ಮಂಡ್ಯ ಬಸ್​ ದುರಂತ: 8 ಮಂದಿಯ ಸಾಮೂಹಿಕ ಅಂತ್ಯ ಸಂಸ್ಕಾರ

ಮಂಡ್ಯ: ಮಂಡ್ಯದ ಪಾಂಡವಪುರದ ಕನಗನಮರಡಿಯಲ್ಲಿ ಶನಿವಾರ ಸಂಭವಿಸಿದ ಬಸ್​ ದುರಂತದ ವೇಳೆ ಸಾವಿಗೀಡಾದ ಮೂವತ್ತು ಮಂದಿಯ ಪೈಕಿ ವದೇಸಮುದ್ರದ 8 ಮಂದಿಯನ್ನು ಇಂದು ಸಾಮೂಹಿಕವಾಗಿ ಅಂತ್ಯ ಸಂಸ್ಕಾರ ಮಾಡಲಾಯಿತು.

ಗ್ರಾಮದ ಹೊರವಲಯದಲ್ಲಿ ಅಂತ್ಯ ಸಂಸ್ಕಾರ ಕಾರ್ಯ ನೆರವೇರಿತು. ಈ ವೇಳೆ ಮೃತರ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.
ಶನಿವಾರ ನಡೆದ ದುರಂತದಲ್ಲಿ ವದೆ ಸಮುದ್ರದ ಗ್ರಾಮದ 8 ಮಂದಿ ಪ್ರಾಣಕಳೆದುಕೊಂಡಿದ್ದರು.