ನನಗೆ ಟೆನ್ಷನ್​ ಇಲ್ಲ, ಅತಿ ಹೆಚ್ಚು ಬಹುಮತದಿಂದ ನಾನು ಗೆಲ್ಲುತ್ತೇನೆ: ವಿ.ಎಸ್​.ಉಗ್ರಪ್ಪ

ಬಳ್ಳಾರಿ: ನನಗೆ ಯಾವ ಟೆನ್ಷನ್​ ಇಲ್ಲ. ನಾನು ನಿನ್ನೆ, ಮೊನ್ನೆ ರಾಜಕಾರಣಕ್ಕೆ ಬಂದಿಲ್ಲ. ತುಂಬಾ ವರ್ಷದಿಂದ ಸಾರ್ವಜನಿಕ ಬದುಕಿನಲ್ಲಿದ್ದೇನೆ. ಈ ಬಾರಿ ಅತಿ ಹೆಚ್ಚು ಬಹುಮತದ ಅಂತರದಿಂದ ಆಯ್ಕೆಯಾಗುತ್ತೇನೆ ಎಂದು ಬಳ್ಳಾರಿ ಲೋಕಸಭಾ ಮೈತ್ರಿ ಅಭ್ಯರ್ಥಿ ವಿ.ಎಸ್​.ಉಗ್ರಪ್ಪ ತಿಳಿಸಿದ್ದಾರೆ.

ದಿಗ್ವಿಜಯ ನ್ಯೂಸ್​ನೊಂದಿಗೆ ಮಾತನಾಡಿ, ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮತ್ತು ಮತದಾನದ ನಂತರ ಜನಾಭಿಪ್ರಾಯಗಳನ್ನು ನೋಡಿದರೆ ನನ್ನ ಗೆಲುವು ಸ್ಪಷ್ಟವಾಗಿ ಗೋಚರಿಸುತ್ತಿದೆ. ನಾನು ಅತ್ಯಂತ ಹೆಚ್ಚು ಬಹುಮತದಿಂದ ಈ ಚುನಾವಣೆಯಲ್ಲಿ ಆಯ್ಕೆಯಾಗುತ್ತೇನೆ. ಈ ಭರವಸೆ ನನಗೆ ಹಾಗೂ ನನ್ನ ಪಕ್ಷದ ನಾಯಕತ್ವಕ್ಕಿದೆ ಎಂದರು.

ಬಳ್ಳಾರಿ ಲೋಕಸಭಾ ಕ್ಷೇತ್ರದ ಮತದಾರರು ಬಹಳ ಪ್ರಬುದ್ಧರಾಗಿದ್ದಾರೆ. ಅಭ್ಯರ್ಥಿ ಹಿನ್ನೆಲೆಯನ್ನು ತಿಳಿದುಕೊಂಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ, ಅಭಿವೃದ್ಧಿ ದೃಷ್ಟಿ, ಸಾಮಾಜಿಕ ಕಾರ್ಯದಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ಕೊಡುಗೆಗಳೇನು ಎಂದು ಅರಿತು ಮತ ಹಾಕಿದ್ದಾರೆ ಎಂದರು. (ದಿಗ್ವಿಜಯ ನ್ಯೂಸ್)