ಮಂಗಳೂರು: ಭಾರತದ ಲೆಕ್ಕಪರಿಶೋಧಕರ ಸಂಸ್ಥೆ ಮಂಗಳೂರು ಶಾಖೆ (ಐಸಿಎಐ) ವತಿಯಿಂದ ಬೋರ್ಡ್ ಆ್ ಸ್ಟಡೀಸ್ ಮುಂದಾಳತ್ವದಲ್ಲಿ ‘ವಿಮರ್ಶ್’ ಎಂಬ ಶೀರ್ಷಿಕೆಯಡಿ 2 ದಿನ ಮಂಗಳೂರು ಪುರಭವನದಲ್ಲಿ ಆಯೋಜಿಸಲಾಗಿರುವ ಸಿಎ ವಿದ್ಯಾರ್ಥಿಗಳ ಮೆಗಾ ಸಮ್ಮೇಳನ ಇತ್ತೀಚೆಗೆ ನಡೆಯಿತು.
ಯುನಿಕೋರ್ಟ್ ಐಎನ್‌ಸಿ. ಸಂಸ್ಥಾಪಕ ಮತ್ತು ಮುಖ್ಯ ತಾಂತ್ರಿಕ ಅಧಿಕಾರಿ ಪ್ರಶಾಂತ್ ಶೆಣೈ ಕಟ್ಪಾಡಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಇಂಜಿನಿಯರಿಂಗ್ ಪಡೆದ ವಿದ್ಯಾರ್ಥಿ ಯುನಿಕೋರ್ಟ್ ಐಎನ್‌ಸಿ. ಎಂಬ ಸಂಸ್ಥೆ ಹುಟ್ಟುಹಾಕಿ ಮುನ್ನಡೆದ ಪ್ರಸಂಗವನ್ನು ಮುಂದಿಟ್ಟರು. ಆಧುನಿಕ ಕಾಲಘಟ್ಟದಲ್ಲಿ ಎಐ ಹೆಚ್ಚು ಪ್ರವರ್ಧಮಾನಕ್ಕೆ ಬರುವ ಕಾರಣದಿಂದ ಅದರ ಕುರಿತಾದ ಉತ್ಪಾದನೆಗೆ ಹೆಚ್ಚು ಆದ್ಯತೆ ನೀಡಬೇಕು. ಇತ್ತೀಚೆಗಿನ ಮಾದರಿಯ ಎಐ ಟೂಲ್ಸ್ ಬಗ್ಗೆ ಹೆಚ್ಚು ಆದ್ಯತೆ ನೀಡಬೇಕು. ಎಐ ಟೂಲ್ಸ್ ಹಾಗೂ ಡಾಟಾ ಎರಡೂ ಸಮರ್ಪಕವಾಗಿ ಹೊಂದಿರುವವರು ತ್ವರಿತವಾಗಿ ಪ್ರಗತಿ ಹೊಂದಲು, ಕ್ಷೇತ್ರದಲ್ಲಿ ಮೇಲೇರಲು ಅವಕಾಶ ಆಗುತ್ತದೆ ಎಂದರು.
ಐಸಿಎಐ ಸೆಂಟ್ರಲ್ ಕೌನ್ಸಿಲ್ ಸದಸ್ಯ ಸಿಎ ಮಧುಕರ್ ನಾರಾಯಣ ಹಿರೇಗಂಗೆ ಮಾತನಾಡಿ, ಅಹ್ಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದಿಂದ ದೇಶವೇ ಶೋಕಸಾಗರದಲ್ಲಿದೆ. ಆ ಘಟನೆ ಆಗದಂತೆ ಮೊದಲೇ ಮುನ್ನೆಚ್ಚರಿಕೆ ವಹಿಸುವುದು ಹೇಗೆ ಎಂಬುದು ಈಗಿನ ಚರ್ಚಿತ ವಿಷಯ. ಅದೇ ರೀತಿ ಸಿಎ ಅವರು ಕೂಡ ಆರ್ಥಿಕ ವ್ಯತ್ಯಾಸ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಬಹುಮುಖ್ಯವಾದದ್ದು. ವಿಮಾನ ಹೊರಡುವ ಮುನ್ನ ಅದರ ಸಾಮರ್ಥ್ಯ ಪರಿಶೀಲಿಸಿ ಸಹಿ ಹಾಕಿದವರು ಹೇಗೆ ಮುಖ್ಯವಾಗುತ್ತಾರೋ ಅದೇ ರೀತಿ ಆರ್ಥಿಕ ಲೆಕ್ಕಾಚಾರದಲ್ಲಿ ಸಹಿ ಹಾಕಿದ ಸಿಎ ಪಾತ್ರ ಕೂಡ ಮುಖ್ಯವಾಗಿರುತ್ತದೆ ಎಂದರು.
