More

  ಸಿಎಎ ಜನಜಾಗೃತಿ ಕಾರ್ಯಕ್ರಮ

  ಗೋಣಿಕೊಪ್ಪ: ಕುಟ್ಟದಲ್ಲಿ ಬಿಜೆಪಿ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಕಾರ್ಯಕ್ರಮ ನಡೆಯಿತು.

  ಬಿಜೆಪಿ ತಾಲೂಕು ಅಧ್ಯಕ್ಷ ನೆಲ್ಲೀರ ಚಲನ್‌ಕುಮಾರ್ ನೇತೃತ್ವದಲ್ಲಿ ಅಂಗಡಿ-ಮಳಿಗೆಗಳಿಗೆ ತೆರಳಿ ಕಾಯ್ದೆಯ ಬಗ್ಗೆ ಗೊಂದಲ ನಿವಾರಿಸುವ ಪ್ರಯತ್ನ ಮಾಡಲಾಯಿತು. ಕಾಯ್ದೆಯಿಂದ ದೇಶಕ್ಕೆ ಹಾಗೂ ಜನಸಾಮಾನ್ಯರಿಗೆ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಲಾಯಿತು.

  ಈ ಸಂದರ್ಭ ತಾಲೂಕು ಮಾಜಿ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಕುಟ್ಟ ಸ್ಥಾನೀಯ ಸಮಿತಿ ಅಧ್ಯಕ್ಷ ಮುಕ್ಕಾಟೀರ ನವೀನ್, ಪ್ರಮುಖರಾದ ಹೊಟ್ಟೇಂಗಡ ರಮೇಶ್, ಶರೀನ್ ಸುಬ್ಬಯ್ಯ, ಮುಕ್ಕಾಟೀರ ಅರುಣ್, ಕಳ್ಳಂಗಡ ಕಾಳಪ್ಪ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts