More

    ಸಂಪುಟ ವಿಸ್ತರಣೆ ಸನಿಹ 20ರೊಳಗೆ ಖಚಿತ; ವರಿಷ್ಠರ ಜತೆ ಶೀಘ್ರ ಚರ್ಚೆ 

    ಬೆಂಗಳೂರು: ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆಯನ್ನು ಜ.20ರೊಳಗೆ ನಡೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉತ್ಸುಕರಾಗಿದ್ದು, ಇನ್ನು 3-4 ದಿನದಲ್ಲೇ ವರಿಷ್ಠರ ಜತೆ ರ್ಚಚಿಸಿ ಮಹೂರ್ತ ನಿಗದಿ ಮಾಡಲು ಉದ್ದೇಶಿಸಿದ್ದಾರೆ.

    ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ, ಇನ್ನೊಂದು ವಾರದೊಳಗೆ ಸಂಪುಟ ವಿಸ್ತರಣೆ ಮಾಡಬೇಕು. ಜ.20ರಿಂದ 24ರವೆರೆಗೆ ಸ್ವಿಜರ್​ಲ್ಯಾಂಡ್​ನ ದಾವೋಸ್​ನಲ್ಲಿ ನಡೆಯುವ ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್) 50ನೇ ವಾರ್ಷಿಕ ಸಭೆಗೆ ತೆರಳುವ ಮುನ್ನವೇ ಸಂಪುಟ ವಿಸ್ತರಣೆ ಮಾಡಬೇಕೆಂದಿದೆ ಎಂದರು.

    ಜ.16-18ರ ನಡುವೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಕರ್ನಾಟಕಕ್ಕೆ ಬರುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ. ಅಷ್ಟರೊಳಗೆ ಅವರನ್ನು ಭೇಟಿಯಾಗಲು ಸಾಧ್ಯವಾದರೆ ಮಾತುಕತೆ ನಡೆಸುತ್ತೇನೆ. ಇಲ್ಲವಾದರೆ ಅವರು ಇಲ್ಲಿಗೆ ಆಗಮಿಸಿದಾಗಲೇ ತೀರ್ವನವಾಗಲಿದೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

    ದಾವೋಸ್​ಗೆ ಹೋಗಬಾರದೆಂದಿದ್ದೆ. ಅತಿ ಮುಖ್ಯಕಾರ್ಯಕ್ರಮವಾದ ಕಾರಣ ಪಾಲ್ಗೊಳ್ಳುವುದೆ ಸೂಕ್ತವೆಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆಂದು ದಾವೋಸ್ ಪ್ರವಾಸವನ್ನೂ ಸಹ ಖಾತ್ರಿ ಪಡಿಸಿದರು. ಉಪಚುನಾವಣೆ ಬಳಿಕ ಸಂಪುಟ ವಿಸ್ತರಣೆಗೆ ಒತ್ತಡವಿತ್ತು. ಆರಂಭದಲ್ಲಿ ಜಾರ್ಖಂಡ್ ಚುನಾವಣೆ ನೆಪವೊಡ್ಡಿ ಮುಂದೂಡಲಾಗಿತ್ತು. ಧನುರ್ವಸ ಕಾರಣಕ್ಕೆ ಸಂಕ್ರಾಂತಿವರೆಗೂ ತಳ್ಳಲಾಗಿತ್ತು. ಇದೀಗ ಸಂಕ್ರಾಂತಿಗೆ ಹತ್ತು ದಿನ ಬಾಕಿ ಇರುವಂತೆ ಸಚಿವಾಕಾಂಕ್ಷಿಗಳಿಂದ ಒತ್ತಡ ಹೆಚ್ಚಾಗಿದೆ. ಇಷ್ಟರ ನಡುವೆ, ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ 11 ಬಿಜೆಪಿ ಶಾಸಕರೂ ಸಂಪುಟ ಸೇರುವುದು ಖಾತ್ರಿ ಎಂದು ಸಿಎಂ ಘೋಷಿಸಿದ್ದಾರೆ.

    ಯಾರಿಗೆ ಅವಕಾಶ?

