ಬೆಂಗಳೂರು: ಸಮಾಜಮುಖಿ ಪ್ರಕಾಶನ ಕನ್ನಡದ ಕಥಾಪರಂಪರೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸಮಾಜಮುಖಿ ವಾರ್ಷಿಕ ಕಥಾ ಪುರಸ್ಕಾರ-2024ನ್ನು ಏರ್ಪಡಿಸಿದೆ. ಸಮಾಜಮುಖಿ ಪುರಸ್ಕಾರಕ್ಕೆ ಆಯ್ಕೆಯಾಗುವ ಐದು ಕಥೆಗಾರರಿಗೆ ತಲಾ 5ಸಾವಿರ ನಗದು ನೀಡಿ ಗೌರವಿಸಲಾಗುವುದು. ಜೊತೆಗೆ ಆಯ್ದ ಹದಿನೈದು ಕಥೆಗಳಿಗೆ ಸಮಾಜಮುಖಿ ವಾರ್ಷಿಕ ಕಥಾ ಸಂಕಲನದಲ್ಲಿ ಅವಕಾಶ ನೀಡಲಾಗುವುದು.
ಕಥೆಗಾರರು ಎರಡು ಸಾವಿರ ಪದಮಿತಿಯಲ್ಲಿ ಯಾವ ಮಾಧ್ಯಮದಲ್ಲೂ ಪ್ರಕಟವಾಗದ, ನುಡಿ ಅಥವಾ ಯುನಿಕೋಡ್ ಲಿಪಿಯಲ್ಲಿ ಕಥೆಯನ್ನು ಟೈಪ್ ಮಾಡಿ ವರ್ಡ್ ಫೈಲ್ ಮೂಲಕ ಡಿ.31ರೊಳಗಾಗಿ ಇಮೇಲ್ ಮೂಲಕ ಕಳುಹಿಸಬೇಕು. ಇಮೇಲ್ ವಿಳಾಸ: [email protected]
ಲೋಕ ಕಲ್ಯಾಣಕ್ಕಾಗಿ ಅತಿರುದ್ರ ಮಹಾಯಜ್ಞ; ಹೃದಯ ಸ್ಪಂದನ ಸಂಸ್ಥೆ ಆಯೋಜನೆ