ರಬಕವಿ-ಬನಹಟ್ಟಿ: ಕೃಷ್ಣೆ ಪ್ರವಾಹ ತಗ್ಗಿದ್ದು, ನೀರು ಇಳಿಮುಖವಾಗಿ ನದಿ ತೀರ ಜನರು ನಿಟ್ಟುಸಿರುಬಿಟ್ಟಿದ್ದಾರೆ.
ನೀರು ಕೃಷ್ಣೆಯ ಒಡಲತ್ತ ತೆರಳುತ್ತಿದೆ. ಮಹಾರಾಷ್ಟ್ರದಲ್ಲಿ ಮಳೆರಾಯನ ಅಬ್ಬರ ಕಡಿಮೆಯಾಗಿರುವ ಕಾರಣ ಕೃಷ್ಣೆ ಶಾಂತವಾಗಿ ಹರಿಯುತ್ತಿದ್ದಾಳೆ. ಅಧಿಕಾರಿಗಳು ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿಯ ಸ್ಥಿತಿಗತಿ ಕುರಿತು ಪರಿಶೀಲಿಸಿದರು.
ಜಮಖಂಡಿ ತಾಲೂಕಿನ ಹಿಪ್ಪರಗಿ ಅಣೆಕಟ್ಟೆಯ ಎಲ್ಲ 22 ಗೇಟ್‌ಗಳ ಮೂಲಕ ಕೃಷ್ಣೆಗೆ ನೀರು ಹರಿಸಲಾಗುತ್ತಿದೆ. ಬಂದಷ್ಟು ನೀರನ್ನು ನದಿಗೆ ಬಿಡಲಾಗುತ್ತಿದೆ. ಮಹಾರಾಷ್ಟ್ರದಿಂದ ಶನಿವಾರ 1.78 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹಿಪ್ಪರಗಿ ಜಲಾಶಯದಲ್ಲಿ ಸದ್ಯಕ್ಕೆ ನೀರು ಸಂಗ್ರಹ ಮಾಡುತ್ತಿಲ್ಲ.
‘ಜಾಕ್‌ವೆಲ್‌ಗೆ ತೆರಳುವ ರಸ್ತೆ ಇನ್ನೆರಡು ದಿನಗಳಲ್ಲಿ ಮುಕ್ತವಾಗಲಿದೆ. ಇನ್ನೂ ನೀರಿನ ಹರಿವಿನ ಪ್ರಮಾಣ ಅಧಿಕವಿದೆ. ನೀರಿನೊಳಗೆ ಯಾರೂ ಇಳಿಯಬಾರದು. ಜಗದೀಶ ಈಟಿ, ಪೌರಾಯುಕ್ತ, ರಬಕವಿ-ಬನಹಟ್ಟಿ ನಗರಸಭೆ