24.5 C
Bangalore
Sunday, December 8, 2019

ಗಣಿನಾಡು ಬಳ್ಳಾರಿ ಅಖಾಡದಲ್ಲಿ ಶಾಂತಿ-ಕ್ರಾಂತಿ ಕದನ

Latest News

ಡಾಬಾದಲ್ಲಿ ಇಟ್ಟಿದ್ದ 40 ಕೆಜಿ ಈರುಳ್ಳಿ ಕದ್ದೊಯ್ದ ಇಬ್ಬರು ಮಹಿಳೆಯರು; ಪೊಲೀಸರಿಗೆ ದೂರು ನೀಡುವುದಿಲ್ಲವೆಂದ ಮಾಲೀಕ

ಮೊಹಾಲಿ: ಈರುಳ್ಳಿ ಬೆಲೆ ಗಗನಕ್ಕೇರಿದೆ. ಬೆಲೆ ಏರಿಕೆಯ ನಡುವೆ ಈರುಳ್ಳಿ ಕಳ್ಳರೂ ಹೆಚ್ಚಾಗಿದ್ದಾರೆ. ಹಾಗೇ ಪಂಜಾಬ್​ನ ಮೊಹಾಲಿಯಲ್ಲಿ ಇಬ್ಬರು ಮಹಿಳೆಯರು ಸುಮಾರು 40 ಕೆಜಿ ಈರುಳ್ಳಿಯನ್ನು...

ಪಾವಗಡದ ಆಸ್ಪತ್ರೆ ಮುಂಭಾಗ ಮೃತನ ಸಂಬಂಧಿಕರ ಪ್ರತಿಭಟನೆ

ಪಾವಗಡ: ಆಕಸ್ಮಿಕ ಬೆಂಕಿ ಅವಘಡದಲ್ಲಿ ಗಾಯಗೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ನವ ವಿವಾಹಿತ ಗುಜ್ಜನಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎ.ಎಚ್.ಪಾಳ್ಯದ ನವೀನ್(23) ಮೃತಪಟ್ಟಿದ್ದು, ಸಾವಿಗೆ ವೈದ್ಯರ...

ಸಾಸಲು ಗ್ರಾಮದಲ್ಲಿ ತ್ಯಾಜ್ಯ ನೀರಿನ ಸಂಕಷ್ಟ

ದೊಡ್ಡಬಳ್ಳಾಪುರ: ತಾಲೂಕಿನ ಸಾಸಲು ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಪ್ರೌಢಶಾಲೆ ಆವರಣದಲ್ಲಿ ತ್ಯಾಜ್ಯ ನೀರು ಹರಿದು ವಿದ್ಯಾರ್ಥಿಗಳು ಕೊಳಚೆ ನೀರಲ್ಲೇ ಸಂಚರಿಸುವಂತಾಗಿದೆ. ಗ್ರಾಮದ ಅಣ್ಣಯ್ಯನ ಪಾಳ್ಯದ ತ್ಯಾಜ್ಯ ನೀರು ಶಾಲಾ...

ರಸ್ತೆಯಲ್ಲಿ ಬೇಡ ರಾಗಿ ಒಕ್ಕಣೆ

ಶಿವರಾಜ ಎಂ.ಬೆಂಗಳೂರು: ಸತತ ಬರದಿಂದ ಕಂಗೆಟ್ಟಿದ್ದ ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ ಈ ಬಾರಿ ಉತ್ತಮ ರಾಗಿ ಸಲಿನಿಂದ ‘ಸುಗ್ಗಿ’ ಸಂಭ್ರಮ ಮನೆ ಮಾಡಿದೆ. ಈಗಾಗಲೇ ರಾಗಿ ಕಟಾವು...

ಮಹನೀಯರ ಚರಿತ್ರೆ ಅರಿವಿಗೆ ಛದ್ಮವೇಷ ಪೂರಕ

ವಿಜಯಪುರ: ಮಹಾತ್ಮ ಗಾಂಧಿ, ನೆಹರು, ಭಗತ್‌ಸಿಂಗ್, ಶ್ರೀರಾಮ, ಅಂಬೇಡ್ಕರ್ ಸೇರಿ ಇತರ ಮಹನೀಯರ ವೇಷ-ಭೂಷಣವನ್ನು ಮಕ್ಕಳು ಧರಿಸುವುದರಿಂದ ಅವರ ಜೀವನ ಚರಿತ್ರೆ, ವ್ಯಕ್ತಿತ್ವ, ಅರಿಯಲು ಹಾಗೂ...

| ಅಶೋಕ ನೀಮಕರ್

ಬಳ್ಳಾರಿ: ಬಳ್ಳಾರಿ ಲೋಕಸಭಾ ಉಪಚುನಾವಣೆಯು ಶಾಸಕ ಬಿ.ಶ್ರೀರಾಮುಲು ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಕದನವಾಗಿ ಮಾರ್ಪಟ್ಟಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್​ನ 6, ಬಿಜೆಪಿಯ 2 ಶಾಸಕರಿದ್ದಾರೆ. ನಾಲ್ವರು ಎಂಎಲ್ಸಿಗಳು, ಒಬ್ಬ ರಾಜ್ಯಸಭಾ ಸದಸ್ಯರೂ ಇರುವುದರಿಂದ ಕಾಂಗ್ರೆಸ್ ನಾಯಕರು ನಾವೇ ಬಲಾಢ್ಯರು ಎನ್ನುತ್ತಿದ್ದಾರೆ. ಸಹೋದರಿ ಜೆ.ಶಾಂತಾರನ್ನು ಕಣಕ್ಕಿಳಿಸಿರುವುದರಿಂದ ರಾಮುಲುಗೆ ಚುನಾವಣೆ ಪ್ರತಿಷ್ಠೆ ಪ್ರಶ್ನೆ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ 2014ರ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸಿದ ಹೆಗ್ಗಳಿಕೆಯಿಂದಾಗಿ ಈ ಚುನಾವಣೆ ಡಿಕೆಶಿ ಪ್ರಾಬಲ್ಯವನ್ನು ಒರೆಗೆ ಹಚ್ಚಿದೆ.

ರಾಮುಲು ವರ್ಚಸ್ಸು ಶಾಂತಾಗೆ ವರದಾನ. ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಹೊರಗಿನವರು ಎಂಬ ವಿಚಾರವನ್ನು ರಾಮುಲು ಆರಂಭಿಕ ಅಸ್ತ್ರವಾಗಿ ಪ್ರಯೋಗಿಸಿದರೂ ಅದಕ್ಕೆ ಪಕ್ಷದ ಮಟ್ಟದಲ್ಲಿ ಬೆಂಬಲ ಸಿಗಲಿಲ್ಲ. ಇದರಿಂದಾಗಿ ಜಿಲ್ಲೆಯ ಸ್ವಾಭಿಮಾನದ ಟ್ರಂಪ್ ಕಾರ್ಡ್ ಪ್ರಯೋಗಿಸಿದ್ದಾರೆ.

ರಾಜ್ಯದಲ್ಲಿ ಮೈತ್ರಿ ಸರ್ಕಾರದ ಅಧಿಕಾರ, ಸಚಿವರು, ಶಾಸಕರು, ಸಂಸದರು ಸೇರಿ ಕಾಂಗ್ರೆಸ್​ನ ಬೃಹತ್ ಸೈನ್ಯ ಪ್ರಚಾರ ಕಣಕ್ಕೆ ಧುಮುಕಿರುವುದು ಉಗ್ರಪ್ಪ ಬಲ ಹೆಚ್ಚಿಸಿದೆ. ಜಾತಿ, ಬೆಡಗು, ಬೀಗತನ ಪ್ರಸ್ತಾಪಿಸುವ ಮೂಲಕ ಉಗ್ರಪ್ಪ ಸಮುದಾಯದ ಮತ ಸೆಳೆವ ಪ್ರಯತ್ನ ನಡೆಸಿದರು. ಉಗ್ರಪ್ಪ ಕಾನೂನು ಪಂಡಿತ, ವಾಗ್ಮಿ. ಇವರನ್ನು ಗೆಲ್ಲಿಸಿದರೆ ಸಂಸತ್​ನಲ್ಲಿ ಜಿಲ್ಲೆ ಬಗ್ಗೆ ಧ್ವನಿ ಎತ್ತಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಪ್ರಚಾರ ನಡೆಸಿದ್ದಾರೆ.