ಸಿಕಾಸ ಎಸ್‌ಐಆರ್‌ಸಿ ಚೇರ್‌ಮನ್ ಸಿಎ ಪ್ರಮೋದ್ ಹೆಗ್ಡೆ, ಪ್ರಮುಖರಾದ ಸಿಎ ನಿತಿನ್ ಬಾಳಿಗ, ಸಿಎ ಡ್ಯಾನಿಯಲ್ ಮಾರ್ಷ್ ಪಿರೇರಾ, ಸಿಎ ಮಮ್ತಾ ರಾವ್, ಅದಿತಿರಾಜ್ ಮುಂತಾದವರು ಉಪಸ್ಥಿತರಿದ್ದರು. ಐಸಿಎಐ ಮಂಗಳೂರು ಶಾಖೆ ಅಧ್ಯಕ್ಷ ಸಿಎ ಪ್ರಶಾಂತ್ ಪೈ.ಕೆ ಸ್ವಾಗತಿಸಿದರು. ಎಸ್‌ಐಸಿಎಎಸ್‌ಎ ಅಧ್ಯಕ್ಷ ಸಿಎ ಬಂಟ್ವಾಳ ನಿತಿನ್ ಬಾಳಿಗ ಪ್ರಸ್ತಾವಿಸಿದರು. ಎಸ್‌ಐಸಿಎಎಸ್‌ಎ ಉಪಾಧ್ಯಕ್ಷೆ ಭೂಮಿಕಾ ಎಂ. ವಂದಿಸಿದರು, ಉಳುವಾರು ನಿರೂಪಿಸಿದರು.
‘ವಿಮರ್ಶ್’ ಮೆಗಾ ಸಮ್ಮೇಳನ ಸಮಾರೋಪ
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಮೆಗಾ ಫುಡ್ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಸತ್ಯಶಂಕರ್, (ಬಿಂದು) ಅವರು ತಮ್ಮ ಉದ್ಯಮಶೀಲತಾ ಅನುಭವಗಳನ್ನು ವಿವರಿಸಿದರು. ಐಸಿಎಐ ಮಂಗಳೂರಿನ ನಿಕಟಪೂರ್ವ ಅಧ್ಯಕ್ಷ ಸಿಎ ಗೌತಮ್ ಪೈ, ವೃತ್ತಿಪರ ಜಾಲಗಳನ್ನು ನಿರ್ಮಿಸುವಲ್ಲಿ ಮತ್ತು ವೃತ್ತಿ ಅಭಿವೃದ್ಧಿಯಲ್ಲಿ ಅವರ ಮಹತ್ವ ತಿಳಿಸಿದರು. ಐಸಿಎಐ ಮಂಗಳೂರು ಶಾಖೆ ಅಧ್ಯಕ್ಷ ಸಿಎ ಪ್ರಶಾಂತ್, ಪ್ರಮುಖರಾದ ಸಿ. ಎ ಪ್ರಮೋದ್ ಹೆಗ್ಡೆ, ಸಿಎ ಡ್ಯಾನಿಯಲ್ ಮಾರ್ಷ್ ಪೆರೇರಾ, ಸಿಎ ಮಮತಾ ರಾವ್, ಸಿಎ ಬಂಟವಾಲ್ ನಿತಿನ್ ಬಾಳಿಗಾ, ಭೂಮಿಕಾ, ಅದಿತಿ ಮತ್ತಿತರರು ಉಪಸ್ಥಿತರಿದ್ದರು. ಸಿಎ ನಿತಿನ್ ಬಾಳಿಗಾ ಸಮ್ಮೇಳನದ ಅವಲೋಕನವನ್ನು ಮಂಡಿಸಿದರು. ಸಿಎ ವಿದ್ಯಾರ್ಥಿಗಳ ಮೆಗಾ ಸಮ್ಮೇಳನವು ಶಿಕ್ಷಣ, ಪ್ರೇರಣೆ ಮತ್ತು ವೃತ್ತಿಪರ ನೆಟ್‌ವಕಿರ್ಂಗ್‌ಗೆ ಪರಿಣಾಮಕಾರಿ ವೇದಿಕೆಯಾಗಿ ಕಾರ್ಯನಿರ್ವಹಿಸಿತು. ಜತೆಗೆ ಭವಿಷ್ಯದ ಚಾರ್ಟರ್ಡ್ ಅಕೌಂಟೆಂಟ್‌ಗಳನ್ನು ವೃತ್ತಿಜೀವನದ ಯಶಸ್ಸಿಗೆ ಅಗತ್ಯವಾದ ಕೌಶಲ್ಯಗಳನ್ನು ರೂಪುಗೊಳಿಸಲು ಸಹಾಯಕವಾಗಿದೆ.