ಜೀವಜಲ ದಾನಿಯಾದ ಉದ್ಯಮಿ

Latest News

ಐತಿಹಾಸಿಕ ಪಿಂಕ್​ ಬಾಲ್​ ಟೆಸ್ಟ್​​ ಸ್ಮರಣೀಯವಾಗಿಸಲು ಕೋಲ್ಕತದ ಪ್ರಮುಖ ಕಟ್ಟಡಗಳಲ್ಲಿ ರಾರಾಜಿಸುತ್ತಿವೆ 3D ಮ್ಯಾಪಿಂಗ್​!

ಕೋಲ್ಕತ: ಐತಿಹಾಸಿಕ ಪಿಂಕ್​ ಬಾಲ್​ ಟೆಸ್ಟ್​​​ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಆತಿಥೇಯ ಭಾರತ ಮತ್ತು ಪ್ರವಾಸಿ ಬಾಂಗ್ಲಾದೇಶ ಚೊಚ್ಚಲ ಹಗಲು-ಇರುಳು ಟೆಸ್ಟ್​ ಪಂದ್ಯವನ್ನು...

ಅಂದಿನ ಮಂಡ್ಯದ ಸ್ವಾಭಿಮಾನದ ಕಹಳೆ ಇಂದು ಕೆ.ಆರ್​.ಪೇಟೆಗೆ ಶಿಫ್ಟ್​!

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮೊಳಗಿದ್ದ ಕಹಳೆ ಧ್ವನಿ ಜಿಲ್ಲೆಯಲ್ಲಿ ಮತ್ತೆ ಮೊಳಗಲಿದೆ. ಉಪ ಚುನಾವಣೆಯಲ್ಲಿ ಕೆ.ಆರ್.ಪೇಟೆ ಪಕ್ಷೇತರ ಅಭ್ಯರ್ಥಿ ಸರ್ವೇ ದೇವೇಗೌಡಗೆ ಚುನಾವಣಾ ಆಯೊಗ...

ಅನಾಮಧೇಯ ಕರೆಯಿಂದ ನಿಂತ ಮದುವೆ; ಬೇರೊಬ್ಬ ಹುಡುಗನ ಜತೆ ನಿಶ್ಚಯ

ರಾಮನಗರ: ವಧುವಿಗೆ ಬಂದ ಅನಾಮಧೇಯ ಪೋನ್​ಕಾಲ್​ನಿಂದ ಮುರಿದು ಬಿದ್ದ ಮದುವೆ, ಬೇರೊಬ್ಬ ಹುಡುಗನ ಜತೆ ನಿಶ್ಚಯವಾಗುವ ಮೂಲಕ ಸುಖಾಂತ್ಯಗೊಂಡಿದೆ. ಮದುವೆ ನಿಶ್ಚಯವಾಗಿದ್ದ ಗಂಡಿಗೆ ಮೊದಲೇ...

ಮೈದಾನ ಯಾವುದೇ ಇರಲಿ, ಬಾಲ್ ಯಾವುದೇ ಆಗಲಿ​ ಶಮಿ ತುಂಬಾ ಡೇಂಜರಸ್​ ಎಂದ ಆಟಗಾರನ್ಯಾರು?

ಕೋಲ್ಕತ: ಮೊದಲ ಬಾರಿಗೆ ಅಹರ್ನಿಶಿ ಟೆಸ್ಟ್​ ಪಂದ್ಯವನ್ನಾಡಲು ಟೀಮ್​​ ಇಂಡಿಯಾ ತುದಿಗಾಲಲ್ಲಿ ನಿಂತಿದೆ. ಇಂದು ಆರಂಭವಾಗಲಿರುವ ಪಂದ್ಯಕ್ಕೆ ಅನೇಕ ಗಣ್ಯರು ಸಾಕ್ಷಿಯಾಗಲಿದ್ದಾರೆ. ಇದರ...

ಶಾಸಕ ತನ್ವೀರ್ ಸೇಠ್ ಕೊಲೆ ಯತ್ನ ಪ್ರಕರಣ: ಸ್ಥಳೀಯ ಪೊಲೀಸರಿಗೆ ಕೇಂದ್ರ ಗುಪ್ತದಳ ಸಾಥ್​

ಮೈಸೂರು: ಶಾಸಕ ತನ್ವೀರ್ ಸೇಠ್ ಕೊಲೆ ಯತ್ನ ಪ್ರಕರಣ ದಿನದಿನಕ್ಕೂ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಕೊಲೆ ಪ್ರಕರಣ ಸಂಬಂಧ ಮೈಸೂರು ಪೊಲೀಸರ ತನಿಖೆಗೆ...

<ಕೊಣಾಜೆಯಲ್ಲಿ ಸ್ವಂತ ಖರ್ಚಿನಲ್ಲಿ ನೀರು ಪೂರೈಕೆ!>

ಅನ್ಸಾರ್ ಇನೋಳಿ ಉಳ್ಳಾಲ
ಬೇಸಿಗೆ ಕಾಲ ಸನಿಹದಲ್ಲಿದೆ. ಅದಾಗಲೇ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಆರಂಭವಾಗಿದೆ. ಎಲ್ಲ ಗ್ರಾಮಗಳಿಗಿಂತ ಮೊದಲೇ ಕೊಣಾಜೆಯಲ್ಲಿ ಸಮಸ್ಯೆ ಗಂಭೀರವಾಗಿ ಕಾಡುತ್ತಿದೆ. ಇದೇ ವೇಳೆ ಉದ್ಯಮಿಯೊಬ್ಬರು ಕಳೆದೆರಡು ವರ್ಷಗಳಿಂದ ಸ್ವಂತ ಖರ್ಚಿನಲ್ಲಿ ನೀರು ಪೂರೈಸುತ್ತಿದ್ದಾರೆ.

ಕೊಣಾಜೆ ಗ್ರಾಮದಲ್ಲಿ ಹಿಂದಿನಿಂದಲೂ ಜಲಮೂಲದ ಸಮಸ್ಯೆ ಇದೆ. ಇದರ ಪರಿಣಾಮವಾಗಿ ಮಳೆಗಾಲ ದೂರವಾಗುತ್ತಲೇ ನೀರಿನ ಸಮಸ್ಯೆ ಶುರುವಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಿಂದಿನ ಪಂಚಾಯಿತಿ ಆಡಳಿತ ನಡೆಸಿದ ಪ್ರಯತ್ನ ಪೂರ್ಣ ಪ್ರಮಾಣದಲ್ಲಿ ಫಲ ನೀಡಿಲ್ಲ. ಇದರಿಂದಾಗಿ ಪ್ರತಿವರ್ಷದಂತೆ ಈ ಬಾರಿಯೂ ಅಸೈಗೋಳಿ ಸೈಟ್, ಕಲ್ಲುಗುಡ್ಡೆ, ಕೊಣಾಜೆಯಲ್ಲಿ ನೀರಿನ ಸಮಸ್ಯೆ ಆರಂಭಗೊಂಡು ತಿಂಗಳಾಗಿದ್ದು, ಟ್ಯಾಂಕರ್ ನೀರೇ ಜನರಿಗೆ ಜೀವನಾಡಿಯಾಗಿದೆ.

ಮೂಲತಃ ಕಣಂತೂರು ನಿವಾಸಿಯಾಗಿರುವ ದೇವಣ್ಣ ಶೆಟ್ಟಿ ಏಳು ವರ್ಷಗಳಿಂದ ಕೊಣಾಜೆ ಗ್ರಾಮದ ಪರಂಡೆ ಸಮೀಪ ಮನೆ ನಿರ್ಮಿಸಿ ವಾಸವಿದ್ದಾರೆ. ಅವರ ಆಗಮನ ಸ್ಥಳೀಯರ ಪಾಲಿಗೆ ವರದಾನವಾಗಿದೆ. ಧಾರ್ಮಿಕ ಕ್ಷೇತ್ರ, ನೊಂದವರು, ಸರ್ಕಾರಿ ಮಟ್ಟದಲ್ಲಿನ ಸಂಸ್ಥೆಗಳ ಸಮಸ್ಯೆಗಳಿಗೆ ಸದಾ ಕೊಡುಗೆ ನೀಡುತ್ತಾ ಬಂದಿರುವ ಅವರು, ನೀರಿನ ಸಮಸ್ಯೆಗೂ ಪರಿಹಾರ ಕಲ್ಪಿಸಿದ್ದಾರೆ.

ಎರಡು ವರ್ಷಗಳ ಹಿಂದೆ ನೀರಿನ ಸಮಸ್ಯೆ ಗಂಭೀರವಾದಾಗ ಮನೆ ಆವರಣದಲ್ಲಿ ಕೊಳವೆಬಾವಿ ತೋಡಿಸಿದ್ದು, ಮನೆಯಿಂದ ಸುಮಾರು ಮುನ್ನೂರು ಮೀಟರ್ ದೂರವಿರುವ ಪಂಚಾಯಿತಿಯ 12 ಸಾವಿರ ಲೀಟರ್ ಟ್ಯಾಂಕ್‌ಗೆ ನೀರು ಹಾಕುವ ವ್ಯವಸ್ಥೆ ಮಾಡಿದ್ದಾರೆ. ಇದರ ಫಲವಾಗಿ ಸ್ಥಳೀಯ 60 ಮನೆಗಳಿಗೆ ಕಳೆದೆರಡು ವರ್ಷಗಳಿಂದ ನೀರಿನ ಸಮಸ್ಯೆ ಎದುರಾಗಿಲ್ಲ.

ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಟ್ಯಾಂಕ್ ತುಂಬಿಸಲಾಗುತ್ತದೆ. ಇದರ ವಿದ್ಯುತ್ ಬಿಲ್ ಮಾಸಿಕ ಆರರಿಂದ ಏಳು ಸಾವಿರ ರೂ. ಬರುತ್ತಿದ್ದು, ಅದನ್ನೂ ದೇವಣ್ಣ ಶೆಟ್ರು ಕಟ್ಟುತ್ತಾ ಬಂದಿದ್ದಾರೆ. ಟ್ಯಾಂಕ್ ಶುಚಿತ್ವಕ್ಕೂ ಮುತುವರ್ಜಿ ವಹಿಸಿದ್ದಾರೆ. ಮೂರು ವರ್ಷಗಳ ಹಿಂದೆ ಪಕ್ಕದ ಕೊಳವೆ ಬಾವಿಯಲ್ಲೂ ಪಂಪ್ ಸಮಸ್ಯೆ ಕಾಣಸಿಕೊಂಡಾಗ ಸ್ವಂತ ಖರ್ಚಿನಲ್ಲಿ ಎರಡು ಎಚ್‌ಪಿ ಪಂಪ್ ಅಳವಡಿಸುವ ಮೂಲಕ ಸಾಮಾಜಿಕ ಬದ್ಧತೆ ಮೆರೆದಿದ್ದಾರೆ.

ಹರೇಕಳ ಅಣೆಕಟ್ಟಿನ ಕನಸು: ಕೊಣಾಜೆ ಗ್ರಾಮದಲ್ಲಿ ನೀರಿನ ಮೂಲ ಇಲ್ಲದ ಕಾರಣ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಗ್ರಾಮದಲ್ಲೇ ಇರುವ ಮಂಗಳೂರು ವಿಶ್ವವಿದ್ಯಾಲಯಕ್ಕೆ ದೂರದ ತುಂಬೆಯಿಂದ ನೀರಿನ ವ್ಯವಸ್ಥೆ ಮಾಡಲಾಗಿದೆ. ಗ್ರಾಮಸ್ಥರು ಕುಡಿಯುವ ನೀರಿಗೆ ಪರಿತಪಿಸುತ್ತಿದ್ದರೆ, ವಿವಿ ಆವರಣದಲ್ಲಿರುವ ಉದ್ಯಾನ ಹಚ್ಚಹಸಿರಿನಿಂದ ಕಂಗೊಳಿಸುವುದನ್ನು ಕಂಡು ಗ್ರಾಮಸ್ಥರು ಮರುಕಪಡಬೇಕಾಗಿದೆ. ಒಂದೆರೆಡು ಗಂಟೆ ಗ್ರಾಮಕ್ಕೂ ನೀರು ಕೊಡಬೇಕೆಂದು ಹಿಂದೆಯೇ ವಿವಿಗೆ ಪಂಚಾಯಿತಿ ಮಾಡಿದ ಮನವಿ ಪ್ರಯೋಜನಕ್ಕೆ ಬಂದಿಲ್ಲ. ಬಳಿಕ ಅಂತಹ ಆಸೆಯನ್ನು ಕೈಬಿಟ್ಟಿರುವ ಗ್ರಾಮಸ್ಥರು ಹರೇಕಳದಲ್ಲಿ 174 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಅಣೆಕಟ್ಟಿನ ಕನಸು ಕಾಣುತ್ತಿದ್ದಾರೆ.

