ಡೇವಿಡ್​ ವಾರ್ನರ್​ ಸ್ಯಾಂಡ್​ಪೇಪರ್ ಗೇಟ್ ಪ್ರಕರಣದ ಮಾಸ್ಟರ್​ ಮೈಂಡ್​: ಕ್ಯಾಮರೂನ್ ಬ್ಯಾಂಕ್ರಾಫ್ಟ್

ಸಿಡ್ನಿ: ವಿಶ್ವ ಮಟ್ಟದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಅವಮಾನದಿಂದ ತಲೆತಗ್ಗಿಸುಂತೆ ಮಾಡಿದ್ದ ಸ್ಯಾಂಡ್​ಪೇಪರ್ ಗೇಟ್ ಪ್ರಕರಣದ ಮಾಸ್ಟರ್​ಮೈಂಡ್​ ಡೇವಿಡ್​ ವಾರ್ನರ್​ ಎಂದು ಕ್ಯಾಮರೂನ್​ ಬ್ಯಾಂಕ್ರಾಫ್ಟ್​ ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ಈ ಕುರಿತು ಸತ್ಯ ತಿಳಿಸಿರುವ ಬ್ಯಾಂಕ್ರಾಫ್ಟ್​ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್​ಟೌನ್​ನಲ್ಲಿ ನಡೆದ ಪಂದ್ಯದಲ್ಲಿ ಚೆಂಡನ್ನು ವಿರೂಪಗೊಳಿಸುವಂತೆ ವಾರ್ನರ್​ ನನಗೆ ತಿಳಿಸಿದ್ದರು. ಅಂದು ನಾವು ಮಾಡಿದ ತಪ್ಪಿಗೆ ಬಹುದೊಡ್ಡ ಬೆಲೆಯನ್ನೇ ತೆತ್ತಿದ್ದೇವೆ ಎಂದು ಬ್ಯಾಕ್ರಾಂಫ್ಟ್​ ಪಂದ್ಯದ ವೇಳೆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಕಳೆದ ವಾರ ಸ್ಟೀವ್​ ಸ್ಮಿತ್​ ಘಟನೆಯ ಕುರಿತು ತಿಳಿಸಿದ್ದು, ಅಂದು ಚೆಂಡು ವಿರೂಪಗೊಳಿಸುವ ಕುರಿತು ವಾರ್ನರ್​ ಮತ್ತು ಬ್ಯಾಂಕ್ರಾಫ್ಟ್​ ನಡುವೆ ನಡೆದ ಮಾತುಕತೆ ಕುರಿತು ನನಗೆ ತಿಳಿದಿತ್ತು ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ ಬ್ಯಾಂಕ್ರಾಫ್ಟ್​ ಘಟನೆ ಕುರಿತು ಹೊಸ ಬಾಂಬ್​ ಸಿಡಿಸಿದ್ದಾರೆ.

ಪ್ರಕರಣದ ಸಂಬಂಧ ಸ್ಟೀವನ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್​ಗೆ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಒಂದು ವರ್ಷ ನಿಷೇಧ ಶಿಕ್ಷೆ ವಿಧಿಸಿತ್ತು. ಕೇಪ್​ಟೌನ್ ಟೆಸ್ಟ್​ನಲ್ಲಿ ಸ್ಯಾಂಡ್​ಪೇಪರ್ ಬಳಸಿ ಚೆಂಡನ್ನು ವಿರೂಪ ಮಾಡಲು ಯತ್ನಿಸಿದ್ದ ಯುವ ಆರಂಭಿಕ ಬ್ಯಾಟ್ಸ್​ಮನ್ ಕ್ಯಾಮರೂನ್ ಬ್ಯಾಂಕ್ರಾಫ್ಟ್​ಗೆ 9 ತಿಂಗಳ ನಿಷೇಧ ಶಿಕ್ಷೆಯನ್ನು ಪ್ರಕಟಿಸಿತ್ತು. (ಏಜೆನ್ಸೀಸ್​)