ಬಸ್​ ಎದುರು ಮಲಗಿ ಪ್ರತಿಭಟನೆ ನಡೆಸಿದ ಮಹಿಳೆ: ಕಲ್ಲು ತೂರಾಟ, ಅಂಗಡಿಗಳು ಬಂದ್​

ಕೊಪ್ಪಳ: ಇಲ್ಲಿನ ಬಸ್​ನಿಲ್ದಾಣದಲ್ಲಿ ಮಹಿಳಾ ಹೋರಾಟಗಾರರು ಮುಷ್ಕರದಲ್ಲಿ ತೊಡಗಿಕೊಂಡಿದ್ದು ಮಹಿಳೆಯೋರ್ವರು ವಿನೂತನವಾಗಿ ಪ್ರತಿಭಟನೆ ನಡೆಸಿ ಬಸ್​ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ.

ಕುಷ್ಟಗಿ ಕೆಇಬಿ ವೃತ್ತದಲ್ಲಿ ಬಸ್​ ಎದುರು ಮಲಗಿದ ಮಹಿಳೆ ಬಸ್​ ಸಂಚಾರ ಮಾಡದಂತೆ ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಬಸ್​ಗಳನ್ನೆಲ್ಲ ಚಾಲಕರು ವಾಪಸ್​ ಡಿಪೋಗೆ ತೆಗೆದುಕೊಂಡು ಹೋಗಿದ್ದಾರೆ.

ಗಂಗಾವತಿಯಲ್ಲಿ ಪ್ರತಿಭಟನಾಕಾರರು ಒತ್ತಾಯಪೂರ್ವಕವಾಗಿ ಅಂಗಡಿಗಳನ್ನು ಬಂದ್​ ಮಾಡುತ್ತಿದ್ದಾರೆ. ಬಸ್​ ಸಂಚಾರ ಮಾಡಿಸಿದರೆ ಕಲ್ಲುತೂರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ ಕೊಪ್ಪಳದಿಂದ ಹೈದರಾಬಾದ್​ಗೆ ತೆರಳುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ ಮೇಲೆ ಕಲ್ಲುತೂರಾಟ ಮಾಡಲಾಗಿದ್ದು ಹಿಂಬದಿಯ ಗ್ಲಾಸ್​ ಒಡೆದಿದೆ.