ಮನುಷ್ಯ ಎಷ್ಟು ಸಂಪಾದಿಸಿದರೂ ಜೀವಂತ ಇರುವವರೆಗೆ ಮಾತ್ರ. ಸಮಾಜದಲ್ಲಿ ಪ್ರತಿಯೊಬ್ಬರೂ ಸೌಹಾರ್ದ, ನೆಮ್ಮದಿಯಿಂದ ಇರಲು ಸಹಾಯ ಹಸ್ತ ನೀಡುವುದು ಮುಖ್ಯ. ಇದರಿಂದ ಊರಿನ ಅಭಿವೃದ್ಧಿಯೂ ಸಾಧ್ಯ. ಈ ನಿಟ್ಟಿನಲ್ಲಿ ದೇವರು ಕೊಟ್ಟ ನೀರು ಹತ್ತು ಮಂದಿಗೆ ಹಂಚಿ ಅವರಲ್ಲಿ ನೆಮ್ಮದಿ ಕಾಣುತ್ತಿದ್ದೇನೆ.
– ದೇವಣ್ಣ ಶೆಟ್ಟಿ ಉಚಿತ ನೀರು ನೀಡುತ್ತಿರುವ ದಾನಿ

ದೇವಣ್ಣ ಶೆಟ್ಟರು ಗ್ರಾಮದಲ್ಲಿ ಸಾಕಷ್ಟು ಸಾಮಾಜಿಕ ಸೇವೆ ನಡೆಸುತ್ತಾ ಬಂದಿದ್ದಾರೆ. ಕಳೆದ ಎರಡು ವರ್ಷಗಳಿಂದ 60 ಮನೆಗಳಿಗೆ ಉಚಿತವಾಗಿ ನೀರು ನೀಡುವ ಮೂಲಕ ಸ್ಥಳೀಯ ಪ್ರದೇಶದಲ್ಲಿ ನೀರಿನ ಸಮಸ್ಯೆಗೆ ಪರಿಹಾರ ದೊರಕಿಸಿದ್ದಾರೆ.
– ಗುಲಾಬಿ, ಗ್ರಾಮ ಪಂಚಾಯಿತಿ ಸದಸ್ಯೆ

ಹಿಂದಿನಿಂದಲೂ ಮಳೆಗಾಲ ಮುಗಿಯುತ್ತಲೇ ಗ್ರಾಮದಲ್ಲಿ ನೀರಿನ ಸಮಸ್ಯೆ ಗಂಭೀರವಾಗಿ ಕಾಡುತ್ತದೆ. ಒಂದು ವೇಳೆ ದೇವಣ್ಣ ಶೆಟ್ಟರು ಸಹಾಯಹಸ್ತ ಚಾಚದಿದ್ದಲ್ಲಿ ಸ್ಥಳೀಯ ಭಾಗದ ನಿವಾಸಿಗಳು ನೀರಿಗಾಗಿ ಪರದಾಡಬೇಕಿತ್ತು.
– ಜೀವನ್ ವಿನೋದ್, ನೀರು ನಿರ್ವಾಹಕ

- Advertisement -

Stay connected

278,656FansLike
575FollowersFollow
611,000SubscribersSubscribe

ವಿಡಿಯೋ ನ್ಯೂಸ್

VIDEO| ಡಿಆರ್​ಐ ಅಧಿಕಾರಿಗಳ ದಾಳಿ ವೇಳೆ 6ನೇ ಮಹಡಿಯಿಂದ ಕೆಳಗೆ...

