ಶಿಗ್ಗಾಂವಿ: ಪಟ್ಟಣದಲ್ಲಿ ಇತ್ತೀಚೆಗೆ ಸರಣಿ ಕಳವು ನಡೆಸಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಶಿಗ್ಗಾಂವಿ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರಿಂದ ಕ್ಯಾಮರಾ, ಮೊಬೈಲ್, ಲ್ಯಾಪ್‌ಟಾಪ್, ಬೈಕ್, ನಗದು ವಶಕ್ಕೆ ಪಡೆದಿದ್ದಾರೆ.
ಪಟ್ಟಣದ ಹೊಸ ಬಸ್ ನಿಲ್ದಾಣದಿಂದ ಮಾರ್ಕೆಟ್‌ಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿನ ಫೋಟೋ ಸ್ಟುಡಿಯೋ, ಜೆರಾಕ್ಸ್ ಅಂಗಡಿ, ಕಿರಾಣಿ ಅಂಗಡಿಗಳಲ್ಲಿ ಮೇ 24ರಂದು ಸರಣಿ ಕಳ್ಳತನವಾದ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳಾದ ದೇವದುರ್ಗದ ಸಂಗಮೇಶ (ಪಿಂಟ್ಯಾ) ಬಿರಾದಾರ ಮತ್ತು ಬಸವರಾಜ ಹಿರೇಮಠ ಬಂಧಿತರು. ಶಿಗ್ಗಾಂವಿಯ ಪೊಲೀಸ್ ಠಾಣೆ ಮತ್ತು ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿದ 6 ಸಾವಿರ ನಗದು, 1.9 ಲಕ್ಷ ರೂ. ಮೌಲ್ಯದ 3 ಫೋಟೋ ಶೂಟ್ ಕ್ಯಾಮರಾ, 25 ಸಾವಿರ ಬೆಲೆಯ ಲ್ಯಾಪ್‌ಟಾಪ್, 70 ಸಾವಿರ ಬೆಲೆ ಬಾಳುವ ಎರಡು ಮೊಬೈಲ್ ಫೋನ್, 3 ಲಕ್ಷ ರೂ. ಬೆಲೆ ಬಾಳುವ ಎರಡು ಬೈಕ್ ವಶಪಡಿಸಿಕೊಳ್ಳಲಾಗಿದೆ.