ಅಥಣಿ: ಒಳ್ಳೆಯ ಕಾರ್ಯಕ್ಕೆ ಮನಸ್ಸನ್ನು ಪ್ರೇರೇಪಿಸಬೇಕು. ಇದರಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹುಬ್ಬಳಿ ಶಾಂತಾಶ್ರಮದ ಅಭಿನವ ಸಿದ್ಧಾರೂಢ ಸ್ವಾಮೀಜಿ ಹೇಳಿದರು.
ತಾಲೂಕಿನ ಪಾರ್ಥನಹಳ್ಳಿ ಗ್ರಾಮದ ಸಿದ್ಧಾರೂಢ ಮಠದ ಆವರಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸತ್ಸಂಗವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ಬದುಕಿನ ಜಂಜಾಟದಲ್ಲಿ ನಿತ್ಯ ಬಂಧನವಾಗಿ ಬದುಕುತ್ತಿದ್ದೇವೆ.
ಸುಖದತ್ತ ಸಾಗಲು ಹೊರಟಿದ್ದೇವೆ. ಆದರೆ, ಮನಸ್ಸು ಮಾತ್ರ ನಮ್ಮನ್ನು ಕಟ್ಟಿಹಾಕುತ್ತದೆ. ಇದರಿಂದ ಹೊರಬಂದು ಆನಂದಮಯವಾಗಿ ಇರಲು ನಮ್ಮ ಮನಸ್ಸು ನಮ್ಮ ಹತೋಟಿಯಲ್ಲಿರಬೇಕು. ನಮ್ಮ ಕುಟುಂಬಗಳು ಸಂಸ್ಕಾರ, ಸಂಸ್ಕೃತಿಯ ಪ್ರತೀಕವಾಗಿ ಬೆಳೆಯಬೇಕು ಎಂದರು.
ವಿಜಯಪುರದ ಷಣ್ಮುಖಾರೂಢಮಠದ ರಾಮಕೃಷ್ಣ ಸ್ವಾಮೀಜಿ, ತಾವರಗೇರಿಯ ಸಿದ್ಧಾರೂಢ ಮಠದ ಸಿದ್ಧಾರೂಢ ಸ್ವಾಮೀಜಿ, ಪಾರ್ಥನಹಳ್ಳಿಯ ಶರಣಾನಂದ ಸ್ವಾಮೀಜಿ ಇತರರು ಇದ್ದರು.