ನಿಲ್ಲದ ಪೌರತ್ವ ವಿರೋಧ; ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕೇರಳ ಒಗ್ಗಟ್ಟು

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕೇರಳ ವಿಧಾನಸಭೆಯಲ್ಲಿ ಮಂಗಳವಾರ ನಿರ್ಣಯ ಅಂಗೀಕರಿಸಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರ್ಣಯ ಮಂಡಿಸಿದ್ದರು. ಆಡಳಿತಾರೂಢ ಸಿಪಿಐ(ಎಂ), ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ಹಾಗೂ ವಿಪಕ್ಷಗಳಾದ ಕಾಂಗ್ರೆಸ್ ನೇತೃತ್ವದ ಎಲ್​ಡಿಎಫ್ ಕೂಡ ಪೌರತ್ವ ಕಾಯ್ದೆ ವಿರೋಧಿ ನಿರ್ಣಯ ಬೆಂಬಲಿಸಿವೆ. ಬಿಜೆಪಿಯ ಏಕೈಕ ಶಾಸಕ ಹಾಗೂ ಕೇಂದ್ರದ ಮಾಜಿ ಸಚಿವ ಒ.ರಾಜಗೋಪಾಲ್ ಒಬ್ಬರೇ ಕಾಯ್ದೆ ಬೆಂಬಲಿಸಿ ವಿಧಾನಸಭೆಯಲ್ಲಿ ಧ್ವನಿ ಎತ್ತಿದರು. ಅವಿಶ್ವಾಸ ನಿರ್ಣಯದ ಮೇಲೆ ತೀವ್ರ ಚರ್ಚೆ ನಡೆದ ಬಳಿಕ ಸದನ ನಿರ್ಣಯವನ್ನು ಅಂಗೀಕರಿಸಿತು. ಪೌರತ್ವ ಕಾಯ್ದೆ ಸಂವಿಧಾನದ ಮೌಲ್ಯಗಳನ್ನು ಹೊಂದಿಲ್ಲ. ಜನರ ನಡುವೆ ಭಿನ್ನತೆ ಉಂಟುಮಾಡುತ್ತದೆ. ಅಲ್ಲದೇ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಪಿಣರಾಯಿ ವಿಜಯನ್ ಹೇಳಿದರು. ಇದಕ್ಕೆ ಬಿಜೆಪಿ ಶಾಸಕ ಒ.ರಾಜಗೋಪಾಲ್ ವಿರೋಧ ವ್ಯಕ್ತಪಡಿಸಿ, ಈ ನಿರ್ಣಯ ಸಂವಿಧಾನ ವಿರೋಧಿ ಎಂದು ಕಿಡಿಕಾರಿದರು. ಸತತ ಎರಡು ತಾಸುಗಳ ಬಿರುಸಿನ ಚರ್ಚೆ ಬಳಿಕ ಅವಿಶ್ವಾಸ ನಿರ್ಣಯ ಅಂಗೀಕರಿಸಲಾಯಿತು. ಈ ವೇಳೆ ಸಿಎಂ ಪಿಣರಾಯಿ ವಿಜಯನ್ ತಮ್ಮ ರಾಜ್ಯದಲ್ಲಿ ಯಾವುದೇ ಬಂಧನ ಕೇಂದ್ರಗಳನ್ನೂ ತೆರೆಯುತ್ತಿಲ್ಲ ಎಂದು ಮಾಹಿತಿ ನೀಡಿದರು.

ಗಾಂಧಿ ಬದಲು ಫಿರೋಜ್ ಎಂದು ಹೆಸರಿಟ್ಟುಕೊಳ್ಳಿ: ಕೇಸರಿ ಬಟ್ಟೆ ಹಾಗೂ ಹಿಂದುತ್ವದ ಕುರಿತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಕಿಡಿಕಾರಿದ್ದ ಪ್ರಿಯಾಂಕಾ ಗಾಂಧಿ ವಾದ್ರಾಗೆ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆ ರಾಜ್ಯ ಸಚಿವೆ ಸಾಧಿ್ವ ನಿರಂಜನ್ ಜ್ಯೋತಿ ಟಾಂಗ್ ನೀಡಿದ್ದಾರೆ. ಪ್ರಿಯಾಂಕಾ ಎಂದಿಗೂ ಕೇಸರಿ ಹಾಗೂ ಹಿಂದುತ್ವವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅವರು ನಕಲಿ ಗಾಂಧಿ. ಅವರು ತಮ್ಮ ಹೆಸರಲ್ಲಿನ ಗಾಂಧಿ ತೆಗೆದು ಫಿರೋಜ್ ಪ್ರಿಯಾಂಕಾ ಎಂದಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಪೊಲೀಸರ ಮೇಲೆ ಕಲ್ಲು ತೂರುವವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತಿರುವುದು ಪ್ರಿಯಾಂಕಾರಿಗೆ ತೊಂದರೆಯಾಗಿದೆ ಎಂದು ಹೇಳಿದ್ದಾರೆ. ಕಳೆದ ಸೋಮವಾರ ಯೋಗಿ ವಿರುದ್ಧ ಕಿಡಿಕಾರಿದ್ದ ಪ್ರಿಯಾಂಕಾ, ಯೋಗಿಯವರು ಕೇಸರಿ ಬಟ್ಟೆ ತೊಡುತ್ತಾರೆ. ಅದು ಅವರ ವೈಯಕ್ತಿಕವಲ್ಲ. ಕೇಸರಿ ದೇಶದ ಧಾರ್ವಿುಕ ಮತ್ತು ಆಧ್ಯಾತ್ಮಿಕ ಮನೋಭಾವ. ಹಿಂದು ಧರ್ಮದಲ್ಲಿ ಸೇಡು ಮತ್ತು ದಂಗೆಗೆ ಸ್ಥಾನವಿಲ್ಲ. ಹೀಗಾಗಿ ಅದನ್ನು ತೊಡುವ ಯೋಗಿ ಕೂಡ ಧಾರ್ವಿುಕತೆ ಪಾಲಿಸಬೇಕು ಎಂದಿದ್ದರು.

ಪೌರತ್ವ ಕಾಯ್ದೆ ವಿರುದ್ಧ ಆನ್​ಲೈನ್ ಅಭಿಯಾನ

ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಹಾಗೂ ಜಾಗೃತಿ ಮೂಡಿಸಲು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ ಬೆನ್ನಲ್ಲೇ ಪೌರತ್ವ ಕಾಯ್ದೆ ವಿರೋಧಿಸಿ ಮತ್ತೊಂದು ಅಭಿಯಾನ ಪ್ರಾರಂಭವಾಗಿದೆ. ಟ್ವಿಟ್ಟರ್​ನಲ್ಲಿ ಇಂಡಿಯಾಡಸ್​ನಾಟ್​ಸಪೋರ್ಟ್​ಸಿಎಎ (ಭಾರತ ಸಿಎಎಗೆ ಬೆಂಬಲ ನೀಡುವುದಿಲ್ಲ) ಎಂಬ ಹ್ಯಾಷ್​ಟ್ಯಾಗ್​ನೊಂದಿಗೆ ಸಿಎಎ ವಿರೋಧಿ ಅಭಿಯಾನ ನಡೆಸಲಾಗುತ್ತಿದ್ದು, 24 ಗಂಟೆಯಲ್ಲಿ 6 ಲಕ್ಷಕ್ಕೂ ಅಧಿಕ ಟ್ವೀಟ್​ಗಳನ್ನು ಮಾಡಲಾಗಿದೆ. ಪ್ರಧಾನಿ ಮೋದಿ ಸೋಮವಾರ ಪೌರತ್ವ ಕಾಯ್ದೆಗೆ ಬೆಂಬಲ ಸೂಚಿಸಲು ಇಂಡಿಯಾಸ ಪೋರ್ಟ್ ಸಿಎಎ ಎಂಬ ಹ್ಯಾಷ್​ಟ್ಯಾಗ್​ನಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ್ದರು.

ರಾಜ್ಯಗಳ ವಿರೋಧ ತಡೆಗೆ ಆನ್​ಲೈನ್ ಪ್ರಕ್ರಿಯೆ!

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಪಶ್ಚಿಮ ಬಂಗಾಳ, ಕೇರಳ, ಪಂಜಾಬ್ ಸೇರಿ ಅನೇಕ ರಾಜ್ಯಗಳು ವಿರೋಧ ವ್ಯಕ್ತಪಡಿಸಿರುವುದರಿಂದ ಪೌರತ್ವ ನೀಡುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್​ಲೈನ್ ಮೂಲಕ ಮಾಡಲು ಗೃಹ ಸಚಿವಾಲಯ ಚಿಂತಿಸಿದೆ. ಜಿಲ್ಲಾಧಿಕಾರಿಗಳ ಮೂಲಕ ನಿರಾಶ್ರಿತರ ಪೌರತ್ವ ಅರ್ಜಿ ಪಡೆಯಲು ಈ ಹಿಂದೆ ನಿರ್ಧರಿಸಲಾಗಿತ್ತು. ಈಗ ಅದರ ಅರ್ಜಿ ಸ್ವೀಕಾರ, ಪರಿಶೀಲನೆ ಸೇರಿ ಸಂಪೂರ್ಣ ಪ್ರಕ್ರಿಯೆಯನ್ನು ಆನ್​ಲೈನ್ ಮೂಲಕ ಮಾಡಲು ಚಿಂತಿಸಲಾಗಿದೆ. ಆನ್​ಲೈನ್​ನಲ್ಲಿ ರಾಜ್ಯ ಸರ್ಕಾರಗಳ ಯಾವುದೇ ಪಾತ್ರ ಇರುವುದಿಲ್ಲವಾದ್ದರಿಂದ ಅವರು ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸುವ ಸಂದರ್ಭವೇ ಇರುವುದಿಲ್ಲ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೇ ಸಂವಿಧಾನದ ಪ್ರಕಾರ ಕೇಂದ್ರದ ಅಡಿ ಬರುವ ಕೆಲ ವಿಷಯಗಳನ್ನು ವಿರೋಧಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿರುವುದಿಲ್ಲ ಎಂದು ಈ ಹಿಂದೆಯೇ ಸ್ಪಷ್ಟಪಡಿಸಲಾಗಿದೆ.

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…