ಮೇಲ್ವರ್ಗದ ಬಡಜನರಿಗೆ 10% ಮೀಸಲಾತಿ: ಕೇಂದ್ರದ ಅಸ್ತು

ನವದೆಹಲಿ: ಆರ್ಥಿಕ ದುರ್ಬಲ ಮೇಲ್ವರ್ಗದ ಜನರಿಗೆ (ಜನರಲ್​ ಕೆಟಗೆರಿ) ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಶೇ. 10ರಷ್ಟು ಮೀಸಲಾತಿ ನೀಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಈ ಸಂಬಂಧ ಕೇಂದ್ರ ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ ನಾಳೆ ತಿದ್ದುಪಡಿ ಮಸೂದೆಯನ್ನು ಮಂಡಿಸಲಿದೆ ಎಂದು ತಿಳಿದು ಬಂದಿದೆ. ಇದರಿಂದ ಪ್ರಸ್ತುತ ಇರುವ ಶೇ. 50 ಮೀಸಲಾತಿ ಪ್ರಮಾಣ ಶೇ. 60 ಕ್ಕೆ ಏರಿಕೆಯಾಗಲಿದೆ.

ವಾರ್ಷಿಕ 8 ಲಕ್ಷಕ್ಕಿಂತ ಕಡಿಮೆ ಆದಾಯವುಳ್ಳ ಜನರಲ್​ ಕೆಟಗೆರಿಯ ಬಡ ಜನರಿಗೆ ಇದರಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಕಾಂಗ್ರೆಸ್​ ವಕ್ತಾರ ಅಭಿಷೇಕ್​ ಸಿಂಘ್ವಿ ತೀಕ್ಷಣವಾಗಿ ಟೀಕಿಸಿದ್ದು, ಸರ್ಕಾರ ಅಧಿಕಾರಕ್ಕೆ ಬಂದು 4 ವರ್ಷ 8 ತಿಂಗಳ ನಂತರ ಮೀಸಲಾತಿಯಲ್ಲಿ ಬದಲಾವಣೆ ತಂದಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. (ಏಜೆನ್ಸೀಸ್​)

One Reply to “ಮೇಲ್ವರ್ಗದ ಬಡಜನರಿಗೆ 10% ಮೀಸಲಾತಿ: ಕೇಂದ್ರದ ಅಸ್ತು”

Comments are closed.