ಮೆಲ್ಬೋರ್ನ್: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ನಿರ್ವಹಣೆ ತೋರಿದ ಆಸ್ಟ್ರೇಲಿಯಾ ತಂಡ ಮೊದಲ ಏಕದಿನ ಪಂದ್ಯದಲ್ಲಿ ಪ್ರವಾಸಿ ಪಾಕಿಸ್ತಾನ ಎದುರು 2 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಪ್ಯಾಟ್ ಕಮ್ಮಿನ್ಸ್ ಪಡೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಎಂಸಿಜಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಪಾಕ್, ವೇಗಿ ಮಿಚೆಲ್ ಸ್ಟಾರ್ಕ್ (33ಕ್ಕೆ 3) ಸಹಿತ ಇತರ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿ 46.4 ಓವರ್‌ಗಳಲ್ಲಿ 203 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಅನುಭವಿ ಸ್ವೀವನ್ ಸ್ಮಿತ್ (44) ಹಾಗೂ ವಿಕೆಟ್ ಕೀಪರ್-ಬ್ಯಾಟರ್ ಜೋಶ್ ಇಂಗ್ಲಿಸ್ (49 ರನ್, 42 ಎಸೆತ, 4 ಬೌಂಡರಿ, 3 ಸಿಕ್ಸರ್) ಆಟದ ನೆರವಿನಿಂದ ಆಸೀಸ್ 3 ವಿಕೆಟ್‌ಗೆ 139 ರನ್‌ಗಳಿಸಿ ಸುಸ್ಥಿತಿಯಲ್ಲಿತ್ತು. ನಂತರ ವೇಗಿ ಹ್ಯಾರಿಸ್ ರ್ೌ (67ಕ್ಕೆ 3) ದಾಳಿಗೆ ಸಿಲುಕಿ 185 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ಪ್ಯಾಟ್ ಕಮ್ಮಿನ್ಸ್ (32* ರನ್, 31 ಎಸೆತ, 4 ಬೌಂಡರಿ) ಹಾಗೂ ಮಿಚೆಲ್ ಸ್ಟಾರ್ಕ್ ನಡೆಸಿದ ಜವಾಬ್ದಾರಿಯುತ ಜತೆಯಾಟದ ನೆರವಿನಿಂದ ಅಂತಿಮವಾಗಿ 33.3 ಓವರ್‌ಗಳಲ್ಲಿ 8 ವಿಕೆಟ್‌ಗೆ 204 ರನ್‌ಗಳಿಸಿದ ಆಸೀಸ್ ರೋಚಕ ಗೆಲುವು ಸಾಧಿಸಿತು.
ಪಾಕಿಸ್ತಾನ: 46.4 ಓವರ್‌ಗಳಲ್ಲಿ 203 (ಶಫೀಕ್ 12, ಬಾಬರ್ 37, ರಿಜ್ವಾನ್ 44, ಸಲ್ಮಾನ್ 12, ರ್ಇಾನ್ 22, ಶಹೀನ್ 24, ನಸೀಮ್ 40, ಸ್ಟಾರ್ಕ್ 33ಕ್ಕೆ 3, ಕಮ್ಮಿನ್ಸ್ 39ಕ್ಕೆ 2).
ಆಸ್ಟ್ರೇಲಿಯಾ; 33.3 ಓವರ್‌ಗಳಲ್ಲಿ 8 ವಿಕೆಟ್‌ಗೆ 204 (ಮೆಕ್‌ಗುರ್ಕ್ 16, ಸ್ಮಿತ್ 44, ಇಂಗ್ಲಿಸ್ 49, ಲಬುಶೇನ್ 16, ಮ್ಯಾಕ್ಸ್‌ವೆಲ್ 0, ಕಮ್ಮಿನ್ಸ್ 32*, ರ್ೌ 67ಕ್ಕೆ 3, ಶಹೀನ್43ಕ್ಕೆ 2).
ಪಂದ್ಯಶ್ರೇಷ್ಠ: ಮಿಚೆಲ್ ಸ್ಟಾರ್ಕ್