ಮಸ್ಕಿ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದಕ್ಕೆ ಪಟ್ಟಣದ ಗಚ್ಚಿನ ಹಿರೇಮಠದ ಶ್ರೀ ವರರುದ್ರಮುನಿ ಶಿವಾಚಾರ್ಯರು ಪ್ರಧಾನಿ ನರೇಂದ್ರ ಮೋದಿಗೆ ಸೋಮವಾರ ಸಂಸ್ಕೃತದಲ್ಲಿ ಪತ್ರ ಬರೆದು ಅಭಿನಂದಿಸಿದ್ದಾರೆ.
ದೇಶದ ಹಿತ ಬಯಸುವ ಒಳ್ಳೆಯ ಕಾಯ್ದೆಯಾಗಿದೆ. ದೇಶದ ಸುಭದ್ರತೆಗೆ ಈ ಒಂದು ವಿಧೇಯಕ ಅತ್ಯವಶ್ಯಕವಾಗಿದೆ. ಕೆಲವರು ಕಾಯ್ದೆ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಆದರೆ, ಕಾಯ್ದೆ ತಿಳಿದುಕೊಂಡವರಿಗೆ ಸಂತೋಷವಾಗಿದೆ. ಅನ್ಯ ಧರ್ಮದವರು ಕೋಲಾಹಲ ಸೃಷ್ಟಿಸುತ್ತಿದ್ದರೂ ಬೇರೆ ದೇಶದಿಂದ ಬಂದಿರುವ ಜನಗಳಿಗೆ ಹೊಸ ಜೀವನ ಕೊಟ್ಟಂತಾಗಿದೆ. ಕರ್ತವ್ಯಪರತೆ ನಿಷ್ಪಕ್ಷಪಾತವಾಗಿದೆ ಎಂದಿರುವ ಸ್ವಾಮೀಜಿ, ರಾಷ್ಟ್ರೋದ್ಧಾರಕ ಕಾರ್ಯಗಳು ನಿಮ್ಮಿಂದ ನಡೆಯಲಿ ಎಂದು ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯರು ಹಾರೈಸಿದ್ದಾರೆ.