ಲೋಕಾಪುರ: ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ ಬೆಳೆಸಲು ಶಿಬಿರಗಳು ಬಹಳ ಅತ್ಯವಶ್ಯಕ. ಕಲಿಯುವ ಆಸಕ್ತಿ ಇದ್ದ ಸಮಾಜದ ಎಲ್ಲಾ ವರ್ಗದವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹಿರೇಮಠ ಡಾ. ಚಂದ್ರಶೇಖರ ಸ್ವಾಮಿಗಳು ಹೇಳಿದರು.

ಪಟ್ಟಣದ ಹಿರೇಮಠದಲ್ಲಿ ಉಚಿತ ವೇದಾಧ್ಯಯನ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಏ. 22 ರವರೆಗೆ ವೇದಾಧ್ಯಯನ ಶಿಬಿರ ಜರುಗಲಿದ್ದು, 23ರಂದು ಶಿಬಿರದ ಮುಕ್ತಾಯ ಹಾಗೂ ಅಯ್ಯಚಾರ ಕಾರ್ಯಕ್ರಮ ನಡೆಯಲಿದೆ ಎಂದರು.
ಮುಖ್ಯ ಶಿಕ್ಷಕ ರಾಜಶೇಖರ ಮುತ್ತಿನಮಠ ಮಾತನಾಡಿ, ವೇದ ಮಂತ್ರ, ಸಂಸ್ಕೃತಿ ಸಂಸ್ಕಾರ ಕಲಿತು ಸಮಾಜದ ಸ್ವಾಸ್ಥೃ ಕಾಪಾಡಬೇಕು ಎಂದರು.
ದಂಡಯ್ಯ ಶಿರಕೋಳಮಠ, ಸ್ವಲಭಣ್ಣಾ ತೇಲಿ, ವಿರಕ್ತಮಠ, ಬಸಯ್ಯ ಶಾಸ್ತ್ರೀಗಳು ಮತ್ತಿತರರಿದ್ದರು.
TAGGED:ಲೋಕಾಪುರ