ಧಾರವಾಡ: ನೂಪುರ್ ಶರ್ಮಾ ಬೆಂಬಲಿಗ, ಟೈಲರ್ ಕನ್ನಯ್ಯ ಲಾಲ್ ಕೊಲೆಯನ್ನು ಖಂಡಿಸಿ ನಾಳೆ ದೇಶಾದ್ಯಂತ ಹಿಂದು ಸಂಘಟನೆಗಳು ಅಭಿಯಾನ ಆರಂಭಿಸಲಿದ್ದಾರೆ. ಈ ಕುರಿತು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿಷಯ ಬಹಿರಂಗಪಡಿಸಿದ್ದಾರೆ.
ಕನ್ನಯ್ಯ ಲಾಲ್ ಕೊಲೆಯನ್ನು ಖಂಡಿಸಿ ಧಾರವಾಡದಲ್ಲಿ ಮಾತನಾಡಿರುವ ಮುತಾಲಿಕ್, ನಾಳೆ ಶ್ರೀರಾಮ ಸೇನೆ, ಯುವ ಬ್ರಿಗೇಡ್, ಹಿಂದೂ ಜನಜಾಗೃತಿ ಸೇರಿ ಇತರೆ ಸಂಘಟನೆಗಳಿಂದ ಅಭಿಯಾನ ಆರಂಭವಾಗಲಿದೆ. “ನಾನು ಕನ್ನಯ್ಯ ಲಾಲ್”, “ನಾನು ನೂಪುರ್ ಶರ್ಮಾ ಬೆಂಬಲಿಗ” ಎಂಬ ದೊಡ್ಡ ಪ್ರಮಾಣದ ಅಭಿಯಾನ ನಡೆಯಲಿದ್ದು, ತಾಕತ್ ಇದ್ದರೆ ನಮ್ಮನ್ನು ಮುಟ್ಟಲಿ ನೋಡೋಣ, ನಾವು ಗುಜರಾತ್ ಮಾದರಿಯಲ್ಲೇ ಉತ್ತರ ಕೊಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಟೈಲರ್ ರುಂಡ ಕತ್ತರಿಸಿದ ಪುಂಡರಿಬ್ಬರ ಬಂಧನ; ತನಿಖೆಗಾಗಿ ಹತ್ತು ತಂಡಗಳ ರಚನೆ
ಕಲ್ಲಂಗಡಿ ಒಡೆದಾಗ ಮಾತಾಡಿದ್ರಿ, ಈಗ ಮಾತಾಡಿ…
ಕನ್ನಯ್ಯ ಲಾಲ್ ಕೊಲೆಯ ಹಿನ್ನೆಲೆಯಲ್ಲಿ ಎಡಪಂಥೀಯರು ಹಾಗೂ ಕಾಂಗ್ರೆಸಿಗರ ವಿರುದ್ಧ ಕಿಡಿಕಾರಿರುವ ಮುತಾಲಿಕ್, ಕಲ್ಲಂಗಡಿ ಹಣ್ಣನ್ನು ಒಡೆದಿದ್ದಾಗ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರು ದೊಡ್ಡದಾಗಿ ಮಾತನಾಡಿದ್ದರು. ಮುಸ್ಲಿಮರ ವೋಟ್‌ಗಾಗಿ ಏನೆಲ್ಲ ಮಾಡಿದ್ರಿ, ಈಗ ಕನ್ನಯ್ಯ ಲಾಲ್ ಅವರ ತಲೆ ಕತ್ತರಿಸಿದ ಮುಸ್ಲಿಮರ ಬಗ್ಗೆ ಸ್ವಲ್ಪವಾದ್ರೂ ಬಾಯಿ ಬಿಡಿ, ಬುದ್ಧಿಜೀವಿಗಳಿಗೆ ಬುದ್ಧಿ ಇದ್ದರೆ ಈಗ ಬಾಯಿ ಬಿಡಲಿ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ನಮಸ್ಕಾರ ದೇವರು’ ಅಂತ ಹೇಳೋದ್ಯಾಕೆ ಡಾಕ್ಟರ್ ಬ್ರೋ?; ಹಣ ಬೇಕಾದಾಗ ಯಾವ ಹೋಟೆಲ್ಗೆ ಹೋಗ್ತಾರೆ!