ಕಬ್ಬನ್ ಪಾರ್ಕ್​ನಲ್ಲಿ ಚಿಟ್ಟೆ ಉದ್ಯಾನ, ಪವಿತ್ರ ವನ ನಿರ್ಮಾಣಕ್ಕೆ ನಿರ್ಧಾರ

ಬೆಂಗಳೂರು: ಕಬ್ಬನ್ ಉದ್ಯಾನವನದಲ್ಲಿ ‘ಚಿಟ್ಟೆ ಪಾರ್ಕ್’ ಮತ್ತು ವಿವಿಧ ಬಗೆಯ ಹೂಗಿಡಗಳ ‘ಪವಿತ್ರ ವನ’  ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆ ನಿರ್ಧರಿಸಿದೆ. ಇದಲ್ಲದೆ ಉದ್ಯಾನವನದಲ್ಲಿ 65 ಇಂಗುಬಾವಿಗಳ ನಿರ್ಮಾಣಕ್ಕೆ ಮುಂದಾಗಿದೆ.

190 ಎಕರೆ ವಿಸ್ತೀರ್ಣದಲ್ಲಿರುವ ಉದ್ಯಾನದಲ್ಲಿ ಚಿಟ್ಟೆ ಪಾರ್ಕ್ ಮತ್ತು ಪವಿತ್ರವನ ನಿರ್ಮಾಣಕ್ಕೆ ಈಗಾಗಲೇ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪರಿಸರತಜ್ಞ ಡಾ. ಯಲ್ಲಪ್ಪ ರೆಡ್ಡಿ ನೇತೃತ್ವದಲ್ಲಿ ಬಿಳಗಿರಿ ರಂಗನಬೆಟ್ಟ ಸೇರಿ ಹಲವೆಡೆ ಪರಿಶೀಲನೆ ನಡೆಸಿದೆ. ಹೆಚ್ಚು ಹಕ್ಕಿಗಳನ್ನು ಆಕರ್ಷಿಸುವ ಗಿಡಗಳನ್ನು ಬೆಳೆಯಲು ತೀರ್ವನಿಸಲಾಗಿದೆ. ಸದ್ಯದಲ್ಲಿಯೇ ಸಸಿಗಳ ನಾಟಿ ಕಾರ್ಯ ಆರಂಭಗೊಳ್ಳಲಿದೆ.

ಅರ್ಧ ಎಕರೆಯಲ್ಲಿ ಚಿಟ್ಟೆ ಪಾರ್ಕ್: ಉದ್ಯಾನದ ಕರಗದಕುಂಟೆ ಅಕ್ಕಪಕ್ಕ ಮತ್ತು ಟೆನಿಸ್ ಕೋರ್ಟ್ ಪಕ್ಕದಲ್ಲಿ ಚಿಟ್ಟೆ ಪಾರ್ಕ್ ನಿರ್ವಿುಸಲು ಸ್ಥಳವನ್ನು ಗುರುತಿಸಲಾಗಿದೆ. ಚಿಟ್ಟೆಗಳನ್ನು ಆಕರ್ಷಿಸಲು ಬೇಕಾಗುವ ಕೆಲವು ಔಷಧಗಳನ್ನು ಸಿಂಪಡಿಸುವುದರೊಂದಿಗೆ ಅವುಗಳು ಹೆಚ್ಚು ಆಕರ್ಷಿತವಾಗುವ ಹೂಗಿಡಗಳನ್ನು ಬೆಳೆಸಲು ತೀರ್ವನಿಸಲಾಗಿದೆ. ಇನ್ನೊಂದೆಡೆ ಸ್ವಚ್ಛಂದ ಪರಿಸರ, ಶಾಂತ ವಾತಾವರಣ ನೆಲೆಸುವಂತೆ ಮಾಡಲು ಪವಿತ್ರವನ ನಿರ್ವಣಕ್ಕೂ ತೋಟಗಾರಿಕೆ ಇಲಾಖೆ ಮುಂದಾಗಿದೆ. ದೇವರು, ಆಧ್ಯಾತ್ಮಿಕ ಕಾರ್ಯಗಳಿಗೆ ಹೆಚ್ಚಾಗಿ ಬಳಕೆ ಆಗುವ ಕದಿರಾ, ಬ್ರಹ್ಮವೃಕ್ಷ, ಈಶ್ವರ ಬಳ್ಳಿ, ನಾಡಿಬಟ್ಟಲು, ಸೌಗಂಧಿಕಾ, ಬನ್ನಿ, ಹತ್ತಿಮರ, ಬಿಲ್ವಪತ್ರೆ, ಅಶ್ವತ್ಥಮರ, ನಾಗಸಂಪಿಗೆ, ನಾಗಲಿಂಗ ಪುಷ್ಪ, ಸೀತಾ ಅಶೋಕ ಗಿಡಗಳನ್ನು ಬೆಳೆಸಲು ತೀರ್ವನಿಸಲಾಗಿದೆ.

