ಸಹೋದರ ಆನಂದ ನ್ಯಾಮಗೌಡಗೆ ಮತ ನೀಡಿ

ಜಮಖಂಡಿ: ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ತಂದೆಯವರ ಕನಸನ್ನು ನನಸಾಗಿಸಲು ನನ್ನ ಸಹೋದರ ಆನಂದ ನ್ಯಾಮಗೌಡರಿಗೆ ಆಶೀರ್ವದಿಸಿ ಗೆಲ್ಲಿಸಬೇಕೆಂದು ಕಾಂಗ್ರೆಸ್ ಅಭ್ಯರ್ಥಿ ಆನಂದ ಅವರ ಸಹೋದರಿ ಸುಜಾತಾ ಪಡೆಣ್ಣವರ ಹೇಳಿದರು.

ತಾಲೂಕಿನ ಜನವಾಡ ಗ್ರಾಮದಲ್ಲಿ ಆನಂದ ನ್ಯಾಮಗೌಡ ಪರ ಮತಯಾಚಿಸಿ ಮಾತನಾಡಿದ ಅವರು, ಜನರ ಸೇವೆಗಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟ ಸಿದ್ದು ನ್ಯಾಮಗೌಡರ ಕಲ್ಪನೆಯಂತೆ ಕ್ಷೇತ್ರ ಅಭಿವೃದ್ಧಿಯಾಗಬೇಕು. ಆ ನಿಟ್ಟಿನಲ್ಲಿ ಆನಂದ ನ್ಯಾಮಗೌಡ ಅವರು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿಸಲು ಸಂಕಲ್ಪ ತೊಟ್ಟಿದ್ದಾರೆ. ಮತದಾರರು ಅವರಿಗೆ ಆಶೀರ್ವಾದ ಮಾಡಬೇಕು ಎಂದರು.

ಸಿದ್ದು ನ್ಯಾಮಗೌಡ ಕೃಷ್ಣಾ ತೀರದ ದೈವ

ಸಿದ್ದು ನ್ಯಾಮಗೌಡರು ಕೃಷ್ಣಾ ತೀರದ ನಿಜದೈವರಾಗಿದ್ದರು. ಈ ಭಾಗದ ಸಾವಿರಾರು ಎಕರೆ ಪ್ರದೇಶದ ನೀರಾವರಿಗೆ ಶ್ರಮಿಸಿದ ಧೀಮಂತ ನಾಯಕರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು. ತಾಲೂಕಿನ ಕಲಬೀಳಗಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಸಂತೋಷ ರಜಪುತ, ನಾರಾಯಣ ಸಲಗರ, ಶ್ರೀಶೈಲ ಮಾಳಿ, ಸಚಿನ್ ಪವಾರ ಇದ್ದರು.