Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಕ್ಯಾಂಪಸ್​ ಸೆಲ್ಫಿ ಇದು ನಿಮ್ಮ ಕಾಲಂ

Friday, 08.06.2018, 3:02 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳುಹಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ

ಮಾಹಿತಿ ಕಡ್ಡಾಯ.

ಹಕ್ಕು ಮಂಡನೆ!

ವಿಶ್ವ ಪರಿಸರ ದಿನದಂದು ಪ್ರತಿಯೊಬ್ಬ ವಿದ್ಯಾರ್ಥಿಗಳೂ ಒಂದೊಂದು ಗಿಡ ನೆಡಬಹುದು. ಆದರೆ, ಎಲ್ಲರಿಗೂ ಕಾಲೇಜಿನ ಆವರಣದಲ್ಲಿ ಜಾಗ ಸಿಗಬೇಕಲ್ಲ? ಹೀಗಾಗಿ ಒಂದೇ ಗಿಡದ ಮೇಲೆ ಹಲವಾರು ಮಂದಿ ಹಕ್ಕು ಮಂಡಿಸುತ್ತ ಪೋಸ್ ಕೊಟ್ಟಿದ್ದಾರೆ ಸುಂಕದಕಟ್ಟೆಯ ಜಿಟಿ ಕಾಲೇಜಿನ ಸಹಪಾಠಿಗಳು. ಚಿತ್ರ ಕಳುಹಿಸಿದವರು ಪ್ರಾಧ್ಯಾಪಕ ಯೋಗೀಶಾಚಾರ್.


ವ್ಯಾಸಂಗದ ಗೆಲುವು

ಪದವಿ ಅಂತಿಮ ಘಟ್ಟದಲ್ಲಿ ಹಲವು ಭಾವನೆಗಳು ಮನಸ್ಸಿಗೆ ದಾಳಿ ಇಡುತ್ತವೆ. ಆದರೆ, ಅಂಥ ಸೆಂಟಿಮೆಂಟ್​ಗಳಿಗೆ ಸುಲಭವಾಗಿ ಒಳಗಾಗಲ್ಲ ಎನ್ನುವಂತೆ ವಿನ್ ಸಿಂಬಲ್ ತೋರಿಸಿದ್ದಾರೆ ಯಲಹಂಕದ ಶೇಷಾದ್ರಿಪುರಂ ಕಾಲೇಜಿನ ಬಿಎಸ್​ಸಿ ಅಂತಿಮ ವರ್ಷದ ಸುನೀಲ್​ಕುಮಾರ್ ಮತ್ತು ಬಳಗ.


ಹಸಿರು ಪೋಷಣೆ

ವಿಶ್ವ ಪರಿಸರ ದಿನಾಚರಣೆಯಯಂದು ನೆಟ್ಟ ಗಿಡಗಳು ಗಟ್ಟಿಯಾಗಿ ಬೇರೂರುವವರೆಗೆ ನೀರೆರೆಯುವ ಬದ್ಧತೆಯನ್ನು ಎಷ್ಟು ಮಂದಿ ತೋರಿಸುತ್ತಾರೆ? ಯಲಹಂಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಎ ವಿದ್ಯಾರ್ಥಿಗಳ ನಗೆ ನೋಡುತ್ತಿದ್ದರೆ ಆ ಭರವಸೆಯಂತೂ ಕಾಣಿಸುತ್ತಿದೆ. ಚಿತ್ರ ಕಳುಹಿಸಿದವರು ಪ್ರಶಾಂತ್ ಗೌಡ.

Leave a Reply

Your email address will not be published. Required fields are marked *

Back To Top