ಇಂಗುಬಾವಿಗಳ ನಿರ್ಮಾಣ : ಕಬ್ಬನ್ ಉದ್ಯಾನದಲ್ಲಿ ಮಳೆ ಬಿದ್ದಾಗ ಹೊರಹೋಗುವ ನೀರನ್ನು ತಡೆದು ಅಲ್ಲಿರುವ ಬಾವಿಗಳು, ಬೋರ್​ವೆಲ್​ಗಳಿಗೆ ನೀರು ದೊರೆಯುವಂತೆ ಮಾಡಲು 65 ಇಂಗುಬಾವಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. 15-18 ಅಡಿ ಆಳದ ಗುಂಡಿಗಳನ್ನು ಅಗೆಯಲಾಗುತ್ತಿದೆ. ಇದರಿಂದ ಉದ್ಯಾನವನ ಸದಾ ತಂಪಾಗಿರುತ್ತದೆ ಎಂಬುದು ಫ್ರೆಂಡ್ಸ್ ಆಫ್ ಲೇಕ್ಸ್​ನ ಮುಖ್ಯಸ್ಥ ರಾಮ್​ಪ್ರಸಾದ್​ ಅಭಿಪ್ರಾಯವಾಗಿದೆ.

ಇಂಡಿಯಾ ಕೇರ್ಸ್ ಎಂಬ ಕಂಪನಿ ಫಸ್ಟ್ ಅಮೆರಿಕನ್ (ಇಂಡಿಯಾ) ಸಂಸ್ಥೆ ಮೂಲಕ ಇಂಗುಬಾವಿಗಳ ನಿರ್ವಣಕ್ಕೆ ಆರ್ಥಿಕ ನೆರವು ಒದಗಿಸುತ್ತಿದೆ. ನುರಿತ ಕಾರ್ವಿುಕರಿಂದ ಬಾವಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಪಾರ್ಕ್​ನಲ್ಲಿ ಬಳಕೆ ಆಗದೆ ಉಳಿದಿದ್ದ 7 ಬಾವಿಗಳನ್ನು ಎರಡು ವರ್ಷಗಳ ಹಿಂದೆ ಅಭಿವೃದ್ಧಿಪಡಿಸಲಾಗಿದ್ದು, ಅದರ ಮುಂದುವರಿದ ಭಾಗವಾಗಿ 65 ಗುಂಡಿಗಳನ್ನು ನಿರ್ವಿುಸಲಾಗುತ್ತಿದೆ. ಈಗಾಗಲೇ 30 ಇಂಗುಬಾವಿಗಳನ್ನು ನಿರ್ವಿುಸಲಾಗಿದ್ದು, ತಿಂಗಳೊಳಗಾಗಿ ನಿಗದಿತ ಇಂಗುಬಾವಿಗಳು ನಿರ್ವಣಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.

