ಟಿಪ್ಪು ಸುಲ್ತಾನ್ ಇವರ ತಾತಾನ, ಮುತ್ತಾತಾನ? ಬಿಟ್ಟರೆ ಬಿನ್​ ಲಾಡೆನ್ ಜಯಂತೀನೂ​ ಮಾಡ್ತಾರೆ: ಸಿಟಿ ರವಿ

ಚಿಕ್ಕಮಗಳೂರು: ಟಿಪ್ಪು ಜಯಂತಿ ಯಾಕೆ ಮಾಡುತ್ತಾರೆ? ಟಿಪ್ಪು ಇವರ ಅಪ್ಪಾನಾ, ತಾತನಾ, ಮುತ್ತಾತನಾ? ಎಂದು ಹೇಳುವ ಮೂಲಕ ಶಾಸಕ ಸಿ.ಟಿ.ರವಿ ಟಿಪ್ಪು ಜಯಂತಿ ಆಚರಣೆ ಕುರಿತು ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಟಿಪ್ಪು ಕನ್ನಡಕ್ಕೆ ಕೊಡುಗೆ ಕೊಟ್ಟವನಾ? ಆಕ್ರಮಣಕಾರಿಯ ಜಯಂತಿ ಆಚರಿಸುವುದಾದರು ಏಕೆ? ಇವರನ್ನ ಹೀಗೆ ಬಿಟ್ಟರೆ ಬಾಬರ್ ಜಯಂತಿ, ಘಜ್ನಿ ಮೊಹಮ್ಮದ್​ ಜಯಂತಿ, ಉಗ್ರ ಒಸಮಾ ಬಿನ್ ಲಾಡೆನ್ ಜಯಂತಿನೂ ಮಾಡುತ್ತಾರೆ ಎಂದರು.

ವೋಟ್​ ಜಾಸ್ತಿಯಾಗುತ್ತೆ ಎಂದು ಬಿನ್​ ಲಾಡೆನ್ ಜಯಂತಿ ಮಾಡಿದ್ರೆ ಜನ ಸುಮ್ಮನೆ ಬಿಡುತ್ತಾರಾ ಎಂದು ಟಿಪ್ಪು ಜಯಂತಿಗೆ ಮುಂದಾದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. (ದಿಗ್ವಿಜಯ ನ್ಯೂಸ್)

ಟಿಪ್ಪು ಜಯಂತಿ ಆಚರಿಸಲು ಸರ್ಕಾರದ ಅದೇಶವಿದೆ; ಬಿಜೆಪಿಯವರ ಟೀಕೆಗೆ ಉತ್ತರಿಸಲಾರೆ