ಕೋಲ್ಕತ: ಪಶ್ಚಿಮ ಬಂಗಾಳದ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್​ಐ) ಅಧಿಕಾರಿಗಳು ಬುಧವಾರ ಮಧ್ಯಾಹ್ನ ಕೇಂದ್ರ ಕೋಲ್ಕತದ ಬೆಂಟಿಂಕ್ ಸ್ಟ್ರೀಟ್​ನಲ್ಲಿನ ಖಾಸಗಿ ಕಚೇರಿಯೊಂದಕ್ಕೆ ದಾಳಿ ನಡೆಸಿದ್ದ ವೇಳೆ ಕಟ್ಟಡದ ಆರನೇ ಮಹಡಿಯಿಂದ ನೋಟಿನ...

VIDEO| ಹಾಡುಗಳ ಮೂಲಕವೇ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರದ...

ಬೆಂಗಳೂರು: ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ, ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯಾ...

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ರಸ್ತೆಯಲ್ಲಿ ಎಂಬಿಎ ವಿದ್ಯಾರ್ಥಿನಿಯ ವಿಭಿನ್ನ ನೃತ್ಯ; ಇದು ಮನರಂಜನೆಗೆ...

ಇಂದೋರ್​: ವಾಹನ ಸವಾರರಿಗೆ ಟ್ರಾಫಿಕ್​ ನಿಯಮಗಳನ್ನು ಅರ್ಥ ಮಾಡಿಸುವುದು ಟ್ರಾಫಿಕ್​ ಪೊಲೀಸರಿಗೆ ದೊಡ್ಡ ಸಾಹಸವೇ ಸರಿ. ಬೈಕ್​ ಸವಾರರು ಹೆಲ್ಮೆಟ್​ ಧರಿಸುವುದಿಲ್ಲ, ಕಾರು ಚಾಲಕರು ಸೀಟ್​ ಬೆಲ್ಟ್​ ಹಾಕಿಕೊಂಡಿರುವುದಿಲ್ಲ...ಅದರೊಟ್ಟಿಗೆ ಬೇಕಾಬಿಟ್ಟಿ ಚಾಲನೆ ಬೇರೆ....

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...

VIDEO| ಜೆಎನ್​ಯು ವಿದ್ಯಾರ್ಥಿಗಳ ಹೆಸರಿನಲ್ಲಿ ವೈರಲ್​ ಆಗಿದ್ದ ವಿಡಿಯೋದ ಅಸಲಿಯತ್ತು...

ನವದೆಹಲಿ: ಪಾಕಿಸ್ತಾನದ ಲಾಹೋರ್​​ನಲ್ಲಿ ನಡೆದಿದ್ದ ಫೈಜ್​ ಸಾಹಿತ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಕೂಗಿದ್ದ "ಆಜಾದಿ" ಘೋಷಣೆಯ ವಿಡಿಯೋವನ್ನು ದೆಹಲಿಯ ಜವಹರ್​ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್​ಯು)ದ ವಿದ್ಯಾರ್ಥಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಶೇರ್​ ಮಾಡಲಾಗಿದೆ. "ಜೆಎನ್​ಯು...

VIDEO| ಮೀಮ್ಸ್​ ವಿಡಿಯೋ ಹರಿಬಿಡುವ ಮೂಲಕ ಸೋದರ ರಮೇಶ್​ ಜಾರಕಿಹೊಳಿಗೆ...

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆಯ ಕದನ ತೀವ್ರ ಕುತೂಹಲ ಮೂಡಿಸಿದೆ. ಸಹೋದರರ ನಡುವಿನ ಜಿದ್ದಾಜಿದ್ದಿಯೇ ಅದಕ್ಕೆ ನೇರ ಕಾರಣವಾಗಿದೆ. ಕಾಂಗ್ರೆಸ್​ಗೆ ಗುಡ್​ಬೈ ಹೇಳಿ ಬಿಜೆಪಿ ಸೇರಿಕೊಂಡಿರುವ ಸೋದರ ರಮೇಶ್​ ಜಾರಕಿ...