ಶಿರಾಳಕೊಪ್ಪ: ಪಟ್ಟಣದ ಹೊರವಲಯದಲ್ಲಿ ಇರುವ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಮಹಿಳಾ ಪಾಲಿಟೆಕ್ನಿಕ್ ಮತ್ತು ಮಹಿಳಾ ಹಾಸ್ಟೆಲ್ ವಿದ್ಯಾರ್ಥಿಗಳು ತಮ್ಮ ರಕ್ಷಣೆಗೆ ಚಾಕು ಹಿಡಿದು ಓಡಾಡುತ್ತಾರೆ!
ಎರಡು ದಿನಗಳ ಹಿಂದೆ ರಾತ್ರಿ ಸಮಯದಲ್ಲಿ ಇಲ್ಲಿಯ ವ್ಯವಸ್ಥೆ ಪರಿಶೀಲನೆಗೆ ಆಗಮಿಸಿದ್ದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಈ ಪರಿಸ್ಥಿತಿಯನ್ನು ಕಣ್ಣಾರೆ ಕಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ಕಾಲೇಜು ಕ್ಯಾಂಪಸ್ಗಳಿಗೆ ಭೇಟಿ ನೀಡಿದ ಅವರು, ಈ ಭಾಗದಲ್ಲಿ ಸಂಪೂರ್ಣ ಬೆಳಕಿನ ವ್ಯವಸ್ಥೆ ಆಗಬೇಕು. ಒಳ್ಳೆಯ ರೂಪಕೊಟ್ಟು ಯಾವುದೇ ಖಾಸಗಿ ಕಾಲೇಜುಗಳಿಗೆ ಕಡಿಮೆ ಇಲ್ಲದಂತೆ ಅಭಿವೃದ್ಧಿಪಡಿಸಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.
ಪಟ್ಟಣದ ಹೊರವಲಯದಲ್ಲಿ 25 ಎಕರೆ ವಿಶಾಲ ಪ್ರದೇಶದಲ್ಲಿ ಕ್ಯಾಂಪಸ್ ಅಭಿವೃದ್ಧಿಪಡಿಸಲಾಗಿದೆ. ವಿಶೇಷವಾಗಿ ಹಾಸ್ಟೆಲ್ಗಳಲ್ಲಿ 300ಕ್ಕೂ ಹೆಚ್ಚು ಮಹಿಳಾ ವಿದ್ಯಾರ್ಥಿನಿಯರಿದ್ದಾರೆ. ಮುಖ್ಯರಸ್ತೆಯಿಂದ ಕಾಲೇಜುವರೆಗೆ ಹಾಗೂ ಹಾಸ್ಟೆಲ್ ಕ್ಯಾಂಪಸ್ವರೆಗೆ 100ಕ್ಕೂ ಹೆಚ್ಚು ದೀಪ ಅಳವಡಿಸಬೇಕು. ಪೊಲೀಸ್ ಇಲಾಖೆ ಗಸ್ತು ನಡೆಸಬೇಕು ಎಂದು ಸೂಚಿಸಿದರು.
ಕಾಲೇಜು ಮತ್ತು ಹಾಸ್ಟೆಲ್ಗಳಿಗೆ ಸ್ಪಲ್ಪ ಅಂತರವಿರುವುದರಿಂದ ಸಂಪೂರ್ಣ ಕಾಲೇಜಿಗೆ ಕಾಂಪೌಂಡ್ ನಿರ್ವಣ ಹಾಗೂ ಒಳಗಡೆಯೇ ಹತ್ತಿರವಾಗುವಂತೆ ಅಪ್ರೋಚ್ ರಸ್ತೆ ನಿರ್ವಿುಸಲು ಸಿಎಂ ಆದೇಶ ನೀಡಿದ್ದಾರೆ. ಎಷ್ಟೇ ಖರ್ಚು ತಗá-ಲಿದರೂ ಯೋಚಿಸಬೇಡಿ. ಈ ಎಲ್ಲ ಕೆಲಸಗಳು 6 ತಿಂಗಳಲ್ಲಿ ಮುಗಿಯಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ, ಅಗಡಿ ಅಶೋಕ್, ಪುರಸಭೆ ಸದಸ್ಯ ಟಿ.ರಾಜು, ಬಿಜೆಪಿ ನಗರ ಅಧ್ಯಕ್ಷ ಮಂಚಿ ಶಿವಣ್ಣ, ನಿವೇದಿತಾ ರಾಜು, ತಡಗಣಿ ಮಂಜಣ್ಣ, ಚೆನ್ನವೀರಶೆಟ್ಟಿ, ಪುರಸಭೆ ಸದಸ್ಯರಾದ ಅನಿಲ್ಕುಮಾರ್, ಮಕ್ಬೂಲ್, ಮಹಾಬಲೇಶ್, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.