ಮಂಡ್ಯ ಬಸ್​​ ದುರಂತ: ತಲೆಮರೆಸಿಕೊಂಡಿದ್ದ ಚಾಲಕನಿಗೆ ನ್ಯಾಯಾಂಗ ಬಂಧನ

ಮಂಡ್ಯ: ಕನಗನಮರಡಿ ಬಳಿ ಬಸ್ ದುರಂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಸ್​ ಚಾಲಕ ಹೊಳಲು ಶಿವಣ್ಣನನ್ನು ನಿನ್ನೆ ಪೊಲೀಸರು ಬಂಧಿಸಿದ್ದು ಇಂದು ನ್ಯಾಯಾಂಗ ಬಂಧನ ಒಪ್ಪಿಸಿದ್ದಾರೆ.

ನ.24ರಂದು ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ವಿ.ಸಿ. ನಾಲೆಗೆ ಖಾಸಗಿ ಬಸ್ ಉರುಳಿ 30 ಮಂದಿ ಜಲಸಮಾಧಿಯಾಗಿದ್ದರು. ಎಳೆಯ ಮಕ್ಕಳೂ ಮೃತಪಟ್ಟಿದ್ದರು. ಅದಾದ ಬಳಿಕ ಬಸ್​ ಚಾಲಕ ಶಿವಣ್ಣ ತಲೆಮರೆಸಿಕೊಂಡಿದ್ದ. ಪೊಲೀಸರು ನಿನ್ನೆ ಪಾಂಡವಪುರ ಬಳಿ ಶಿವಣ್ಣನನ್ನು ಬಂಧಿಸಿದ್ದರು.

ನಾಲೆಗೆ ತಡೆಗೋಡೆ
ದುರಂತ ನಡೆದ 15 ದಿನಗಳ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು ನಾಲೆಗೆ ತಡೆಗೋಡೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ. ತಡೆಗೋಡೆ ಇಲ್ಲದರಿರುವುದೇ ದುರಂತಕ್ಕೆ ಮುಖ್ಯ ಕಾರಣ ಎಂದು ಆರ್​ಟಿಒ ಪ್ರಾಥಮಿಕ ವರದಿಯಲ್ಲಿ ಹೇಳಿತ್ತು. ಈ ನಿಟ್ಟಿನಲ್ಲಿ ವಿಸಿ ನಾಲೆಗೆ ತಡೆಗೋಡೆ ನಿರ್ಮಾಣ ಕಾರ್ಯ ನಿನ್ನೆಯಿಂದಲೇ ಪ್ರಾರಂಭವಾಗಿದೆ.

30 ಮಂದಿ ಜಲಸಮಾಧಿ