ಉಪಚುನಾವಣೆ ಹಿನ್ನೆಲೆ ಅನರ್ಹ ಶಾಸಕ ಬೈರತಿ ಬಸವರಾಜ್​ರಿಂದ ಕ್ಷೇತ್ರದ ಜನರಿಗೆ ಭರ್ಜರಿ ಬಾಡೂಟ!

ಬೆಂಗಳೂರು: ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರ ಬೀಳಿಸಿ ಅನರ್ಹಗೊಂಡ ಶಾಸಕರಲ್ಲಿ ಒಬ್ಬರಾದ ಕೆ.ಆರ್​. ಪುರಂನ ಬೈರತಿ ಬಸವರಾಜ್​ ತಮ್ಮ ಕ್ಷೇತ್ರದ ಮತದಾರರಿಗೆ ಬುಧವಾರ ಭರ್ಜರಿ ಬಾಡೂಟ ಆಯೋಜನೆ ಮಾಡಿದ್ದಾರೆ.

ಕಣ್ಣೂರು ಸಮೀಪದ ತಮ್ಮದೇ ಬಡಾವಣೆಯಾದ ಕನಕಶ್ರೀ ಬಡಾವಣೆಯಲ್ಲಿ ಎಕರೆ ಗಟ್ಟಲೆ ಪೆಂಡಾಲ್ ಹಾಕಿಸಿ, ಮೂವತ್ತು ಸಾವಿರಕ್ಕೂ ಅಧಿಕ ಮಂದಿಗೆ ಮಾಂಸಾಹಾರ ಭಕ್ಷ್ಯಗಳನ್ನು ಸಿದ್ಧಪಡಿಸಿ, ಉಣಬಡಿಸಿದ್ದಾರೆ.

ಉಪಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಜನತೆಯನ್ನು ಸೆಳೆಯಲು ಬಾಡೂಟ ಹಾಕಿಸಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಪಕ್ಷದ ವಿರೋಧಿ ಚಟುವಟಿಕೆಯಲ್ಲಿ ಬೈರತಿ ಬಸವರಾಜ್​ ಕಾಂಗ್ರೆಸ್​ನಿಂದ ಉಚ್ಛಾಟನೆಗೊಂಡಿದ್ದು, ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಯುವ ಸಾಧ್ಯತೆ ಇದ್ದು, ಈಗಿನಿಂದಲೇ ಚುನಾವಣೆ ತಯಾರಿ ಕೈಗೊಂಡಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *