480 ಕೆ.ಜಿ.ಬೃಹತ್ ಕೇಕ್ ಪ್ರದರ್ಶನ

ಗಮನ ಸೆಳೆದ ಸ್ವಾತಂತ್ರೃ ಸೇನಾನಿಗಳ ಭಾವಚಿತ್ರ

ಮೈಸೂರು: ಈ ಬಾರಿಯ ಸ್ವಾತಂತ್ರೃ ದಿನಾಚರಣೆಯಲ್ಲಿ ಹೋಟೆಲ್ ಮಾಲೀಕರ ಸಂಘ ಸ್ವಾತಂತ್ರೃ ಸೇನಾನಿಗಳ ಭಾವಚಿತ್ರ ಇರುವ ಬೃಹತ್ ಕೇಕ್ ತಯಾರಿಸಿ ಗಮನ ಸೆಳೆದಿದೆ. ಈ ಕೇಕ್‌ನ ಮೊತ್ತ ಬರೋಬ್ಬರಿ 1.90 ಲಕ್ಷ ರೂ…!

ನಗರದ ಹೋಟೆಲ್ ಮಾಲೀಕರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಕೇಕ್ ಪ್ರದರ್ಶನವನ್ನು ಸಂಘದ ಅಧ್ಯಕ್ಷ ನಾರಾಯಣಗೌಡ ಉದ್ಘಾಟಿಸಿದರು. ಸ್ವಾತಂತ್ರೃ ಹೋರಾಟಗಾರ ಕೃಷ್ಣಮೂರ್ತಿ ಇತರರು ಇದ್ದರು. ನೂರಾರು ಜನರು ಬೃಹತ್ ಕೇಕ್ ನೋಡಿ ಸಂಭ್ರಮಿಸಿದರು.

ಆರು ಜನರು 2 ದಿನ ಶ್ರಮವಹಿಸಿ ಈ ಬೃಹತ್ ಕೇಕ್ ತಯಾರಿಸಿದ್ದು, ಕೇಕ್ ಒಟ್ಟು 480 ಕೆ.ಜಿ.ತೂಕ ಹೊಂದಿದೆ. ಕೇಕ್‌ನ ಮೇಲೆ ಮಹಾತ್ಮಗಾಂಧಿ, ಸುಭಾಷ್‌ಚಂದ್ರ ಬೋಸ್, ಭಗತ್‌ಸಿಂಗ್ ಸೇರಿದಂತೆ ಹಲವು ಸ್ವಾತಂತ್ರೃ ಹೋರಾಟಗಾರರ ಭಾವಚಿತ್ರಗಳನ್ನು ಬಿಡಿಸಲಾಗಿದೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿಗಳಾದ ನೆಹರು, ಎಚ್.ಡಿ.ದೇವೇಗೌಡ, ಮನಮೋಹನ್‌ಸಿಂಗ್ ಅವರ ಚಿತ್ರಗಳೂ ಗಮನ ಸೆಳೆಯುತ್ತಿವೆ.