ಆಸಿಸ್​ ತಂಡ ಆಶಸ್ ಸರಣಿ ವೇಳೆಯೂ ಕಳ್ಳಾಟವಾಡಿತ್ತೇ ?

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್​ಟೌನ್ ಟೆಸ್ಟ್ ಪಂದ್ಯದದಲ್ಲಿ ಚೆಂಡು ವಿರೂಪಗೊಳಿಸಿದ್ದ ಆಸ್ಟ್ರೇಲಿಯಾದ ಆಟಗಾರರು ಕಳೆದ ವರ್ಷ ಡಿಸೆಂಬರ್​ನಲ್ಲಿ ಇಂಗ್ಲೆಂಡ್​ ವಿರುದ್ಧ ನಡೆದಿದ್ದ ಆಶಸ್ ​ ಸರಣಿಯ ವೇಳೆಯೂ ಕಳ್ಳಾಟವಾಡಿದ್ದರೇ ಎಂಬ ಅನುಮಾನ ಹುಟ್ಟುಹಾಕಿದೆ.

ಹೌದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋ ಪ್ರಕಾರ ಆಸ್ಟ್ರೇಲಿಯಾದ ಆಟಗಾರ ಕ್ಯಾಮರೂನ್​ ಬ್ಯಾಂಕ್ರಾಫ್ಟ್ ಆಶಸ್ ಸರಣಿಯ ವೇಳೆಯೂ ಚೆಂಡು ವಿರೂಪಗೊಳಿಸಿದ್ದರು ಎಂಬ ಚರ್ಚೆಯನ್ನು ಹುಟ್ಟು ಹಾಕಿದೆ. ವೈರಲ್​ ಆಗಿರುವ ಈ ವಿಡಿಯೋದಲ್ಲಿ ಬ್ಯಾಂಕ್ರಾಫ್ಟ್​ ಅವರು ಡ್ರೆಸ್ಸಿಂಗ್​ ರೂಂ ನಲ್ಲಿ ಸಕ್ಕರೆಯನ್ನು ತಮ್ಮ ಜೇಬಿಗೆ ಹಾಕಿಕೊಳ್ಳುತ್ತಿರುವ ದೃಶ್ಯ ಸೆರೆಯಾಗಿದೆ.

ಬ್ಯಾಂಕ್ರಾಫ್ಟ್​ ಕೇಪ್​ಟೌನ್​ ಟೆಸ್ಟ್​ನಲ್ಲಿ ಒರಟು ಮೇಲ್ಮೈ ಇರುವ ಸಣ್ಣ ಟೇಪ್​ ಅನ್ನು ಬಳಸಿ ಚೆಂಡು ವಿರೂಪಗೊಳಿಸಿದ್ದರು. ಅವರು ಟೇಪ್​ ಬಳಸಿ ಚೆಂಡಿನ ಒಂದು ಭಾಗವನ್ನು ಒರಟುಗೊಳಿಸಿದ್ದರು. ಅದೇ ವಿಧದಲ್ಲಿ ಆಶಸ್ ಸರಣಿಯಲ್ಲೂ ಅವರು ಚೆಂಡು ವಿರೂಪಗೊಳಿಸಲು ಸಕ್ಕರೆ ಬಳಸಿದ್ದರು ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.

ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ 4-0 ಅಂತರದಿಂದ ಇಂಗ್ಲೆಂಡ್​ ತಂಡದ ವಿರುದ್ಧ ಜಯಗಳಿಸಿತ್ತು. (ಏಜೆನ್ಸೀಸ್​)

Leave a Reply

Your email address will not be published. Required fields are marked *