ಬೈಕ್ ಸವಾರ ಸ್ಥಳದಲ್ಲೇ ಸಾವು

ಹೂವಿನಹಿಪ್ಪರಗಿ: ಸಮೀಪದ ಬ್ಯಾಕೋಡ ಕ್ರಾಸ್ ಹತ್ತಿರ ಬುಧವಾರ ಟಾಟಾ ಏಸ್ ಹಾಗೂ ಬೈಕ್ ನಡುವೆ ಸಂಭವಿಸಿ ಸೋಲವಾಡಗಿ ಗ್ರಾಮದ ಬೈಕ್ ಸವಾರ ಹಣಮಂತ ಮುದಕಪ್ಪ ನಾಟಿಕಾರ (22) ಸ್ಥಳದಲ್ಲೇ ಸಾವಿಗೀಡಾದ್ದಾರೆ.

ಬೈಕ್ ಹಿಂಬದಿ ಸವಾರ ಯಲ್ಲಪ್ಪ ಚಲವಾದಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ಬಸವನಬಾಗೇವಾಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಬಸವನಬಾಗೇವಾಡಿ ಪಿಎಸ್​ಐ ಗುರುಶಾಂತ ದಾಶ್ಯಾಳ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.