ಶ್ರೀರಾಮುಲು ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಯೋಗಿಸಿದ 420 ಸೆಕ್ಷನ್​ಗಳು, ಕನ್ನಡ ಭಾಷೆ ಬರುವುದಿಲ್ಲ ಎಂಬ ಆರೋಪಗಳು ಬಿಜೆಪಿಗೆ ಅಸ್ತ್ರವಾಗಿವೆ. ವಾಲ್ಮೀಕಿ ಸಮುದಾಯವನ್ನು ಸಿದ್ದರಾಮಯ್ಯ ಅವಮಾನಿಸಿದ್ದಾರೆಂದು ಬಿಜೆಪಿ ನಾಯಕರು ತಿರುಗುಬಾಣ ಬಿಡುತ್ತಿದ್ದಾರೆ. ಕನಕಪುರದ ಗೌಡರು (ಡಿಕೆಶಿ) ಶೋಷಿತ ಸಮುದಾಯವನ್ನು ತುಳಿಯಲೆಂದೇ ಜಿಲ್ಲೆಗೆ ಬಂದಿದ್ದಾರೆಂದು ರಾಮುಲು ಜಾತಿ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಜತೆಗೆ ಕಾಂಗ್ರೆಸ್ ನಾಯಕರಿಗೆ ಅಭಿವೃದ್ಧಿ ಕುರಿತ ಸವಾಲನ್ನೂ ಹಾಕುತ್ತಿದ್ದಾರೆ. ‘ರಾಮುಲು ಅಣ್ಣಾವ್ರು’ ಎನ್ನುವ ಮೂಲಕ ಮೇಲ್ನೋಟಕ್ಕೆ ಸೌಹಾರ್ದದ ಸಂದೇಶ ರವಾನಿಸುತ್ತಿದ್ದಾರೆ ಡಿಕೆಶಿ. ಬಿಜೆಪಿ ಆಡಳಿತಾವಧಿಯಲ್ಲಿ ಜಿಲ್ಲೆಯ ಪರಿಸ್ಥಿತಿ, ಗಣಿಗಾರಿಕೆ ಸ್ಥಗಿತ ಬಳಿಕ ಬದಲಾದ ಸ್ಥಿತಿಯನ್ನು ಕಾಂಗ್ರೆಸ್ ನಾಯಕರು ಎಳೆಎಳೆಯಾಗಿ ಬಿಚ್ಚಿಡುತ್ತಿದ್ದಾರೆ.

ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಒಂದು ಬಾರಿ ಸಂಸದೆಯಾಗಿ, ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ 3 ಬಾರಿ ಎಂಎಲ್ಸಿಯಾಗಿ ರಾಜಕೀಯದಲ್ಲಿ ಮುಂಚೂಣಿಯಲ್ಲಿದ್ದರು. ಅಭ್ಯರ್ಥಿಗಳು ಹಾಗೂ ಪಕ್ಷಗಳ ಬದಲಿಗೆ ಡಿ.ಕೆ.ಶಿವಕುಮಾರ್ ಹಾಗೂ ಶ್ರೀರಾಮುಲು ಮಿಂಚುತ್ತಿದ್ದು, ಚುನಾವಣೆಯಲ್ಲಿ ಯಾರೇ ಗೆದ್ದರೂ ಅದು ಈ ಇಬ್ಬರಲ್ಲೊಬ್ಬರ ಗೆಲುವಾಗಿ ಬಿಂಬಿಸಲ್ಪಡುವುದು ನಿಶ್ಚಿತ.

ಕೈಗೆ ಸ್ವಂತ ಶಕ್ತಿ ಬಲ

ಲೋಕಸಭಾ ಕ್ಷೇತ್ರಕ್ಕೆ ಇದುವರೆಗೆ ನಡೆದಿರುವ 17 ಚುನಾವಣೆಗಳಲ್ಲಿ 14 ಬಾರಿ ಕಾಂಗ್ರೆಸ್ ಹಾಗೂ ಮೂರು ಬಾರಿ ಬಿಜೆಪಿ ಗೆಲುವು ಸಾಧಿಸಿವೆ. ಕ್ಷೇತ್ರದಲ್ಲಿ ಜೆಡಿಎಸ್ ಬಲ ಕ್ಷೀಣವಾಗಿರುವುದರಿಂದ ಕಾಂಗ್ರೆಸಿಗೆ ಸ್ವಂತ ಬಲವೇ ಶಕ್ತಿಯಾಗಿದೆ. 14 ವರ್ಷಗಳ ಹಿಂದೆ ಕ್ಷೇತ್ರವನ್ನು ಕಳೆದುಕೊಂಡಿರುವ ಕಾಂಗ್ರೆಸ್ ಮತ್ತೆ ಮೇಲುಗೈ ಸಾಧಿಸುವ ಪ್ರಯತ್ನದಲ್ಲಿದ್ದರೆ, ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಬಿಜೆಪಿ ಕ್ಷೇತ್ರ ಉಳಿಸಿಕೊಳ್ಳಲು ಪ್ರಯತ್ನ ನಡೆಸಿದೆ. ಕ್ಷೇತ್ರದಲ್ಲಿ ಲಿಂಗಾಯತರು, ಪರಿಶಿಷ್ಟ ಜಾತಿ, ಪಂಗಡ, ಕುರುಬರು ನಿರ್ಣಾಯಕರಾಗಿರುವುದರಿಂದ ಉಭಯ ಪಕ್ಷಗಳ ಮುಖಂಡರು ಸಮುದಾಯವಾರು ಮತ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.

Stay connected

278,749FansLike
581FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...