ಉಪಚುನಾವಣೆ ಬಳಿಕ ಸರ್ಕಾರಕ್ಕೆ ಶಾಕ್

ಜಮಖಂಡಿ: ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಪರ ಉದ್ಯಮಿ ಹಾಗೂ ಎಂಆರ್​ಎನ್ (ನಿರಾಣಿ) ಫೌಂಡೇಷನ್ ನಿರ್ದೇಶಕ ಸಂಗಮೇಶ ನಿರಾಣಿ ಪ್ರಚಾರ ನಡೆಸಿದರು. ಹುನ್ನೂರದಲ್ಲಿ ಪ್ರಚಾರದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ. ಈ ಗೆಲುವು ಕರ್ನಾಟಕ ರಾಜಕೀಯ ಚಿತ್ರಣ ಬದಲಿಸಲಿದೆ. ಸೋತವರೆಲ್ಲರೂ ಸೇರಿ ರಚಿಸಿರುವ ಸಮ್ಮಿಶ್ರ ಸರ್ಕಾರಕ್ಕೆ ಜಮಖಂಡಿ ಉಪಚುನಾವಣೆ ಗೆಲುವು ಶಾಕ್ ನೀಡಲಿದೆ. ನೀವು ನೀಡುವ ಮತ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಆದ್ದರಿಂದ ಈ ಬಾರಿ ಎಲ್ಲರೂ ಬಿಜೆಪಿಗೆ ಮತ ನೀಡಬೇಕೆಂದು ಮನವಿ ಮಾಡಿದರು. ಸಂಸದರಾದ ಪಿ.ಸಿ. ಗದ್ದಿಗೌಡರ, ಶಾಸಕರಾದ ಸಿದ್ದು ಸವದಿ, ವೀರಣ್ಣ ಚರಂತಿಮಠ, ನಾರಾಯಣಸಾ ಭಾಂಡಗೆ, ಬಸವಂತಪ್ಪ ಹನಗಂಡಿ, ಭರತ ಕುಲಕರ್ಣಿ ಮತ್ತಿತರರಿದ್ದರು.