More

    ಫಸಲ್ ಬಿಮಾ ಯೋಜನೆಗೆ ನೋಂದಣಿ ಮಾಡಿಸಲು ಕರೆ

    ಬೇಲೂರು: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಜಾರಿಗೊಳಿಸಲು ಸರ್ಕಾರ ಆದೇಶ ಹೊರಡಿಸಿದ್ದು, ತಾಲೂಕಿನ ರೈತರು ಅಂತಿಮ ದಿನಾಂಕದೊಳಗೆ ಬೆಳೆ ನೋಂದಣಿ ಮಾಡಿಸಬೇಕೆಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ರಂಗಸ್ವಾಮಿ ತಿಳಿಸಿದ್ದಾರೆ.

    2024-25ನೇ ಸಾಲಿನ ಮುಂಗಾರು ಹಂಗಾಮಿಗೆ ತಾಲೂಕಿನ ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ತಾಲೂಕು ಮಟ್ಟಕ್ಕೆ ಮುಸುಕಿನ ಜೋಳ ಬೆಳೆಯನ್ನು ಅಧಿಸೂಚನೆ ಮಾಡಲಾಗಿದೆ. ಹೋಬಳಿ ಮಟ್ಟದ ವಿಮಾ ಘಟಕಕ್ಕೆ ಕಸಬಾ ಹೋಬಳಿಗೆ ಆಲೂಗಡ್ಡೆ, ಭತ್ತ (ನೀರಾವರಿ), ಭತ್ತ(ಮಳೆ ಆಶ್ರಿತ), ಮುಸುಕಿನ ಜೋಳ (ನೀ), ರಾಗಿ (ಮ.ಆ) ಬೆಳೆ, ಬಿಕ್ಕೋಡು ಹೋಬಳಿಗೆ ಆಲೂಗಡ್ಡೆ (ಮ.ಆ), ಭತ್ತ(ನೀ), ಭತ್ತ (ಮ.ಆ), ರಾಗಿ(ಮ.ಆ) ಬೆಳೆ, ಮಾದೀಹಳ್ಳಿ ಹೋಬಳಿಗೆ ಆಲೂಗಡ್ಡೆ (ಮ.ಆ), ತೊಗರಿ (ಮ.ಆ), ಭತ್ತ ನೀರಾವರಿ, ಮುಸುಕಿನ ಜೋಳ(ನೀ), ರಾಗಿ(ಮ.ಆ), ಹಳೇಬೀಡು ಹೋಬಳಿಗೆ ಆಲೂಗಡ್ಡೆ (ಮ.ಆ), ಎಳ್ಳು (ಮ.ಆ) ಜೋಳ(ಮ.ಆ) ತೊಗರಿ(ಮ.ಆ) ಮುಸುಕಿನ ಜೋಳ(ನೀ), ರಾಗಿ(ಮ.ಆ), ಸೂರ್ಯಕಾಂತಿ(ಮ.ಆ), ಹತ್ತಿ(ಮ.ಆ), ಅರೇಹಳ್ಳಿ ಹೋಬಳಿಗೆ ಆಲೂಗಡ್ಡೆ(ಮ.ಆ), ಭತ್ತ(ನೀ), ಭತ್ತ (ಮ.ಆ). ಬೆಳೆಯ ಅಧಿಸೂಚನೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಗ್ರಾಮ ಪಂಚಾಯಿತಿ ಮಟ್ಟಕ್ಕೆ ಮುಸುಕಿನ ಜೋಳ ಮಳೆಯಾಶ್ರಿತ ಬೆಳೆಯನ್ನು ಬೆಳೆ ವಿಮೆಗೆ ಅಧಿಸೂಚನೆ ಮಾಡಲಾಗಿದೆ. ಬೆಳೆ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದ ರೈತರು ಬೆಳೆ ವಿಮೆಗೆ ನೋಂದಣಿ ಮಾಡಲು ತಿಳಿಸಿದೆ.

    ಬೆಳೆ ನೋಂದಣಿಗೆ ಈ ಕೆಳಕಂಡಂತೆ ಭತ್ತ ನೀರಾವರಿ ಬೆಳೆಗೆ ಆಗಸ್ಟ್-16, ಭತ್ತ(ಮ.ಆ) ಬೆಳೆಗೆ ಜುಲೈ 31 ಮು.ಜೋಳ(ನೀ) ಬೆಳೆಗೆ ಜುಲೈ-31 ಮು.ಜೋಳ(ಮ.ಆ) ಬೆಳೆಗೆ ಜುಲೈ 31, ಜೋಳ(ಮ.ಆ) ಬೆಳೆಗೆ ಜುಲೈ 31, ರಾಗಿ(ಮ.ಆ) ಬೆಳೆಗೆ ಆಗಸ್ಟ್ 16, ರಾಗಿ(ನೀ) ಬೆಳೆಗೆ ಆ. 16, ತೊಗರಿ(ಮ.ಆ) ಬೆಳೆಗೆ ಜುಲೈ 31, ಎಳ್ಳು(ಮ.ಆ) ಬೆಳೆಗೆ ಜುಲೈ-7, ಹತ್ತಿ(ಮ.ಆ) ಬೆಳೆಗೆ ಜುಲೈ-15 ಕೊನೆಯ ದಿನಾಂಕವಾಗಿದೆ.
    ರೈತರು ಈ ಯೋಜನೆಯಡಿ ಪಾಲ್ಗೊಂಡು ಬೆಳೆಗಳನ್ನು ವಿಮೆ ವ್ಯಾಪ್ತಿಗೊಳಪಡಿಸಬಹುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಅಥವಾ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸುವಂತೆ ರಂಗಸ್ವಾಮಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts