ಪರಿಷ್ಕೃತ ಡೇಟಾ ರಕ್ಷಣಾ ಮಸೂದೆಗೆ ಸಂಪುಟ ಅಸ್ತು

Data Protection

ನವದೆಹಲಿ: ಪರಿಷ್ಕರಿಸಲಾದ ಡಿಜಿಟಲ್ ವೈಯಕ್ತಿಕ ಡೇಟಾ ರಕ್ಷಣಾ ಮಸೂದೆಗೆ (ಡಿಪಿಡಿಪಿ) ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಮಸೂದೆಯ ನಿಯಮಗಳ ಉಲ್ಲಂಘನೆಯ ಪ್ರತಿ ಪ್ರಕರಣಕ್ಕೆ 250 ಕೋಟಿ ರೂಪಾಯಿ ದಂಡ ವಿಧಿಸುವ ಕಠಿಣ ನಿಯಮವನ್ನು ಅದು ಒಳಗೊಂಡಿದೆ. ಈ ಮಸೂದೆಯು ಜುಲೈ 20ಕ್ಕೆ ಆರಂಭವಾಗುವ ಮುಂಗಾರು ಅಧಿವೇಶನದಲ್ಲಿ ಮಂಡನೆ ಆಗಲಿದೆ.

blank

ಮಸೂದೆಯ ಆರಂಭಿಕ ಕರಡನ್ನು ಕಳೆದ ವರ್ಷ ನವೆಂಬರ್​ನಲ್ಲಿ ಮಂಡಿಸಿ ಸಾರ್ವಜನಿಕರು ಮತ್ತು ಸಂಬಂಧಿಸಿದವರಿಂದ ಪಡೆದ ಸಲಹೆಗಳನ್ನು ಆಧರಿಸಿ ಎರಡನೇ ಕರಡನ್ನು ರಚಿಸಿ ಅಂತರ್ ಸಚಿವಾಲಯದ ಚರ್ಚೆಗಳು ನಡೆದಿವೆ. ಈ ಮಸೂದೆಯು ಭಾರತದಲ್ಲಿ ಡಿಜಿಟಲ್ ವೈಯಕ್ತಿಕ ದತ್ತಾಂಶದ ಸಂಸ್ಕರಣೆ ಮೇಲೆ ಅಧಿಕಾರ ವನ್ನು ಹೊಂದಿರುತ್ತದೆ. ಆನ್​ಲೈನ್ ಅಥವಾ ಆಫ್ ಲೈನ್​ನಲ್ಲಿ ಸಂಗ್ರಹಿಸಿ ನಂತರ ಡಿಜಿಟಲೀಕರಿಸಿದ ಡೇಟಾವನ್ನು ಅದು ಒಳಗೊಂಡಿರು ತ್ತದೆ. ಸರಕುಗಳು ಮತ್ತು ಸೇವೆಗಳು ಅಥವಾ ಭಾರತದಲ್ಲಿ ವ್ಯಕ್ತಿಗಳ ವಿವರ (ಪ್ರೊಫೈಲಿಂಗ್) ಒಳಗೊಂಡಿದ್ದರೆ ಭಾರತದ ಹೊರಗೆ ಸಂಸ್ಕರಿಸಿದ ಡೇಟಾಕ್ಕೆ ಕೂಡ ಇದು ಅನ್ವಯವಾಗುತ್ತದೆ.

ಈ ಮಸೂದೆ ಪ್ರಕಾರ, ವೈಯಕ್ತಿಕ ಡೇಟಾಗಳನ್ನು ಸಂಬಂಧಿಸಿದ ವ್ಯಕ್ತಿಗಳ ಸಮ್ಮತಿಯೊಂದಿಗೆ ಕಾನೂನುಬದ್ಧ ಉದ್ದೇಶಗಳಿಗೆ ಮಾತ್ರವೇ ಸಂಸ್ಕರಿಸಬಹುದಾಗಿದೆ. ಕೆಲವು ಪ್ರಕರಣಗಳಲ್ಲಿ ಸಮ್ಮತಿಯು ಪರೋಕ್ಷವಾಗಿ ಒಳಗೊಂಡಿರ ಬಹುದಾಗಿದೆ. ಡೇಟಾ ಸಂರಕ್ಷಕರು ಡೇಟಾದ ನಿಖರತೆಯನ್ನು ಮತ್ತು ದತ್ತಾಂಶದ ಭದ್ರತೆಯನ್ನು ಖಾತರಿಪಡಿಸಬೇಕು. ಒಮ್ಮೆ ಉದ್ದೇಶ ಈಡೇರಿದ ಮೇಲೆ ಅದನ್ನು ಅಳಿಸುವಂತೆ (ಡಿಲೀಟ್) ಮಸೂದೆ ತಿಳಿಸಿದೆ. ಈ ಮಸೂದೆಯು ವ್ಯಕ್ತಿಗಳಿಗೆ ಕೆಲವು ನಿರ್ದಿಷ್ಟ ಹಕ್ಕುಗಳನ್ನು ಒದಗಿಸಿದೆ. ಮಾಹಿತಿ ಪಡೆಯುವ ಹಕ್ಕು, ತಿದ್ದುಪಡಿ ಮತ್ತು ಅಳಿಸಿಹಾಕಲು ಮನವಿ ಹಾಗೂ ಸಮಸ್ಯೆ ಪರಿಹಾರಕ್ಕೆ ಕೋರಿಕೆ ಮೊದಲಾದವು ಅದರಲ್ಲಿ ಸೇರಿವೆ ಎಂದು ತಿಳಿಸಿದೆ.

ವಿನಾಯಿತಿ: ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಮುಂತಾದ ಕಾರಣಗಳ ಆಧಾರದಲ್ಲಿ ಸರ್ಕಾರ ತನ್ನ ಸಂಸ್ಥೆಗಳಿಗೆ ಮಸೂದೆಯ ಕೆಲವು ನಿಯಮಗಳಿಂದ ವಿನಾಯಿತಿ ನೀಡಬಹುದಾಗಿದೆ. ಆದರೆ, ಈ ರೀತಿಯ ರಿಯಾಯಿತಿಗಳಿಂದ ಗೋಪ್ಯತೆ ಹಕ್ಕುಗಳ ಉಲ್ಲಂಘನೆ ಆಗಬಹುದೆಂಬ ಕಳವಳ ವ್ಯಕ್ತವಾಗಿದೆ.

2019ರಲ್ಲೇ ಡೇಟಾ ಸುರಕ್ಷತಾ ಮಸೂದೆಯನ್ನು ಸರ್ಕಾರ ಮಂಡಿಸಿತ್ತು. ಆದರೆ, ಕಳೆದ ಆಗಸ್ಟ್​ನಲ್ಲಿ ಸುಪ್ರೀಂಕೋರ್ಟ್, ಖಾಸಗಿತನ ಕೂಡ ಮೂಲಭೂತ ಹಕ್ಕು ಎಂದು ಹೇಳಿದ್ದರಿಂದ ಈ ಮಸೂದೆಯನ್ನು ಸರ್ಕಾರ ಹಿಂಪಡೆಯಿತು. ನಂತರ ಅದನ್ನು ಪರಿಷ್ಕರಿಸಿ ನವೆಂಬರ್​ನಲ್ಲಿ ಸಾರ್ವಜನಿಕರಿಂದ ಸಲಹೆ, ಆಕ್ಷೇಪ ಆಹ್ವಾನಿಸಿತು.

ಮಂಡಳಿ ಸ್ಥಾಪನೆ: ಮಸೂದೆಯ ಅನುಷ್ಠಾನ ಕ್ಕಾಗಿ ಸರ್ಕಾರ, ಭಾರತೀಯ ದತ್ತಾಂಶ ರಕ್ಷಣಾ ಮಂಡಳಿ (ಡಿಪಿಬಿಐ) ಸ್ಥಾಪಿಸಲಿದೆ. ಸಮ್ಮತಿ ಮತ್ತು ಸಂಗ್ರಹ ಮಿತಿಗೆ ಸಂಬಂಧಿಸಿದಂತೆ ಮಸೂದೆಯು ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಿದೆ. ಇದು ಸಮಾನತೆಯ ಹಕ್ಕನ್ನು ಉಲ್ಲಂಘಿಸಲಿದೆ ಎನ್ನಲಾಗಿದೆ.

ಟ್ರಾಫಿಕ್ ರೂಲ್ಸ್ ದಂಡ ಪಾವತಿಸಲು ಮತ್ತೆ 50% ರಿಯಾಯಿತಿ!; ಎಲ್ಲಿಯವರೆಗೆ ಕಾಲಾವಕಾಶ? ಇಲ್ಲಿದೆ ಮಾಹಿತಿ

Share This Article
blank

ಬೇಯಿಸಿದ ಮೊಟ್ಟೆಗಳನ್ನು ತಿನ್ನುವುದರಿಂದಾಗುವ ಪ್ರಯೋಜನಗಳು…egg

egg: ಮನುಷ್ಯನ ಆರೋಗ್ಯಕ್ಕೆ ಮೊಟ್ಟೆ ಬಹಳ ಒಳ್ಳೆಯದು. ಹೀಗಾಗಿ ದಿನಾ ಬೆಳಗ್ಗೆ ಬೇಯಿಸಿದ ಮೊಟ್ಟೆ ತಿನ್ನುವ…

ಬೆಳಿಗ್ಗೆ ಎದ್ದು ಮೊಬೈಲ್ ನೋಡುವ ಬದಲು ಈ ಕೆಲಸಗಳನ್ನು ಮಾಡಿ, ದಿನವಿಡೀ ಉತ್ಸಾಹದಿಂದಿರಬಹುದು! Morning

Morning: ಬೆಳಿಗ್ಗೆ ಚೆನ್ನಾಗಿ ಪ್ರಾರಂಭವಾದರೆ, ಇಡೀ ದಿನ ಚೆನ್ನಾಗಿ ನಡೆಯುತ್ತದೆ. ದೇಹವನ್ನು ಆರೋಗ್ಯಕರವಾಗಿ, ಫಿಟ್ ಆಗಿ…

blank