    ಸಂಪುಟ ವಿಸ್ತರಣೆ ದಿನ ಸನಿಹವಾಗು ತ್ತಿದ್ದಂತೆ ಬಿಜೆಪಿಯೊಳಗೆ ಚಟುವಟಿಕೆ ಬಿರುಸುಗೊಂಡಿದೆ. ಸಚಿವಾಕಾಂಕ್ಷಿಗಳು ಜಾತಿ, ಸಂಘಟನೆ, ಮಠ, ಪ್ರದೇಶವಾರು ಆಧಾರದಲ್ಲಿ ಒತ್ತಡ ಹೇರಲು ಆರಂಭಿಸಿದ್ದಾರೆ. ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ 11 ಮಂದಿ ಸೇರಿ ರಾಣೆಬೆನ್ನೂರು ಅನರ್ಹ ಶಾಸಕ ಆರ್.ಶಂಕರ್ ಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ. ಈ ನಡುವೆ, ಶಂಕರ್ ಮಂತ್ರಿ ಸ್ಥಾನಕ್ಕೇರಲು ಪರಿಷತ್ ಸದಸ್ಯರಾಗುವುದು ಅನಿವಾರ್ಯ. ತಿಂಗಳಾಂತ್ಯಕ್ಕೆ ಪರಿಷತ್ತಿಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಒಂದೊಮ್ಮೆ, ಈ ಸ್ಥಾನಕ್ಕೆ ಲಕ್ಷ್ಮಣ ಸವದಿ ಅವಕಾಶ ಗಿಟ್ಟಿಸಿದರೆ ಶಂಕರ್ ಮತ್ತಷ್ಟು ದಿನ ಕಾಯಬೇಕು, ಇಲ್ಲವಾದರೆ ಹಾಲಿ ಬಿಜೆಪಿ ಪರಿಷತ್ ಸದಸ್ಯರ ಪೈಕಿ ಒಬ್ಬರು ಸ್ಥಾನ ತ್ಯಾಗ ಮಾಡಬೇಕಾಗುತ್ತದೆ.

    ಸಿಎಂ ಗಮನ ಸೆಳೆಯಲು ಪೈಪೋಟಿ

    ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಾಸಕರು ಸಿಎಂ ಮೇಲೆ ಪ್ರಭಾವ ಬೀರುವ ಪ್ರಯತ್ನದಲ್ಲಿ ತಲ್ಲೀನರಾಗಿದ್ದರೆ, ಸಚಿವ ಸ್ಥಾನ ಉಳಿಸಿಕೊಳ್ಳಲು ಕೆಲ ಸಚಿವರು ಪೈಪೋಟಿಯಲ್ಲಿ ಬಿಎಸ್​ವೈ ಹೊಗಳಿಕೆಯಲ್ಲಿ ಮುಳುಗಿ ಹೋಗಿದ್ದಾರೆ. ಜಿಲ್ಲಾ ಮಟ್ಟದ ಪ್ರವಾಸಕ್ಕೆ ಹೋದ ಸಂದರ್ಭ ಸಿಎಂ ಮುಂದೆ ಗಮನ ಸೆಳೆಯುವ ರೀತಿಯಲ್ಲಿ ಆಕಾಂಕ್ಷಿಗಳು ನಡವಳಿಕೆ ಬದಲಿಸಿಕೊಂಡಿದ್ದಾರೆ. ಸಂಪುಟದಿಂದ 4-5 ಮಂದಿ ಕೈ ಬಿಡುವ ಪ್ರಸ್ತಾಪ ಶುರುವಾಗುತ್ತಿದ್ದಂತೆ, ಒಂದಲ್ಲ ಒಂದು ನೆಪದಲ್ಲಿ ಸಿಎಂ ಭೇಟಿ ಮಾಡಿ ಅವರ ಗಮನ ಸೆಳೆಯುವ ರೀತಿಯಲ್ಲಿ ಕೆಲಸ ಮಾಡುವ ಪ್ರಯತ್ನದಲ್ಲಿ ಸಚಿವರು ಮಗ್ನರಾಗಿರುವುದು ವಿಶೇಷ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts