ಕ್ಯಾಂಪಸ್​ ಸೆಲ್ಫಿ; ಇದು ನಿಮ್ಮ ಕಾಲಂ

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳುಹಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ಅಧ್ಯಯನಶೀಲರು….

ಕ್ಯಾಂಪಸ್​ನಲ್ಲಿದ್ದಾಗಲೂ ಇಷ್ಟೊಂದು ಪುಸ್ತಕ ಪ್ರೀತಿ ತೋರಿಸ್ತೀದಾರೆ ಅಂದ್ರೆ ಎಕ್ಸಾಂ ಟೈಮ್ ಅನ್ನೋದು ಪಕ್ಕಾ.. ಟೆಕ್ಸ್ಟ್ಬುಕ್ ಹಂಚ್ಕೋಳ್ಳೋಕೂ ಇದಕ್ಕಿಂತ ಉತ್ತಮ ಸಂದರ್ಭ ಇನ್ನೇಲ್ಲಿದೆ ಅಲ್ವಾ..? ಇವರೆಲ್ಲ ಈಸ್ಟ್ ವೆಸ್ಟ್ ಕಾಲೇಜ್ ಆಫ್ ಮ್ಯಾನೇಜ್​ವೆುಂಟ್​ನ ಎಂಕಾಂ ವಿದ್ಯಾರ್ಥಿನಿ ವಿದ್ಯಾ ಜತೆಗಿರುವ ಅಧ್ಯಯನಶೀಲರು..!

ಓರಗೆಯ ಆಪ್ತಭಾವ

ಓರಗೆಯವರು ಎಂದಾಗ ಅವರ ಅಭಿರುಚಿಗಳು ಒಂದಾಗಿದ್ದರೆ ಮಾತ್ರ ಆಪ್ತತೆ ಬೆಳೆಯುತ್ತದೆ. ಅಂಥ ಆಪ್ತತೆಗೊಂದು ನಿದರ್ಶನವಾಗಿದ್ದೇವೆ ಎಂಬ ಭಾವದಲ್ಲಿದ್ದಾರೆ ಮಾಗಡಿ ಮುಖ್ಯರಸ್ತೆಯ ಶಾರದಾ ಪದವಿ ಕಾಲೇಜಿನ ಎನ್. ಶಶಾಂಕ್ ಮತ್ತು ಗೆಳೆಯರು.

ಸಂತಸದ ಗುಂಪು

ಕಾಲೇಜಿಗಿಂತ ಹೊರಗಿನ ಚಟುವಟಿಕೆಗಳೇ ಕೆಲವೊಮ್ಮೆ ಹೆಚ್ಚು ಆಪ್ತವಾಗುತ್ತವೆ. ಅದರಲ್ಲೂ ಗುಂಪು ಗುಂಪಾಗಿ ತೆರಳುವುದೆಂದರೆ ಎಲ್ಲಿಲ್ಲದ ಸಂಭ್ರಮ. ಅಂಥ ಸಂಭ್ರಮಕ್ಕೆ ಅಣಿಯಾದಂತಿರುವ ಗುಂಪಿದು. ಚಿತ್ರ ಕಳುಹಿಸಿದವರು ಮಲ್ಲೇಶ್ವರ ಪದವಿ ಕಾಲೇಜಿನ ಅಂತಿಮ ವರ್ಷದ ಬಿಎ ವಿದ್ಯಾರ್ಥಿ ರಾಕೇಶ್ ಗೌಡ.