More

    ರಾಜ್ಯದಲ್ಲಿ ಮತ್ತೊಂದು ಬಸ್​ ಅಪಘಾತ; 40 ಮಂದಿ ಪ್ರಯಾಣಿಕರಿದ್ದ KKRTC ಬಸ್ ಪಲ್ಟಿ

    ಕಲಬುರಗಿ: ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು ಪಲ್ಟಿಯಾಗಿ ಹಲವರು ಗಾಯಗೊಂಡಿರುವ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಕಾಳಗಿ ಬಳಿ ನಡೆದಿದೆ.

    40 ಮಂದಿ ಪ್ರಯಾಣಿಕರನ್ನು ಹೊತ್ತು ಚಿಂಚೋಳಿ ಕಡೆಯಿಂದ ಬೆಂಗಳೂರಿಗೆ ಹೊರಟ್ಟಿದ್ದ ಬಸ್​ ಕಾಳಗಿ ಬಳಿ ಪಲ್ಟಿಯಾಗಿದೆ. ಘಟನೆಯಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿವೆ.

    KKRTC Bus
    ಪಲ್ಟಿಯಾದ ಬಸ್​

    ಇದನ್ನೂ ಓದಿ: ಬರೀ ತಳ್ಳಿದ್ದಕ್ಕೇ ಸತ್ಹೋದ್ಲು ಪ್ರಿಯತಮೆ; ಗಾಬರಿಯಲ್ಲಿ ಮತ್ತೆ ಕತ್ತು ಸೀಳಿದ ಪ್ರಿಯಕರ!

    ಈ ಕುರಿತು ಪ್ರತಿಕ್ರಿಯಿಸಿರುವ​ ಅಧಿಕಾರಿ ಒಬ್ಬರು ಚಿಂಚೋಳಿ ಕಡೆಯಿಂದ ಬೆಂಗಳೂರಿನತ್ತ ಹೊರಟ್ಟಿದ್ದ ಬಸ್​ ಕಾಳಗಿ ಬಳಿ ಪಲ್ಟಿಯಾಗಿದೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು ಒಬ್ಬರಿಗೆ ಕಣ್ಣು ಹಾಗೂ ಇನ್ನೊಬ್ಬರ ಕಾಲಿಗೆ ಗಂಭಿರವಾಗಿ ಗಾಯವಾಗಿದೆ.

    ರಟ್​ಕಲ್​ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ. ಬಸ್​ ಪಲ್ಟಿಯಾಗಲು ಕಾರಣ ಏನು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts