ಬೈಲಹೊಂಗಲ: ಹುತಾತ್ಮ ಯೋಧರಿಗೆ ಮೊಂಬತ್ತಿ ಬೆಳಗಿ ಶ್ರದ್ಧಾಂಜಲಿ

ಬೈಲಹೊಂಗಲ: ಜಮ್ಮು-ಕಾಶ್ಮೀರದ ಪೌಲ್ವಾಮಾದಲ್ಲಿ ಉಗ್ರರ ದಾಳಿಯಿಂದ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಕೋರಿ ಪಟ್ಟಣದ ನೂರಾರು ಯುವಕರು ಇಂಚಲ ಕ್ರಾಸ್‌ನಿಂದ ಹೊರಟು ಶೂರ ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿನ ರಾಯಣ್ಣ ಪ್ರತಿಮೆ ಮುಂಭಾಗ ಮೊಂಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಿದರು.
ಪುರಸಭೆ ಸದಸ್ಯ ಗುರು ಮೆಟಗುಡ್ಡ, ಸಂತೋಷ ಬಡಸದ ಮಾತನಾಡಿ, ದೇಶದ ಗಡಿ ಕಾಯುವ ಸೈನಿಕರ ಮೇಲೆ ಉಗ್ರರು ನಡೆಸಿರುವ ಅಟ್ಟಹಾಸ ಖಂಡನೀಯ. ಕೇಂದ್ರ ಸರ್ಕಾರ ಕೂಡಲೇ ಎಚ್ಚೆತ್ತು ಉಗ್ರರಿಗೆ ತಕ್ಕಪಾಠ ಕಲಿಸಬೇಕು ಎಂದರು.

ಪ್ರವೀಣ ಸಿಂಗ್, ಮಲ್ಲಿಕ ನದಾಫ್, ಶಿವಕುಮಾರ ನಂದೆನ್ನವರ, ಸಂಗಮೇಶ ಚೌಕಿಮಠ, ಕಿರಣ ಬೆಟಗೇರಿ, ತೇನು ಬಂಡಿವಡ್ಡರ, ಮಲ್ಲಿಕಾರ್ಜುನ ತಲ್ಲೂರ, ರವೀಂದ್ರ ಸಿಂಗ್, ಮಹೇಂದ್ರ ಸಿಂಗ್, ಜಸ್ವತ ಸಿಂಗ್, ಸುನೀಲ ಡೊಳ್ಳೊಳ್ಳಿ ಇತರರು ಇದ್ದರು.