ದಿಗ್ವಿಜಯದಲ್ಲಿ ವಿಜಯಪಥ

ಬೆಂಗಳೂರು: ಸುಪ್ರಸಿದ್ಧ ಉದ್ಯಮಿ, ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು 69ನೇ ವಸಂತಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿ ಅವರ ಜೀವನಗಾಥೆಯನ್ನು ವಿವರಿಸುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ದಿಗ್ವಿಜಯ 247 ನ್ಯೂಸ್ ಚಾನೆಲ್​ನಲ್ಲಿ ಇಂದು (ಆಗಸ್ಟ್ 3) ರಾತ್ರಿ 9ಕ್ಕೆ ಮರುಪ್ರಸಾರವಾಗಲಿದೆ.

2017ರಲ್ಲಿ ಪ್ರಸಿದ್ಧ ನಟ ರಮೇಶ್ ಅರವಿಂದ್ ಅವರು ಡಾ. ವಿಜಯ ಸಂಕೇಶ್ವರರ ಯಶೋಗಾಥೆಯನ್ನು ಝೀ ಕನ್ನಡ ವಾಹಿನಿಯಲ್ಲಿ ನಡೆಸಿಕೊಟ್ಟ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ವಿವರವಾಗಿ ಪರಿಚಯಿಸಿದ್ದರು. ಅಭಿಮಾನಿಗಳು, ಸ್ನೇಹಿತರು, ವಿಆರ್​ಎಲ್ ಸಮೂಹ ಸಂಸ್ಥೆಗಳ ಸಿಬ್ಬಂದಿ ಸೇರಿ ಹಲವರು ಸಂಕೇಶ್ವರರ ಸಹೃದಯಿ ವ್ಯಕ್ತಿತ್ವವನ್ನು ವಿವರಿಸಿದ್ದರು. ಈ ಎಪಿಸೋಡ್ ಅಪಾರ ಸಂಖ್ಯೆಯ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.