ರಾಮನಗರಕ್ಕೆ ಸಿ.ಎಂ ಲಿಂಗಪ್ಪ ಪುತ್ರ ಚಂದ್ರಶೇಖರ್​ ಬಿಜೆಪಿ ಅಭ್ಯರ್ಥಿ

ರಾಮನಗರ: ಕಾಂಗ್ರೆಸ್​ ತೊರೆದು ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ವಿಧಾನಪರಿಷತ್​ನ ಕಾಂಗ್ರೆಸ್​​ ಸದಸ್ಯ ಸಿ.ಎಂ.ಲಿಂಗಪ್ಪ ಅವರ ಪತ್ರ ಚಂದ್ರಶೇಖರ್​ ಅವರನ್ನು ಬಿಜೆಪಿ ರಾಮನಗರ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ತೀರ್ಮಾನಿಸಿದೆ.

ಚನ್ನಪಟ್ಟಣದ ಮಾಜಿ ಶಾಸಕ ಸಿ.ಪಿ ಯೋಗೀಶ್ವರ್​ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್​ ಅವರು ಚಂದ್ರಶೇಖರ್​ ಅವರನ್ನು ಬಿಜೆಪಿಗೆ ಕರೆತಂದಿದ್ದರು. ಟಿಕೆಟ್​ ನೀಡಲೆಂದೇ ಚಂದ್ರಶೇಖರ್​ ಅವರನ್ನು ಪಕ್ಷಕ್ಕೆ ಕರೆತರಲಾಗಿದೆ ಎಂದು ಹೇಳಲಾಗಿತ್ತು.

ಅದರಂತೆ ಬಿಜೆಪಿ ಚಂದ್ರಶೇಖರ್​ ಅವರನ್ನೇ ರಾಮನಗರದ ತನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ರಾಮನಗರ ಕ್ಷೇತ್ರದ ಟಿಕೆಟ್​ ಆಕಾಂಕ್ಷಿಯಾಗಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್​ ಅವರ ಮನವೊಲಿಸಿ ಯಡಿಯೂರಪ್ಪ ಅವರು ಚಂದ್ರಶೇಖರ್​ ಅವರಿಗೆ ಟಿಕೆಟ್​ ನೀಡಿರುವುದಾಗಿ ತಿಳಿದು ಬಂದಿದೆ.

ಕಾಂಗ್ರೆಸ್​ನ ಭಿನ್ನಮತದ ಲಾಭ ಪಡೆದು, ಕಾಂಗ್ರೆಸ್​ನ ಮತಗಳನ್ನು ಸೆಳೆದು, ಹಿಂದೆಂದೂ ಗೆಲ್ಲದ ರಾಮನಗರ ಕ್ಷೇತ್ರವನ್ನು ಗೆಲ್ಲುವುದು ಬಿಜೆಪಿಯ ಉದ್ದೇಶ. ಅದಕ್ಕಾಗಿಯೇ ಕಾಂಗ್ರೆಸ್​ ಮುಖಂಡ ಸಿ,ಎಂ ಲಿಂಗಪ್ಪ ಅವರ ಪುತ್ರನಿಗೆ ಬಿಜೆಪಿ ಟಿಕೆಟ್​ ನೀಡಿದೆ ಎಂದು ಹೇಳಲಾಗಿದೆ.

ರಾಮನಗರದ ಕಾಂಗ್ರೆಸ್​ ಮುಖಂಡ ಸಿ.ಎಂ. ಲಿಂಗಪ್ಪ ಪುತ್ರ ಬಿಜೆಪಿ ಸೇರ್ಪಡೆ: ಅಭ್ಯರ್ಥಿಯಾಗುವ ಸಾಧ್ಯತೆ

ರಾಮನಗರದಲ್ಲಿ ಮತದಾರರು ಸೂಚಿಸಿದವರಿಗೆ ಬಿಜೆಪಿ ಟಿಕೆಟ್​