More

    ನಿತ್ಯ ಯೋಗಾಭ್ಯಾಸದಿಂದ ರೋಗ ದೂರ

    ಕಂಪ್ಲಿ: ಸ್ಥಳೀಯ ಪತಾಂಜಲಿ ಯೋಗ ಸಮಿತಿ ಚಿಣ್ಣರಿಗೆ ಏರ್ಪಡಿಸಿದ್ದ ಬೇಸಿಗೆ ಯೋಗ ಶಿಬಿರ ಬುಧವಾರ ಸಮಾರೋಪಗೊಂಡಿತು.ಶಿಬಿರದಲ್ಲಿ ಮಕ್ಕಳ ಜ್ಞಾಪಕಶಕ್ತಿ ವೃದ್ಧಿ, ಏಕಾಗ್ರತೆ, ಪ್ರಾಣಾಯಾಮ, ಧ್ಯಾನ ಇತರ ಆಸನಗಳನ್ನು ಕಲಿಸಿಕೊಡಲಾಯಿತು. 50 ಚಿಣ್ಣರು ಪಾಲ್ಗೊಂಡಿದ್ದರು.

    ಯೋಗ ಸಮಿತಿ ತಾಲೂಕು ಪ್ರಭಾರಿ ಡಿ.ಮೌನೇಶ್ ಮಾತನಾಡಿ, ಶಿಬಿರದಲ್ಲಿ ಚಿಣ್ಣರಿಗೆ ಉಪಯುಕ್ತವಾಗುವ ಯೋಗದ ಆಸನಗಳನ್ನು ಹೇಳಿಕೊಡಲಾಗಿದೆ. ಇವುಗಳನ್ನು ಮಕ್ಕಳು ನಿತ್ಯ ಮನೆಯಲ್ಲಿ ಅಭ್ಯಾಸ ಮಾಡಿದರೆ ಮಾನಸಿಕ, ದೈಹಿಕವಾಗಿ ಬೆಳವಣಿಗೆ ಹೊಂದುವ ಜತೆಗೆ ರೋಗಮುಕ್ತವಾಗಿ ಜೀವಿಸಬಹುದು ಎಂದರು.

    ಬಳಿಕ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಹಿಮಾಲಯ ನಿರಂಜನ ಸ್ವಾಮೀಜಿ, ಸಮಿತಿ ಅಧ್ಯಕ್ಷ ಟಿ.ಕೊಟ್ರೇಶ್, ಕಾರ್ಯದರ್ಶಿ ಎಸ್.ಜಿ.ಚಿತ್ರಗಾರ, ಪ್ರಮುಖರಾದ ಡಾ.ಜಂಬುನಾಥಗೌಡ, ರತ್ನಮ್ಮ ಮತ್ತಿತರರಿದ್ದರು.


    ಇದನ್ನೂ ಓದಿ: ಯೋಗಾಭ್ಯಾಸದಲ್ಲಿ ಸಹಸ್ರಾರು ಮಂದಿ ತಲ್ಲೀನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts