಕಿದೆ. ಚಿತ್ರದ ಗೆಲುವು, ಜನಪ್ರಿಯತೆ ನಿರ್ಮಾಪಕರಿಗೆ ಬಹಳ ಮುಖ್ಯವಾಗಿದೆ. ಫ್ಲಾಪ್ಗಳನ್ನೇ ನೋಡಿರುವ ಸಾಜಿದ್ ಹಾಗೂ ಸಲ್ಮಾನ್ ಖಾನ್ ಚಿತ್ರದಲ್ಲಿ ಗೆಲುವಿನ ಉತ್ತುಂಗದಲ್ಲಿರುವ ರಶ್ಮಿಕಾ ಇರುವುದು ಗೆಲುವಿನ ಭರವಸೆಯನ್ನು ದುಪ್ಪಟ್ಟಾಗಿಸಿದೆ.
ಇದನ್ನೂ ಓದಿ: ನೀವು ತಿಂದಿದ್ದು ಬೇಗ ಜೀರ್ಣವಾಗಬೇಕಾ? ತಪ್ಪದೇ ಈ ಹಣ್ಣುಗಳನ್ನು ತಿನ್ನಿ, ಇಲ್ಲಿದೆ ಉಪಯುಕ್ತ ಮಾಹಿತಿ… | Digestion Process
ರಶ್ಮಿಕಾ ಅಭಿನಯ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಲ್ಮಾನ್ ಚಿತ್ರದ ಯಶಸ್ಸಿಗೆ ಕಾರಣವಾಗಬಹುದೇ ಎಂಬ ಲೆಕ್ಕಾಚಾರಗಳು ಮೂಡಿವೆ. ನಿರ್ಮಾಪಕ ಸಾಜಿದ್ ಹಾಗೂ ಸಲ್ಮಾನ್ ಖಾನ್ ಸಿನಿಮಾಗೆ ಗೆಲುವು ಸಿಗಲಿದೆಯೇ? ಪ್ರೇಕ್ಷಕರು ಚಿತ್ರವನ್ನು ಮೆಚ್ಚಿ, ಒಪ್ಪಿಕೊಳ್ಳಲಿದ್ದಾರೆಯೇ ಎಂಬುದನ್ನು ಸಿನಿಮಾ ರಿಲೀಸ್ ಆದ ಬಳಿಕ ಪ್ರೇಕ್ಷಕರು ಕೊಡುವ ವಿಮರ್ಶೆ, ಪ್ರತಿಕ್ರಿಯೆಗಳ ಮೂಲಕ ತಿಳಿದುಕೊಳ್ಳಬೇಕಿದೆ,(ಏಜೆನ್ಸೀಸ್).