ಉದ್ಯಾನದ ಅಭಿವೃದ್ಧಿಯನ್ನು ಹಂತಹಂತವಾಗಿ ಕೈಗೊಳ್ಳಲಾಗುತ್ತಿದೆ. ಉದ್ಯಾನದ ಪ್ರವೇಶ ದ್ವಾರದಿಂದ ಹಿಡಿದು ಇಡೀ ಕಬ್ಬನ್​ಪಾರ್ಕ್​ನ ಚಿತ್ರಣವೇ ಬದಲಾಗುತ್ತಿದೆ. ಸಿಸಿ ಕ್ಯಾಮರಾ, ಸ್ಮಾರ್ಟ್​ಲೈಟ್ ವ್ಯವಸ್ಥೆ ಮಾತ್ರವಲ್ಲದೆ ಪರಿಸರಕ್ಕೆ ಪೂರಕವಾಗಿರುವ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಏಳು ಬಾವಿಗಳು ಉದ್ಯಾನವನಕ್ಕೆ ಬಹಳಷ್ಟು ಅನುಕೂಲ ಮಾಡಿಕೊಟ್ಟಿದ್ದು, ಇಂಗುಬಾವಿ ಗಳಿಂದಲೂ ಸಾಕಷ್ಟು ಪ್ರಯೋಜನವಿದೆ.

| ಮಹಾಂತೇಶ ಮುರಗೋಡು, ತೋಟಗಾರಿಕೆ ಇಲಾಖೆ ಉಪನಿರ್ದೇಶಕ

 

500 ಬಿದಿರು ಸಸಿಗಳ ನಾಟಿ

ಕಬ್ಬನ್​ಪಾರ್ಕ್​ನಲ್ಲಿ ಈಗಾಗಲೇ ತೆರವುಗೊಳಿಸಲಾಗಿರುವ ಬಿದಿರು ಮರಗಳ ಸ್ಥಳದಲ್ಲಿ ಹೊಸದಾಗಿ 12 ಬಗೆಯ 500 ಬಿದಿರು ಮರಗಳನ್ನು ಬೆಳೆಸಲು ಸಸಿಗಳ ನಾಟಿ ಮಾಡಲಾಗುತ್ತಿದೆ. ಪಕ್ಷಿಗಳನ್ನು ಹೆಚ್ಚಾಗಿ ಆಕರ್ಷಿಸಲು ಕಾಡಿನಲ್ಲಿ ಬೆಳೆಯಲಾಗುವ ಹಣ್ಣಿನ ಮರಗಳ ಜತೆಗೆ ಮಾವು, ಹಲಸಿನ ಗಿಡಗಳನ್ನು ಬೆಳೆಸಲು ತೀರ್ವನಿಸಲಾಗಿದೆ. ಒಟ್ಟಾರೆ ಉದ್ಯಾನಕ್ಕೆ ಹೊಸ ಸ್ಪರ್ಶ ನೀಡಲಾಗುವುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡು ತಿಳಿಸಿದ್ದಾರೆ. ಇದಲ್ಲದೆ ಕರಗದಕುಂಟೆ ಬಾಲಭವನ ಮುಂಭಾಗ, ಚಾಮರಾಜೇಂದ್ರ ಒಡೆಯರ್ ಪ್ರತಿಮೆ ಬಳಿಯಿರುವ ಕಲ್ಯಾಣಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಮಳೆಗಾಲದ ವೇಳೆಗೆ ಕಬ್ಬನ್ ಉದ್ಯಾನವನ ಹೊಸ ರೂಪ ಪಡೆಯಲಿದೆ. ಮೊದಲ ಹಂತದಲ್ಲಿ 7 ಬಾವಿಗಳನ್ನು ಅಭಿವೃದ್ಧಿಪಡಿಸಲಾಗಿದ್ದು ಸಾಕಷ್ಟು ಅನುಕೂಲ ಕಲ್ಪಿಸಿದೆ ಎಂದು ಫ್ರೆಂಡ್ಸ್ ಆಫ್ ಲೇಕ್ಸ್​ನ ಮುಖ್ಯಸ್ಥ ರಾಮ್​ಪ್ರಸಾದ್​ ಸಾದ್ ತಿಳಿಸಿದ್ದಾರೆ.

 

| ಅಭಯ್​ ಮನಗೂಳಿ, ಬೆಂಗಳೂರು

Leave a Reply

Your email address will not be published. Required fields are marked *