ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ, ಅರ್ಹತೆ ಇದ್ದವರಿಗೆ ಮಂತ್ರಿ ಸ್ಥಾನ: ಆರ್​.ವಿ.ದೇಶಪಾಂಡೆ

ಹುಬ್ಬಳ್ಳಿ: ಸಚಿವ ಸಂಪುಟ ವಿಸ್ತರಣೆ ಶೀಘ್ರವೇ ಆಗಲಿದ್ದು ಅರ್ಹತೆ ಇದ್ದವರಿಗೆ ಸಚಿವ ಸ್ಥಾನ ಸಿಗಬೇಕು ಎಂಬುದು ನಮ್ಮ ಆಶಯ ಎಂದು ಸಚಿವ ಆರ್​.ವಿ.ದೇಶಪಾಂಡೆ ಹೇಳಿದರು.

ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿಗಳಲ್ಲಿ ಅಸಮಾಧಾನ ಇದೆ. ಆದರೆ ಯಾರೂ ಬೇಸರ ವ್ಯಕ್ತಪಡಿಸುವ ಅಗತ್ಯವಿಲ್ಲ. ಹೈಕಮಾಂಡ್​ ನಿರ್ಧಾರದಂತೆ ಸಂಪುಟ ವಿಸ್ತರಣೆ ಆಗುತ್ತದೆ ಎಂದು ಹುಬ್ಬಳ್ಳಿಯಲ್ಲಿ ತಿಳಿಸಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಪಿಂಚಣಿ ಬಾಕಿ ವಿಚಾರವೊಂದು ಹಳೆಯ ಸಮಸ್ಯೆ. ನಾನು ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಇತ್ತೀಚೆಗಷ್ಟೇ ಸಭೆ ನಡೆಸಲಾಗಿದೆ. ಯಾವ ಸಮಯದಲ್ಲಿ ಏನು ಕೆಲಸಗಳಾಗಬೇಕೋ ಅದು ಆಗಬೇಕು ಎಂದರು.
ಗೆಲುವು ನಮ್ಮದೇ

ಉಪಚುನಾವಣೆಯಲ್ಲಿ ಗೆಲುವು ನಮ್ಮದೇ. ಜಮಖಂಡಿಯಲ್ಲಿ ಖಚಿತವಾಗಿ ಗೆಲ್ಲುತ್ತೇವೆ ಎಂದು ಆರ್​.ವಿ.ದೇಶಪಾಂಡೆ ಹೇಳಿದರು