ಬೆಂಗಳೂರು: ಶಾಸಕರ ಅನರ್ಹತೆಯಿಂದ ತೆರವಾಗಿರುವ 17 ಕ್ಷೇತ್ರಗಳ ಉಪ ಚುನಾವಣೆಗೆ ಜೆಡಿಎಸ್ 10 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪಟ್ಟಿ ಪ್ರಕಟಿಸಿದೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 10 ಮಂದಿ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದರು. ಉಳಿದ 4 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ನಾಳೆ ಬಿಡುಗಡೆ ಮಾಡಲಿದ್ದಾರೆ.
ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಚೈತ್ರಾಗೌಡ, ಹಿರೇಕೆ ರೂರು ಕ್ಷೇತ್ರಕ್ಕೆ ಉಜನೆಪ್ಪ ಜಟ್ಟೆಪ್ಪ ಕೋಡಿಹಳ್ಳಿ, ರಾಣೆಬೆನ್ನೂರಿಗೆ ಮಲ್ಲಿಕಾರ್ಜುನ ಹಲಗೇರಿ, ವಿಜಯನಗರಕ್ಕೆ ಎನ್.ಎಂ ನಬಿ, ಚಿಕ್ಕಬಳ್ಳಾಪುರಕ್ಕೆ ಮಾಜಿ ಶಾಸಕ ಕೆ.ಪಿ ಬಚ್ಚೇಗೌಡ, ಕೆ.ಆರ್ ಪುರಂಗೆ ಸಿ. ಕೃಷ್ಣಮೂರ್ತಿ, ಯಶವಂತಪುರಕ್ಕೆ ಟಿ.ಎನ್ ಜವರಾಯಿಗೌಡ, ಶಿವಾಜಿನಗರ ತನ್ವೀರ್ ಅಹಮ್ಮದ್ ವುಲ್ಲಾ, ಕೆ.ಆರ್.ಪೇಟೆಗೆ ಬಿ.ಎಲ್ ದೇವರಾಜ್ ಹಾಗೂ ಹುಣಸೂರು ಕ್ಷೇತ್ರಕ್ಕೆ ಸೋಮಶೇಖರ್ ಅವರನ್ನು ಜೆಡಿಎಸ್ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ.
ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡರಿಗೆ ಪಕ್ಷ ಬೆಂಬಲ ನೀಡಿದೆ.(ದಿಗ್ವಿಜಯ ನ್ಯೂಸ್)