ಬಸ್ ದರ ಏರಿಕೆ ಕೈಬಿಡಲು ಆಗ್ರಹಿಸಿ ಸಿಪಿಐ (ಎಂ) ಕಾರ್ಯಕರ್ತರ ಪ್ರತಿಭಟನೆ

blank

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಮೊದಲೇ ರಾಜ್ಯದ ಜನರು ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ಸರ್ಕಾರ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡಿ ಮತ್ತೊಂದು ಬರೆ ಹಾಕುವುದು ನಿಲ್ಲಿಸಿ, ಕೂಡಲೇ ದರ ಏರಿಕೆ ಕೈಬಿಡಬೇಕು ಎಂದು ಆಗ್ರಹಿಸಿ ನಗರದಲ್ಲಿ ಸೋಮವಾರ ಸಿಪಿಐ (ಎಂ) ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಸರ್ಕಾರ ತನ್ನ ನಿರ್ಧಾರ ಮರುಪರಿಶೀಲಿಸಲು ಒಕ್ಕೋರಲಿನಿಂದ ಒತ್ತಾಯಿಸಿದರು.
ನಗರದ ಕನ್ನಡ ಭವನದಲ್ಲಿ ಜಮಾಗೊಂಡ ಕಾರ್ಯಕರ್ತರು ಅಲ್ಲಿಂದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆ ಮೂಲಕ ಆಗಮಿಸಿ ಸುಮಾರು ಹೊತ್ತು ಪ್ರತಿಭಟನಾ ಪ್ರದರ್ಶನ ನಡೆಸಿ, ಸರ್ಕಾರದ ನಡೆ ಹಾಗೂ ನಿರ್ಧಾರ ಖಂಡಿಸಿ,ಆಕ್ರೋಶ ವ್ಯಕ್ತಪಡಿಸಿದರು.
ಡಿಸೆಲ್ ದರ ಹೆಚ್ಚಳವಾಗಿದೆ, ಸಿಬ್ಬಂದಿ ವೇತನ ಹಾಗೂ ನಿರ್ವಹಣೆ ವೆಚ್ಚ ಹೆಚ್ಚಳದ ನೆಪವೊಡ್ಡಿ ಬಸ್ ದರ ಹೆಚ್ಚಳ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಪಕ್ಷದ ಕಾರ್ಯದರ್ಶಿ ಕೆ.ನೀಲಾ, ಹೋರಾಟಗಾರ್ತಿ ಡಾ.ಮೀನಾಕ್ಷಿ ಬಾಳಿ ಕಿಡಿಕಾರಿದರು. ಸಾರ್ವಜನಿಕ ಸಾರಿಗೆಯಾಗಿರುವುದರಿಂದ ಲಾಭವನ್ನು ನೋಡದೆ, ಜನರಿಗೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಕೂಡಲೇ ಬಸ್ ಪ್ರಯಾಣ ದರ ಏರಿಕೆ ರದ್ದುಗೊಳಿಸಿ ಆದೇಶ ಹೊರಡಿಸುವಂತೆ ಒತ್ತಾಯಿಸಲಾಯಿತು. ಪ್ರತಿಭಟನೆಯಲ್ಲಿ ಮುಖಂಡರಾದ ರಮೇಶ ಹೀರಾಪುರ,ಭೀಮಶೆಟ್ಟಿ ಯಂಪಳ್ಳಿ, ಮೇಘರಾಜ ಕಠಾರೆ, ಶ್ರೀಮಂತ ಬಿರಾದಾರ್, ಡಾ.ಪ್ರಭು ಖಾನಾಪುರೆ, ಸುಧಾಮ ಧನ್ನಿ, ಪಾಂಡುರAಗ ಮಾವಿನಕರ್, ಸುಭಾಷ ಹೊಸ್ಮನಿ, ಸಲ್ಮಾನಖಾನ್, ನಾಗಯ್ಯ ಸ್ವಾಮಿ, ಗುರು ಚಾಂದಕವಟೆ, ಲವಿತ್ರಾ ವಸ್ತçದ, ಕೋದಂಡರಾಮಪ್ಪ, ಭೀಮನಗೌಡ ನಾಕಶೇರ್, ಶೀಲಾದೇವಿ, ನಾಗಪ್ಪ ರಾಯಚೂರುಕರ್,ಕಾಶಿನಾಥ ಬಂಡೆ, ದಿಲ್‌ಶಾದ್ ಚುಡಿವಾಲೆ, ರಾಜಕುಮಾರ, ಸುಜಾತಾ ವೈ ಇತರರಿದ್ದರು.

Share This Article

ಪ್ರಿ-ಡಯಾಬಿಟಿಸ್​ ಇರುವವರು ಈ ಆಹಾರದಿಂದ ಅಂತರ ಕಾಯ್ದುಕೊಳ್ಳಿ; ಮಿಸ್​ ಆದ್ರೆ ಅಪಾಯ ತಪ್ಪಿದ್ದಲ್ಲ | Health Tips

ಇಂದಿನ ಕಾಲದಲ್ಲಿ ಮಧುಮೇಹವು ಒಂದು ಸಾಮಾನ್ಯ ಸಮಸ್ಯೆಯಾಗಿದ್ದು ಅದನ್ನು ಗುಣಪಡಿಸಲಾಗದು. ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯ ಜನರು…

ಕಣ್ಣಿನ ಸುತ್ತಲಿನ ಕಪ್ಪು ಕಲೆಗಳು ಏನನ್ನೂ ಸೂಚಿಸುತ್ತದೆ; ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips

ಕಪ್ಪು ಕಣ್ಣು(Black Eye) ಎಂಬುದು ಕಣ್ಣು ಅಥವಾ ಸುತ್ತಮುತ್ತಲಿನ ಅಂಗಾಂಶಗಳಿಗೆ ಗಾಯದ ನಂತರ ಕಣ್ಣಿನ ಸುತ್ತ…

ಸೇಬು ಹಣ್ಣು ತಿಂದ ತಕ್ಷಣ ನೀರು ಕುಡಿಯಬಾರದು! Apple ತಿಂದು ಯಾಕೆ ನೀರು ಕುಡಿಯಬಾರದು ಗೊತ್ತಾ?

Apple: ಸಾಮಾನ್ಯವಾಗಿ ದಿನಕ್ಕೆ ಒಂದು ಸೇಬು ಹಣ್ಣು ತಿಂದರೆ ವೈದ್ಯರ ಬಳಿಗೆ ಹೋಗುವ ಅಗತ್ಯವಿಲ್ಲ ಎಂದು…