More

    ಬ್ಯಾಡಗಿ ಬರಗಾಲಪೀಡಿತ ತಾಲೂಕು ಘೋಷಿಸಿ

    ಬ್ಯಾಡಗಿ: ಮುಂಗಾರು ಮಳೆ ವಿಫಲ ಹಾಗೂ ವಾಡಿಕೆ ಮಳೆ ಕೊರತೆಯಿಂದ ಸಂಪೂರ್ಣ ಬೆಳೆ ಒಣಗಿವೆ. ಸರ್ಕಾರ ಬ್ಯಾಡಗಿ ತಾಲೂಕನ್ನು ಬರಗಾಲ ಪಟ್ಟಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿ ರೈತರು ಶಿರಸ್ತೇದಾರ್ ನಾಗರತ್ಮ ಕಾಳೆ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
    ತಾಲೂಕು ರೈತ ಹೋರಾಟ ಸಮಿತಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ್ ಮಾತನಾಡಿ, ಸ್ಥಳೀಯ ಶಾಸಕರು ವಿಶೇಷ ಕಾಳಜಿ ವಹಿಸಿ ಬ್ಯಾಡಗಿ ತಾಲೂಕನ್ನು ಬರಗಾಲಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕು. ಬ್ಯಾಡಗಿ ಹಾಗೂ ಕಾಗಿನೆಲೆ ಹೋಬಳಿಯಲ್ಲಿ ತೀವ್ರ ಮಳೆ ಕೊರತೆಯಿಂದ ಶೇ. 10ರಷ್ಟು ಕೂಡ ಬೆಳೆ ಬಾರದಂತಾಗಿದೆ. ಕೆರೆ, ಕಟ್ಟೆಗಳು ಖಾಲಿಯಾಗಿವೆ. ಕೊಳವೆ ಬಾವಿಯಲ್ಲಿ ನೀರಿಲ್ಲದೆ ನೀರಾವರಿ ಬೆಳೆ ಕುಂಠಿತಗೊಂಡಿವೆ. ಅಡಕೆ, ಬಾಳೆ ನೀರಿಲ್ಲದೆ ಒಣಗಿವೆ ಎಂದರು.
    ಸರ್ಕಾರ ಸೆಟ್‌ಲೈಟ್ ಮೂಲಕ ಬರಗಾಲದ ಫೋಟೋ ತರಿಸಿಕೊಂಡು ಬರಗಾಲ ನಿರ್ಧರಿಸುವುದು ಸಮಂಜಸವಲ್ಲ. ಸ್ಥಳೀಯ ಶಾಸಕರು ರೈತ ಮುಖಂಡರ, ಅಧಿಕಾರಿಗಳ ಸಭೆ ನಡೆಸಿ ಸಂಪೂರ್ಣ ಮಾಹಿತಿ ಪಡೆದು, ಅದನ್ನು ಮುಖ್ಯಮಂತ್ರಿಗಳು, ಕೃಷಿ ಸಚಿವರ ಗಮನಕ್ಕೆ ತಂದು ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
    ಸಾಲ ಮನ್ನಾಗೆ ಆಗ್ರಹ: 3 ವರ್ಷಗಳಿಂದ ಸತತ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ರೈತರು ಖಾಸಗಿ ಹಣಕಾಸ ಸಂಸ್ಥೆ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಮಾಡಿದ್ದಾರೆ. ಸರ್ಕಾರ ರಾಜ್ಯದ ಎಲ್ಲ ರೈತರ ಸಾಲ ಮನ್ನಾ ಮಾಡಬೇಕು. ತಾಲೂಕಿನ ಶೇ. 70 ರೈತರು ಬೆಲೆ ವಿಮೆ ಕಂತು ತುಂಬಿದ್ದಾರೆ. ಆ ರೈತರಿಗೆ ಶೇ. 25ರಷ್ಟು ಮುಂಗಡ ವಿಮೆ ಹಣ ನೀಡಬೇಕು. ಬ್ಯಾಡಗಿ ತಾಲೂಕನ್ನು ಸೆ. 30ರೊಳಗೆ ಬರಗಾಲ ಪ್ರದೇಶವೆಂದು ಘೋಷಿಸಬೇಕು. ಇಲ್ಲದಿದ್ದರೆ ರೈತ ಸಂಘಟನೆಗಳ ಸಾಮೂಹಿಕ ನಾಯಕತ್ವದಲ್ಲಿ ನಿರಂತರ ಧರಣಿ ನಡೆಸಲಾಗುವುದು ಎಂದು ಮುರಿಗೆಪ್ಪ ಶೆಟ್ಟರ್ ಎಚ್ಚರಿಕೆ ನೀಡಿದರು.
    ನಿಂಗಪ್ಪ ಮಾಗೋಡ, ರಾಮಣ್ಣ ಗುಡಗೂರು, ಚಮನಸಾಬ್ ಕಳ್ಳಿಮನಿ, ಚನ್ನಬಸಪ್ಪ ಸಂಕಣ್ಣನವರ, ಗೋಣೆಪ್ಪ ಸಂಕಣ್ಣವನರ, ಚನ್ನಬಸಪ್ಪ ಕಲಕಟ್ಟಿ, ರಾಜಣ್ಣ ವೀರನಗೌಡ್ರ, ರುದ್ರಪ್ಪ ಹೊಸಮನಿ, ಐ.ಎಚ್. ಹಾವೇರಿ, ಬಸವಂತಪ್ಪ ದಾಸರ, ಶಿವಣ್ಣ ರೆಡ್ಡಿ, ಶಿವಕುಮಾರ ದಾಸರ, ಶಾಂತಪ್ಪ ಮಾಸಣಗಿ ಇತರರಿದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 24

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts