ಗಣೇಶನ ಹಬ್ಬಕ್ಕೆ ಮುಂಚೆ ಸಂಪುಟ ಕಡುಬು ಯಾರಿಗೆ?

ಬೆಂಗಳೂರು: ಸಂಪುಟ ವಿಸ್ತರಣೆ ವಿಚಾರವಾಗಿ ದೆಹಲಿಗೆ ಭೇಟಿ ನೀಡಿರುವ ಸಿಎಂ ಸಿದ್ದರಾಮಯ್ಯನವರ ಭೇಟಿ ಮುಕ್ತಾಯವಾಗಿದೆ. ಕಾಂಗ್ರೆಸ್​ ಉಪಾಧ್ಯಕ್ಷ ರಾಹುಲ್​ ಗಾಧಿ ಅವರೊಂದಿಗೆ ಈ ಸಂಭಂದ ಚರ್ಚೆ ನಡೆಸಿರುವ ಸಿಎಂ ಸರ್ಕಾರದಲ್ಲಿ ಯಾರಿಗೆ ಸಚಿವ ಸ್ಥಾನ ಸಿಗಬಹುದೆಂಬ ಕುತೂಹಲು ಕೆರಳಿಸಿದೆ.

ಸಚಿವ ಸಂಪುಟ ವಿಸ್ತರಣೆ ವಿಚಾರ ರಾಹುಲ್​ ಗಾಂಧಿಯೊಂದಿಗೆ ಚರ್ಚೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ರಾಹುಲ್ ಗಾಂಧಿ ಜತೆ ಚರ್ಚಿಸಿದ್ದೇನೆ. ನಾನು ಒಂದು ಪಟ್ಟಿಯನ್ನು ನೀಡಿದ್ದೇನೆ. ಅವರು ತಮ್ಮ ತೀರ್ಮಾನ ತಿಳಿಸುತ್ತಾರೆ ಎಂದಿದ್ದಾರೆ.

ಅಂದಹಾಗೆ ಮುಂದಿನ ವಾರ ಸಂಪುಟ ವಿಸ್ತರಣೆ ಆಗಲಿದೆ. ಸಚಿವ ಸಂಪುಟ ಸೇರ್ಪಡೆಗೆ ಮೂವರ ಹೆಸರು ಅಂತಿಮವಾಗಿದೆ. ಕೆ.ಷಡಾಕ್ಷರಿ, ಎಚ್.ಎಂ. ರೇವಣ್ಣ, ಆರ್.ಬಿ.ತಿಮ್ಮಾಪುರ ಸಂಪುಟ ಸೇರ್ಪಡೆ ಖಚಿತವಾಗಿದೆ. ಅಲ್ಲದೆ ಸಿ.ಎಂ.ಇಬ್ರಾಹಿಂ ವಿಧಾನಪರಿಷತ್​ಗೆ ಕಳಿಸಲು ನಿರ್ಧರಿಸಲಾಗಿದೆ ಎಂದು ದಿಗ್ವಿಜಯ ನ್ಯೂಸ್​ಗೆ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಗೃಹ ಖಾತೆ ಕೊಟ್ಟರೆ ನಿಭಾಯಿಸಬಲ್ಲೆ

ಸಂಪುಟಕ್ಕೆ ಹೆಚ್ಚುವರಿ ಮೂವರ ಸೇರ್ಪಡೆ ಹಿನ್ನೆಲೆಯಲ್ಲಿ ಮಾತನಾಡಿರುವ ರಮಾನಾಥ ರೈ ಗೃಹಖಾತೆ ಕೊಟ್ಟರೆ ನಿಭಾಯಿಸಬಲ್ಲೆ ಎಂದಿದ್ದಾರೆ. ಆದರೆ ಆ ಬಗ್ಗೆ ಇನ್ನೂ ಫೈನಲ್ ಆಗಿಲ್ಲ ಎಂದು ಮಂಗಳೂರಿನಲ್ಲಿ ಸಚಿವ ರಮಾನಾಥ ರೈ ಹೇಳಿಕೆ ನೀಡಿದ್ದಾರೆ.

ಇದೇ ವೇಳೆ ಕಲ್ಲಡ್ಕ ಶಾಲೆಗೆ ಅಕ್ಕಿ ಭಿಕ್ಷೆ ವಿಚಾರ ಪ್ರತಿಕ್ರಿಯಿಸಿದ ರಮಾನಾಥ ರೈ ಶೋಭಾ ಕರಂದ್ಲಾಜೆಗೆ ಭಿಕ್ಷೆ ಬೇಡಬೇಕಾಗಿಲ್ಲ. ಶೋಭಾಗೆ ಮಡಿಕೇರಿಯಲ್ಲಿರುವ ಆಸ್ತಿಯ ಒಂದಂಶ ಕೊಟ್ಟರೆ ಸಾಕು ಕಲ್ಲಡ್ಕ ಶಾಲೆಗಳಿಗೆ ಜೀವನ ಪರ್ಯಂತ ಊಟಕ್ಕೆ ಸಾಕಾಗುತ್ತೆ. ಗತಿ ಗೋತ್ರ ಇಲ್ಲದ ಶೋಭಾಳಲ್ಲಿ ಈಗ ಎಷ್ಟು ಕೋಟಿ ಆಸ್ತಿಯಿದೆ ಗೊತ್ತಾ ಎಂದು ಶೋಭಾ ಕರಂದ್ಲಾಜೆಗೆ ಟಾಂಗ್​ ಕೊಟ್ಟರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *