ಪಿಎಂ ಕಿಸಾನ್ ಯೋಜನೆ; ಆಧಾರ್​ ಜೋಡಣೆ ಅವಧಿ ವಿಸ್ತರಿಸಿದ ಕೇಂದ್ರ ಸರ್ಕಾರ

ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್​ ನಿಧಿ ಯೋಜನೆ ಖಾತೆಯನ್ನು ಆಧಾರ್​ ಜತೆಗೆ ಜೋಡಿಸಲು ನಿಗದಿಪಡಿಸಿದ್ದ ಗಡುವನ್ನು ನವೆಂಬರ್​ 30ರ ತನಕ ಕೇಂದ್ರ ಸರ್ಕಾರ ವಿಸ್ತರಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದರಂತೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನಾ (ಪಿಎಂ ಕಿಸಾನ್​) ಖಾತೆ ಜತೆಗೆ ಆಧಾರ್​ ಜೋಡಿಸಲು ನಿಗದಿಪಡಿಸಿದ್ದ ಗಡುವನ್ನು ವಿಸ್ತರಣೆಯಾಗಿದೆ. ಅಲ್ಲದೆ, ವಾರ್ಷಿಕ 6,000 ರೂಪಾಯಿ ಸಹಾಯಧನ ಪಡೆಯಲು ಆಧಾರ್​ ಜೋಡಣೆ ಪೂರ್ವನಿಬಂಧನೆಯ ಪಟ್ಟಿಯಲ್ಲಿತ್ತು. ಈಗ ಅದರಿಂದಲೂ ವಿನಾಯಿತಿ ಸಿಕ್ಕಂತಾಗಿದೆ.

ಈ ಆರು ಸಾವಿರ ರೂಪಾಯಿಯನ್ನು ನಾಲ್ಕು ತಿಂಗಳಿಗೊಮ್ಮೆ 2,000 ರೂಪಾಯಿಯಂತೆ ಮೂರು ಕಂತಿನಲ್ಲಿ ರೈತರ ಖಾತೆಗಳಿಗೆ ಜಮೆ ಮಾಡಲಾಗುತ್ತದೆ.

Leave a Reply

Your email address will not be published. Required fields are marked *