ನಿಖಿಲ್​ ಕುಮಾರಸ್ವಾಮಿ ಗೆಲ್ಲದಿದ್ದರೆ ರಾಜಕೀಯ ನಿವೃತ್ತಿ ಪಡೆಯುವೆ ಎಂದ ಸಚಿವ ಸಿ.ಎಸ್​.ಪುಟ್ಟರಾಜು

ಶಿವಮೊಗ್ಗ: ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಅವರ ಗೆಲುವು ಖಚಿತ. ಒಂದೊಮ್ಮೆ ಅವರು ಗೆಲ್ಲದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಚಿವ ಸಿ.ಎಸ್​.ಪುಟ್ಟರಾಜು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಬಗ್ಗೆ ಬಿ.ಎಸ್.​ಯಡಿಯೂರಪ್ಪ ಹಲವು ವಿಷಯ ಪ್ರಸ್ತಾಪಿಸಿದ್ದಾರೆ. ಮಂಡ್ಯದಲ್ಲಿ ಅಭ್ಯರ್ಥಿ ಹಾಕಲು ಬಿಎಸ್​ವೈಗೆ ಆಗಲಿಲ್ಲ. ಸುಮಲತಾ ಗೆಲ್ಲುತ್ತಾರೆ ಅಂತ ಹೇಳುತ್ತಿದ್ದು, ನಿಖಿಲ್ ಸೋಲನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂದರು.

ಸುಮಲತಾ ಬಿಜೆಪಿ ಸೇರಲ್ಲ ಅಂತ ಹೇಳಿದರೂ, ಯಡಿಯೂರಪ್ಪ ಅವರು ಸುಮಲತಾಗೆ ವೋಟ್ ಹಾಕಿ ಅಂತಾ ಪ್ರಚಾರ ಮಾಡಿದರು. ಕಳ್ಳತನ ಮಾಡೋರಿಗೆ ದೂರದಲ್ಲಿ ನಿಂತು ಟಾರ್ಚ್ ಹಾಕಿ ಸಹಾಯ ಮಾಡಿದಂತೆ ಮೋದಿ, ಯಡಿಯೂರಪ್ಪ ಸಹಾಯ ಮಾಡಿದರು ಎಂದು ಬಿಎಸ್​ವೈ ವಿರುದ್ಧ ವಾಗ್ದಾಳಿ ನಡೆಸಿದರು.

ಉಪಚುನಾವಣೆಯನ್ನು ನಾವು ಸ್ವಲ್ಪ ಗಂಭೀರವಾಗಿ ತೆಗೆದುಕೊಂಡಿದ್ದರೆ ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಸರಿಸಬಹುದಾಗಿತ್ತು ಎಂದರು.

ಮಂಡ್ಯದಲ್ಲಿ ಯಾವತ್ತೂ ಚುನಾವಣೆ ದ್ವೇಷ ಇಟ್ಟುಕೊಂಡು ಯಾವುದೇ ಪಕ್ಷದ ರಾಜಕೀಯ ಮುಖಂಡರನ್ನು ಹೆದರಿಸುವ ಕೆಲಸ‌ ಮಾಡುತ್ತಿಲ್ಲ. ಉಸ್ತುವಾರಿ ಸಚಿವನಾಗಿ ಸುಮಲತಾ ಅವರಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ. ಭಯ ಪಡುವ ಅಗತ್ಯವಿಲ್ಲ ಎಂದರು.

ಈ ಬಾರಿ ಶಿವಮೊಗ್ಗದಲ್ಲೂ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಭಾರೀ‌ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.(ದಿಗ್ವಿಜಯ ನ್ಯೂಸ್​)

One Reply to “ನಿಖಿಲ್​ ಕುಮಾರಸ್ವಾಮಿ ಗೆಲ್ಲದಿದ್ದರೆ ರಾಜಕೀಯ ನಿವೃತ್ತಿ ಪಡೆಯುವೆ ಎಂದ ಸಚಿವ ಸಿ.ಎಸ್​.ಪುಟ್ಟರಾಜು”

  1. ಇಂತ ಭರವಸೆ ಎಷ್ಟೂ ಕೇಳಿದ್ದೀವಿ, ಇದ್ದೆಲ್ಲ ಸುಳ್ಳು ಮಾತು, ದೇವೇಗೌಡರು ಸುಮಾರು 10 ಸಾರಿ ಈ ಮಾತು ಹೇಳಿದ್ದಾರೆ. ಒಂದು ಸಲವಾದ್ರೂ ಮಾಡಿದರಾ…

Comments are closed.