ನಿಯಮಾನುಸಾರ ನರೇಗಾ ಕಾಮಗಾರಿ

ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಕೆ.ಎಂ.ರಘುನಾಥ್ ಹೇಳಿಕೆ
ಬೈಲಕುಪ್ಪೆ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಡಿ ನಿಯಮಾನುಸಾರವಾಗಿ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಜಮಾಬಂದಿ ಅಧಿಕಾರಿ ಹಾಗೂ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಕೆ.ಎಂ.ರಘುನಾಥ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕು ಹಾರನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಜಮಾಬಂದಿ ಕಾರ್ಯಕ್ರಮದಲ್ಲಿ ಮಾತನಾಡಿದರು. 2017-18ನೇ ಸಾಲಿನ ಒಟ್ಟು 72.87ಲಕ್ಷ ರೂ.ಆದಾಯದಲ್ಲಿ 56.12ಲಕ್ಷ ರೂ ಅನ್ನು ವಿವಿಧ ಕಾಮಗಾರಿಗಳಿಗೆ ಖರ್ಚು ಮಾಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪಂಚಾಯಿತಿ ವ್ಯಾಪ್ತಿಯ ಕೆಸರಿನಕೆರೆ ಗ್ರಾಮಸ್ಥರಾದ ವಿರೂಪಾಕ್ಷ, ಸುರೇಶ, ಕಾಳೇಗೌಡ, ನೀಲಮ್ಮ ಮತ್ತಿತರರು ಮಾತನಾಡಿ, ನಾವು ಗ್ರಾಮ ಪಂಚಾಯಿತಿಗೆ ತೆರಿಗೆ ಕಟ್ಟಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಿಕೊಂಡಿದ್ದೇವೆ. ಅದೇ ಗ್ರಾಮದ ಕೆಲವರು ಅಕ್ರಮವಾಗಿ ಕೊಳಾಯಿ ಸಂಪರ್ಕ ಪಡೆದಿದ್ದು ಪಂಚಾಯಿತಿ ಸಿಬ್ಬಂದಿ ನೀರು ಬಿಡಲು ಬಂದರೆ ಅವಕಾಶಕೊಡದೆ ನೀರಿಗೆ ತೊಂದರೆ ಕೊಡುತ್ತಿದ್ದಾರೆ. ಇದನ್ನು ಸರಿಪಡಿಸಿ ಎಂದು ಮನವಿ ಸಲ್ಲಿಸಿದರು.
ಕೆ.ಎಂ.ರಘುನಾಥ್ ಮಾತನಾಡಿ, ಕುಡಿಯುವ ನೀರಿಗೆ ತೊಂದರೆ ಕೊಟ್ಟರೆ ಅಂತಹವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುತ್ತದೆ. ಎರಡನೇ ಹಂತದಲ್ಲಿ ನರೇಗಾ ಯೋಜನೆಯಡಿ 18.24 ಲಕ್ಷ ರೂ .ವೆಚ್ಚದ ಕಾಮಗಾರಿಗಳನ್ನು ಮಾಡಿ ಸಲಾಗಿದೆ ಎಂದು ತಿಳಿಸಿದರು. ಗ್ರಾಪಂ ಅಧ್ಯಕ್ಷ ಸಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ಯಶೋಧಮ್ಮ, ಅಭಿವೃದ್ಧಿ ಅಧಿಕಾರಿ ಎಸ್.ಶಿವಣ್ಣ, ಗ್ರಾಮದ ಮುಖಂಡರಾದ ಎಚ್.ಎನ್.ಯೋಗೇಶ, ಗ್ರಾಪಂ ಸದಸ್ಯರಾದ ಸುರೇಶ, ಎಚ್.ಎನ್.ಗೌರೀಶ, ಸ್ವಾಮಿಗೌಡ, ರೇಣುಕಮ್ಮ, ರಾಮೇಗೌಡ ಮತ್ತು ಸಾರ್ವಜನಿಕರು ಹಾಜರಿದ್ದರು.