More

    ಅಖಂಡ ಭಾರತವನ್ನು ಸುರಕ್ಷಿತವಾಗಿಸಲು ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ಜತೆ ಎನ್​ಆರ್​ಸಿ ಜಾರಿಯಾಗಬೇಕು

    ಚಿಕ್ಕಮಗಳೂರು: ಅಖಂಡ ಭಾರತವನ್ನು ಸುರಕ್ಷಿತವಾಗಿಸಲು ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ಜತೆ ಎನ್​ಆರ್​ಸಿ ಮತ್ತು ಸಮಾನ ನಾಗರಿಕ ಕಾಯ್ದೆ ಸಹ ಅನುಷ್ಠಾನವಾಗಬೇಕು ಎಂದು ಎಬಿವಿಪಿ ಪೂರ್ಣಾವಧಿ ಕಾರ್ಯಕರ್ತ ಕಾರ್ಕಳದ ಆದರ್ಶ ಗೋಖಲೆ ಒತ್ತಾಯಿಸಿದರು.

    ನಗರದ ಬೋಳರಾಮೇಶ್ವರ ದೇವಸ್ಥಾನ ಆವರಣದಲ್ಲಿ ರಾಷ್ಟ್ರ ಜಾಗರಣ ಸಮಿತಿ ಶುಕ್ರವಾರ ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ -2019 ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.

    ನರೇಂದ್ರ ಮೋದಿ ಅವರ ಕಾರ್ಯ ವೈಖರಿ ಬಗ್ಗೆ ವಿಪಕ್ಷಗಳ ಮುಖಂಡರಿಗೆ ಭಯವಿದೆ. ದೇಶವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡುತ್ತಿದ್ದಾರೆ. ಇದನ್ನು ದುರ್ಬಲಗೊಳಿಸುವ ಯತ್ನ ಪ್ರತಿಪಕ್ಷಗಳಿಂದ ನಡೆಯುತ್ತಿದೆ ಎಂದು ದೂರಿದರು.

    ಕಾಯ್ದೆಯನ್ನು ಈಗ ವಿರೋಧಿಸುವ ವಿಪಕ್ಷದ ನಾಯಕರು ಸಂಸತ್ತಿನಲ್ಲಿ ಚರ್ಚೆಗೆ ಕರೆದರೂ ಹೋಗಲಿಲ್ಲ. ಚರ್ಚೆಗೆ ಹೋಗದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ದೇಶಾದ್ಯಂತ ವಿರೋಧ ಮಾಡಿ ಸಂವಿಧಾನಿಕ ಸಂಸ್ಥೆಗಳಿಗೆ ಮಸಿ ಬಳಿಯಲು ಹೊರಟಿದ್ದಾರೆ ಎಂದು ಆರೋಪಿಸಿದರು.

    ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ನಿರಾಶ್ರಿತರಾದವರ ಹಿತಕ್ಕಾಗಿ ಸಿಎಎ ಅನುಷ್ಠಾನ ಮಾಡಲಾಗಿದೆ. ಮುಸ್ಲಿಂ ಧರ್ಮ ಹೊರತುಪಡಿಸಿ ಇತರೆ ಐದು ಧರ್ವಿುಯರಿಗೆ ಕಾಯ್ದೆ ಅನ್ವಯವಾಗಲಿದೆ. ಸ್ಪಷ್ಟ ಮಾಹಿತಿ ಇದ್ದರೂ ಪ್ರತಿಪಕ್ಷ ನಾಯಕರು ಪ್ರತಿಭಟನೆ ಮಾಡುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಹರಿಹಾಯ್ದರು.

    ದೇಶದ ಭದ್ರತೆಗೆ ಪೂರಕವಾಗಿ ಕೆಲಸ ಮಾಡುತ್ತಿರುವುದನ್ನು ತಪ್ಪಿಸುವ ಹುನ್ನಾರ ನಡೆಯುತ್ತಿದೆ. ಜವಾಬ್ದಾರಿಯುತ ಯುವಕರು ಕಾಯ್ದೆಯ ಆಶಯದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ದೇಶದ ರಕ್ಷಣೆಗಾಗಿ ಇರುವ ಕಾಯ್ದೆ ವಿರೋಧಿಸುವವರು ದೇಶ ದ್ರೋಹಿಗಳೇ ಆಗುತ್ತಾರೆ. ಇಸ್ಲಾಮಿಕ್ ರಾಷ್ಟ್ರದಲ್ಲಿ ಬದುಕು ಕಳೆದುಕೊಂಡವರ ರಕ್ಷಣೆಗೆ ಮುಂದಾಗುವ ಮಾನವೀಯ ಕಾನೂನನ್ನು ಜಾರಿಗೊಳಿಸುವುದು ತಪ್ಪು ಎನ್ನುವವರಿಗೆ ಯುವಜನರೇ ಉತ್ತರ ಕೊಡಬೇಕು ಎಂದರು.

    ಚೀನಾ, ಪಾಕಿಸ್ತಾನ ಪರಸ್ಪರ ವಿರೋಧಿಗಳಾದರೂ ಭಾರತದ ವಿಚಾರ ಬಂದಾಗ ಒಂದಾಗುತ್ತವೆ. ಈ ಬಗ್ಗೆ ಭಾರತೀಯರು ಎಚ್ಚರವಹಿಸಬೇಕು. ಭಾರತದಲ್ಲಿ ಜನಿಸಿದವರಿಗೆ ಈ ಕಾಯ್ದೆಯಿಂದ ತೊಂದರೆಯಿಲ್ಲ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts